ಅಂಗಡಿಗೆ ಶಟರ್ ಎಷ್ಟು ಸೇಫ್ ? ಕಳ್ಳರು ಈ ವಿಡಿಯೋದಲ್ಲಿ ಶಟರ್ ಓಪನ್ ಮಾಡುವ ಈಜಿ ಫಾರ್ಮ್ಯಾಟ್ ಯೂಸ್ ಮಾಡಿದ್ದು ಹೇಗೆ ನೋಡಿ…
ಅಂಗಡಿಗೆ ಎಷ್ಟೇ ಸೇಫ್ ಇಟ್ಟುಕೊಳ್ಳಲು ಪ್ರಯತ್ನಿಸಿದರೂ ಕಳ್ಳರು ಏನಾದರೂ ಚಾಲಾಕಿ ಮಾಡಿ ಕಳ್ಳತನ ಮಾಡಿಯೇ ಬಿಡುತ್ತಾರೆ. ಅಂಗಡಿಗೆ ಕನ್ನ ಹಾಕಿಯೇ ಬಿಡುತ್ತಾರೆ. ಯಾಕೆಂದರೆ ಈಗಿನ ಕಳ್ಳರು ತುಂಬಾ ಅಡ್ವಾನ್ಸ್ ಆಗಿದ್ದಾರೆ. ಅಂಗಡಿಯು ಕಳ್ಳತನವಾಗಬಾರದೆಂದು ಎಷ್ಟೇ ಪ್ರೀ ಪ್ಲಾನ್ ಮಾಡಿದರೂ ಕಳ್ಳತನ ಮಾಡುವವರು ಅವರಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ.
ಹೆಚ್ಚಾಗಿ ಅಂಗಡಿಗಳಿಗೆ ನಾವು ಪಟ್ಟಣಗಳಲ್ಲಿ ಸದ್ಯಕ್ಕೆ ಹಳ್ಳಿಗಳಲ್ಲಿಯೂ ಶಟರ್ ಗಳನ್ನು ಯೂಸ್ ಮಾಡುವದನ್ನು ನೋಡುತ್ತೇವೆ. ಶಟರ್ ಯೂಸ್ ಮಾಡುವುದರಿಂದ ಅಂಗಡಿ ತುಂಬಾ ಸೇಫ್ ಆಗಿರುತ್ತದೆ ಎಂಬ ನಂಬಿಕೆ ನಮಗಿರುತ್ತದೆ. ಆದರೆ ಈಗ ಇಲ್ಲಿ ನೋಡುವ ವಿಡಿಯೋದಿಂದ ಶಟರ್ ಸುರಕ್ಷಿತವಾಗಿದೆ ಅಥವಾ ಇಲ್ಲ ಎಂಬುದನ್ನು ತಿಳಿಸಿಕೊಡುತ್ತದೆ.
ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ಒಂದು ಅಂಗಡಿಯ ಮುಂದೆ ನಾಲ್ಕೈದು ಜನರು ಕಳ್ಳರು ಬಂದಿದ್ದಾರೆ. ಕಳ್ಳರು ಬಂದು ಮೊದಲು ಸ್ವಲ್ಪ ಅತ್ತಿತ್ತ ನೋಡಿ ವಾತಾವರಣದ ಅಂದಾಜು ತೆಗೆದುಕೊಳ್ಳುತ್ತಾರೆ. ತದನಂತರ ಶಟರ್ ಗೆ ಇರುವ ಹ್ಯಾಂಡಲ್ ಹಿಡಿದು ಶಟರ್ ಎತ್ತಲು ಪ್ರಯತ್ನಿಸುತ್ತಾರೆ. ಅದು ಆಗದಿದ್ದಾಗ ಅವರು ತಂದಿರುವ ಒಂದು ಬಟ್ಟೆಯನ್ನು ಹ್ಯಾಂಡಲ್ ನಲ್ಲಿ ತೂರಿಸಿ ಮೂವರು ಕೂಡಿ ಬಟ್ಟೆಯನ್ನು ಹಿಡಿದು ಎತ್ತಿದಾಗ ಶಟರ್ ಸಹಜವಾಗಿ ಮೇಲೆ ಬರುತ್ತಿರುವದು ಕಂಡು ಬರುತ್ತದೆ.
ಈಗ ಹೇಳಿ ಶಟರ್ ಎಷ್ಟು ಸೇಫ್ ಅಂತ? ನೋಡಿ ಈ ವಿಡಿಯೋ…
View this post on Instagram
ಈ ವೀಡಿಯೋವನ್ನು giedde ಹೆಸರಿನ ಅಕೌಂಟ್ ನಿಂದ ಶೇರ್ ಮಾದಲಾಗಿದ್ದು ಈ ವೀಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ಲೈಕ್ ಮಾಡಿದ್ದಾರೆ.