ಅಂತ್ಯ ಸಂಸ್ಕಾರದ ಸಮಯ ಮೃತವ್ಯಕ್ತಿ ಮಾಡಿದನು ಬಾಯ್ ಬಾಯ್! ಮುಂದೇನಾಯಿತು?
ಜಕಾರ್ತಾ: ಮೃತನಾದ ವ್ಯಕ್ತಿಯಲ್ಲಿ ಸ್ವಲ್ಪ ಚಲನವಲನ ಕಂಡು ಬಂದರೂ ಅಲ್ಲಿದ್ದವ ಅವಸ್ಥೆ ಏನಾಗುತ್ತದೆ ಎಂದು ಸ್ವಲ್ಪ ವಿಚಾರ ಮಾಡಿದರೂ ಮೈಯೆಲ್ಲ ಬೆವರು ಬರುತ್ತದೆ. ಇಂತಹದೇ ಒಂದು ಘಟನೆ ಇಂಡೋನೇಷಿಯಾದ ರಾಜಧಾನಿ ಜಕಾರ್ತಾದಲ್ಲಿ ನಡೆದಿದೆ. ಸ್ಮಶಾನಭೂಮಿಯಲ್ಲಿ ಅಂತ್ಯವಿಧಿ ನಡೆದಿರುವಾಗ ಮೃತದೇಹವು ಎಲ್ಲರಿಗೂ ಕೈಮಾಡಿ ಬಾಯ್ ಬಾಯ್ ಮಾಡಿದಂತಹ ಸೀನ್ ಕಂಡು ಅಲ್ಲಿದ್ದವರೆಲ್ಲ ಗಾಬರಿಯಾಗಿ ಮೂರ್ಛೆ ಹೋಗುವದೊಂದೆ ಬಾಕಿ ಇತ್ತು.
‘ದ ಸನ್’ ವರದಿಯ ಪ್ರಕಾರ ಮೃತದೇಹವನ್ನು ಎತ್ತಿ ಗುಂಡಿಯಲ್ಲಿ ಇಟ್ಟಾಗ, ಆತ ಕೈಯನ್ನು ಅಲುಗಾಡಿಸಿದ್ದಾನೆ. ಆ ಸಮಯದಲ್ಲಿ ಅಲ್ಲಿರುವವರು ಯಾರು ಗಮನಿಸಿಲ್ಲ. ನಂತರ ವಿಡಿಯೋ ನೋಡಿದಾಗ ಈ ಚಲನವಲನೆ ಗಮನಕ್ಕೆ ಬಂದು ಎಲ್ಲರಿಗೂ ಧಕ್ಕೆಯಾಗಿದೆ. ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ಮಾತ್ರ ವೈರಲ್ ಆಗಿದೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದವರಿಗೆ ನಾವು ಒಬ್ಬ ಜೀವಂತ ವ್ಯಕ್ತಿಗೇನಾದರೂ ಅಂತ್ಯಕ್ರಿಯೆ ನೆರವೇರಿಸಿ ಬಂದಿದ್ದೇವಾ ಎಂಬ ಅಪರಾಧಿತನ ಕಾಡುತ್ತಿದೆ.
ತಜ್ಞರು ಹೇಳುವ ಪ್ರಕಾರ ಮೃತದೇಹ ಸೆಳೆತಕ್ಕೆ ಒಳಗಾಗಿ ಕೆಲವೊಂದು ಸಲ ಈ ಪ್ರಕಾರದ ಚಲನೆವಲನೆಗಳು ಸಂಭವಿಸುತ್ತಿರುತ್ತವೆ. ಮೃತ್ಯುವಿನ ನಂತರ 72 ಗಂಟೆಗಳವರೆಗೆ ಮಾಂಸಖಂಡಗಳು ಸೆಳೆತಕ್ಕೆ ಒಳಗಾಗಿ ಕೈ ಅಲುಗಾಡಿರಬಹುದು ಎಂಬ ವಿಚಾರವನ್ನು ವ್ಯಕ್ತ ಮಾಡಿದ್ದಾರೆ.
Viral video shows shocking moment corpse appears to wave to mourners through coffin's glass panel
— Laila Ijeoma | Lailasnews.com (@LailaIjeoma) May 13, 2020
This happened during a Christian service in the city of Manado in North Sulawesi, Indonesia. pic.twitter.com/i8lQo9WikQ
ಹೀಗೆ ಇದೆ ಮೊದಲಲ್ಲ, ಇಂಥ ಪ್ರಕರಣಗಳು ಮೊದಲು ಸಹ ಕಂಡು ಬಂದಿವೆ. 2011 ರಲ್ಲಿ ರಶಿಯಾದಲ್ಲಿ ನಡೆದ ಒಂದು ಘಟನೆಯ ಪ್ರಕಾರ ಮಹಿಳೆಯೊಬ್ಬಳು ಹೃದಯಾಘಾತದಿಂದ ಮೃತಳಾಗಿದ್ದಳು. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಆಕೆ ಒಮ್ಮೆಲೇ ಚೀರಿದ್ದನ್ನು ನೋಡಿ ಪುನಃ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೆಂಟಿಲೇಟರ್ ಮೇಲಿಟ್ಟರು. ಆದರೆ ಬರೀ 12 ನಿಮಿಷಗಳಲ್ಲಿಯೇ ಪ್ರಾಣ ಬಿಟ್ಟಳು. ಡಾಕ್ಟರ್ ಮೊದಲು ಆಕೆ ಮೃತಪಟ್ಟಿರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು.
ಇದೆ ರೀತಿ 2018 ರಲ್ಲಿ ಆಫ್ರಿಕನ್ ಮಹಿಳೆಯ ಜೊತೆಗೂ ಹೀಗೆ ಆಗಿತ್ತು. ಮಹಿಳೆ ಮೃತಳಾಗಿದ್ದಾಳೆಂದು ತಿಳಿದು ಆಕೆಯನ್ನು ಮಾರ್ಚರಿಯಲ್ಲಿಟ್ಟಿದ್ದರು. ಅವಳು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಳು. ಡಾಕ್ಟರ್ ಆಕೆಯನ್ನು ಮೃತ ಎಂದು ಘೋಷಿಸಿ ಶವಾಗಾರದಲ್ಲಿರಿಸಿದ್ದರು. ಅಲ್ಲಿ ಕೆಲಸ ಮಾಡುವವನಿಗೆ ಏನೋ ಸಂಶಯ ಬಂದು ಆಕೆಯ ತಪಾಸಣೆ ಮಾಡಲಾಗಿ ಮಹಿಳೆಯ ಶ್ವಸನಕ್ರಿಯೆ ನಡೆದಿತ್ತು. ನಂತರ ಆ ಮಹಿಳೆಗೆ ಉಪಚಾರದಿಂದ ಜೀವ ಸಹಿತ ಉಳಿಸಲಾಯಿತು.