ಅಂಗಡಿಯ ಮುಂದೆ ಲಂಗರ್ ಮುಖಾಂತರ ಹಸಿದವರಿಗೆ ಅನ್ನ ನೀಡುತ್ತಿದ್ದರು ಸೋನು ಅವರ ತಂದೆ, ತಾಯಿಯು ಮಕ್ಕಳಿಗೆ ಉಚಿತ ಪಾಠ ಮಾಡುತ್ತಿದ್ದರು.
ಸೋನುಸೂದ್ ಅವರು ಬಸ್, ವಿಮಾನ ಹಾಗೂ ರೈಲ್ವೆ ಮುಖಾಂತರ ಇದುವರೆಗೆ ಸುಮಾರು ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ವಲಸೆ ಕಾರ್ಮಿಕರನ್ನು ತಮ್ಮ ಮನೆಗೆ ಕಳುಹಿಸಿದ್ದಾರೆ. ಸೋನು ಸೂದ್ ಅವರು ಭಾರತದ ಎಷ್ಟೋ ಜನರ ಕಣ್ಣಲ್ಲಿ ಒಬ್ಬ ದೇವರಂತೆ ಅಚ್ಚಳಿಯದೇ ಕುಳಿತಿದ್ದಾರೆ. ಕರೋನಾದಿಂದ ನಮ್ಮ ದೇಶದಲ್ಲಿ ಐದು ಹಂತದಲ್ಲಿ ಲಾಕ್ಡೌನ್ ವಿಸ್ತರಿಸಲಾಗಿತ್ತು. ಮೊದಲನೆಯ ಲಾಕ್ಡೌನ್ ಪ್ರಾರಂಭವಾದಾಗ ವಲಸೆ ಕಾರ್ಮಿಕರು ತಮ್ಮ ಮನೆಯ ಕಡೆಗೆ ತೆರಳಲು ಪ್ರಾರಂಭ ಮಾಡಿದರು. ವಲಸೆ ಕಾರ್ಮಿಕರಿಗೆ ತಮ್ಮ ಊರಿಗೆ ಹೋಗುವ ಸಲುವಾಗಿ ಯಾವುದೇ ಸಾರಿಗೆ ಸೌಲಭ್ಯವಿಲ್ಲದ ಕಾರಣ ನಡೆದುಕೊಂಡು ಹೋಗಲು ಪ್ರಾರಂಭ ಮಾಡಿದರು. ಇದನ್ನು ಕಂಡ ಸೋನು ಸೂದ್ ಅವರು ಒಂದು ವಲಸೆ ಕುಟುಂಬ ನಡೆದುಕೊಂಡು ಹೋಗುವದನ್ನು ನಿರೀಕ್ಷಣೆ ಮಾಡಿದರು ಅವರ ಕಷ್ಟಗಳನ್ನು ಕಂಡು ಸಹಿಸಿಕೊಳ್ಳಲಾಗದೆ ಸೋನು ಸೂದ್ ಅವರು ವಲಸೆ ಕಾರ್ಮಿಕರನ್ನು ಅವರ ಮನೆಗೆ ಸುರಕ್ಷಿತವಾಗಿ ತಲುಪಿಸುವ ಕಾರ್ಯವನ್ನು ಕೈಗೊಂಡರು. ಮೊದಲು 350 ಜನರನ್ನು ತಲುಪಿಸಿದರು. ಹಾಗೇ ದಿನದಿಂದ ದಿನಕ್ಕೆ ಈ ಸಂಖ್ಯೆಯಲ್ಲಿ ಹೆಚ್ಚಳವಾಗಿ ಇಂದು ಸುಮಾರು 17 ರಿಂದ 18 ಸಾವಿರ ಜನರನ್ನು ತಮ್ಮ ಮನೆಗೆ ಕಳುಹಿಸಿದ್ದಾರೆ.

ಇಂದು ಸೋನು ಸೂದ್ ಅವರನ್ನು ಇಡೀ ಜಗತ್ತೇ ಕೊಂಡಾಡುತ್ತಿದ್ದರೆ, ಸೋನು ಸೂದ್ ಅವರ ಹೇಲುವದೇನೆಂದರೆ, “ನಮ್ಮ ತಂದೆಯು ಸಹ ಸಮಾಜ ಸೇವೆ ಮಾಡುವಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಅವರು ಒಂದು ಬಟ್ಟೆಯ ಅಂಗಡಿಯ ಮುಂದೆ ನಿಂತುಕೊಂಡು ಲಂಗರ್ ದ ಮಾಧ್ಯಮದಿಂದ ಹಸಿದವರಿಗೆ ಅನ್ನ ನೀಡುತ್ತಿದ್ದರು. ಅಲ್ಲದೆ ತಾಯಿ ಪ್ರೋಫೆಸರ್ ಆಗಿದ್ದರೂ ಮಕ್ಕಳಿಗೆ ಮುಕ್ತವಾಗಿ ಶಿಕ್ಷಣ ನೀಡುತ್ತಿದ್ದರು. ಒಳ್ಳೆಯ ಕರ್ಮದ ಫಲ ಒಂದಲ್ಲ ಒಂದು ದಿವಸ ಸಿಕ್ಕೇ ಸಿಗುವದು. ಯಾವುದೇ ಉತ್ತಮ ಕಾರ್ಯ ಮಾಡುವಾಗ ಅದರ ಫಲದ ನಿರೀಕ್ಷೆ ಮಾಡದೆ ಆ ಕಾರ್ಯ ಮಾಡಬೇಕು ಅದರ ಫಲ ತಾನಾಗಿಯೇ ಬರುವದು. ನಮ್ಮ ತಾಯಿ ತಂದೆಯರ ಕರ್ಮದ ಫಲವೇ ಇಂದು ನನಗೆ ದೊರಕಿದೆ. ನನ್ನ ಪತ್ನಿಯು ಸಹ ಹಲವಾರು ಸ್ವಯಂ ಸಂಸ್ಥೆಗಳ ಕಾರ್ಯದಲ್ಲಿ ಸಹಭಾಗಿತ್ವ ತಗೆದುಕೊಳ್ಳುತ್ತಾಳೆ. ಈ ಪ್ರಕಾರದ ಸಾಮಾಜಿಕ ಕಾರ್ಯ ಪ್ರತಿಯೊಬ್ಬರು ಅವಶ್ಯಕವಾಗಿ ಮಾಡಲೇಬೇಕು. ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸುವ ಕಾರ್ಯದಲ್ಲಿ ಇಂದಿಗೂ ಸಹ ನನ್ನ ಪತ್ನಿ ಹಾಗೂ ನನ್ನ ಮಗಳು ಸಹ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರು ಕಾರ್ಮಿಕರ ಲಿಸ್ಟ್ ಮಾಡುವದು ಹಾಗೂ ಅವರ ಬಸ್ ವ್ಯವಸ್ಥೆಯ ಯೋಜನೆ ಮಾಡುವರು. ಕೆಲವೊಮ್ಮೆ 2 ರಿಂದ 3 ದಿನಗಳ ವರೆಗೆ ಹಗಲು ರಾತ್ರಿ ಮಲಗಲು ಸಾಧ್ಯವೇ ಆಗಿಲ್ಲ.

ನನಗೆ ಕೆಲವು ಪ್ರೊಡ್ಯೂಸರ್ ಗಳ ಕರೆ ಮಾಡಿ ಸೋನು ಸೂದ್ ಇಂದು ನಿನ್ನಿಂದ ನಮ್ಮ ಇಂಡಸ್ಟ್ರಿಜ್ ಗೆ ತುಂಬಾ ಹೊಗಳಿಕೆ ಬಂದಿದೇ. ನಾನು ಒಂದು ಉದ್ದೇಶದಿಂದ ಈ ಕಾರ್ಯ ಮಾಡಲು ಪ್ರಾರಂಭಿಸಿದೆ ಆದ್ರೆ ಈ ಕಾರ್ಯ ಇಷ್ಟರ ಮಟ್ಟಿಗೆ ತಲುಪುವದು ಎಂಬುದು ನಾನು ಕನಸಿನಲ್ಲಿಯೂ ಅಂದುಕೊಂದಿರಲಿಲ್ಲ. ನಾನು ಮೊಟ್ಟ ಮೊದಲು ಮುಂಬೈಗೆ ಬಂದ ಸಮಯದಲ್ಲಿ ನನ್ನ ಹತ್ತಿರ ರಿಜರ್ವೇಶನ ಟಿಕೆಟ್ ಸಹ ಇರಲಿಲ್ಲ, ಜನರಲ್ ಟಿಕೆಟ್ ನಲ್ಲಿ ಬಂದಿದ್ದೆ. ನಾನು ಎಷ್ಟೋ ಕನಸುಗಳನ್ನು ಇಟ್ಟುಕೊಂಡು ಬಂದಿದ್ದೆ ಆದರೆ ಇಂದು ನನಗೆ ಆ ಕನಸು ನಿಜವಾಗಿದೆ ಎಂದೆನಿದೆ. ಈ ಪ್ರಕಾರ ಸೋನು ಸೂದ್ ಹೇಳಿದ್ದಾರೆ. ತಾವು ಈ ಮಟ್ಟಕ್ಕೆ ತಲುಪಲು ತಮ್ಮ ತಂದೆ-ತಾಯಿಯರ ಕರ್ಮವೇ ಇದಕ್ಕೆ ಕಾರಣ ಎಂದಿದ್ದಾರೆ.