ಅಂದು ಕೊಲ್ಕತ್ತಾದ ಬೀದಿ ಬೀದಿ ಸುತ್ತಿ ಸೀರೆ ಮಾರುತ್ತಿದ್ದ ಈ ವ್ಯಕ್ತಿ ಇಂದು 50 ಕೋಟಿಯ ಉದ್ಯಮದ ಮಾಲೀಕ: ಶ್ರಮ ಎಂದಿಗೂ ನಮ್ಮ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ

ಯಾವ ವ್ಯಕ್ತಿ ತನ್ನ ಜೀವನದಲ್ಲಿ ಆತ್ಮವಿಶ್ವಾಸದಿಂದ ಸರಿಯಾದ ದಿಕ್ಕಿನಲ್ಲಿ ನಡೆಯುವನೋ ಅವನಿಗೆ ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ. ಬಹಳಷ್ಟು ಸಲ ಮನುಷ್ಯನ ಅದೃಷ್ಟ ಅವನಿಗೆ ಕೈ ಕೊಡಬಹುದು ಆದರೆ ಆತನ ಶ್ರಮ ಇಂದಿಗೂ ಆತನ ಕೈಬಿಡುವುದಿಲ್ಲ
ದೊಡ್ಡ ಯಶಸ್ಸನ್ನು ಪಡೆಯಲು ದೊಡ್ಡ ಉದ್ಯಮವನ್ನೇ ಮಾಡಬೇಕು ಎನ್ನುವ ನಿಯಮ ಖಂಡಿತ ಇಲ್ಲ. ಮಾಡುವ ಚಿಕ್ಕ ಕೆಲಸ ಕೂಡಾ ನಿಮ್ಮ ಪರಿಶ್ರಮದಿಂದ ಬೆಳೆದು ದೊಡ್ಡ ಉದ್ಯಮವಾಗಬಹುದು. ಸೊನ್ನೆಯಿಂದ ಆರಂಭಿಸಿ ಕೋಟ್ಯಾಧಿಪತಿಯೂ ಆಗಬಹುದು ಎಂದರೆ ನಮ್ಮ ಮಾತಿನ ಮೇಲೆ ನಂಬಿಕೆ ಬರದೇ ಇರಬಹುದು ಆದರೆ ನಾವಿಂದು ಹೇಳಲು ಹೊರಟಿರುವ ವ್ಯಕ್ತಿಯ ಜೀವನ ಅಕ್ಷರಶಃ ಈ ಮಾತಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ದಶಕಗಳ ಹಿಂದೆ ಬೀದಿ ಬೀದಿಗಳನ್ನು ಸುತ್ತುತ್ತಾ ಸೀರೆ ವ್ಯಾಪಾರವನ್ನು ಮಾಡುತ್ತಿದ್ದ ಬೀರೇನ್ ಕುಮಾರ್ ಬಸಾಕ್ ಇಂದು 50 ಕೋಟಿ ರೂಪಾಯಿ ಮೌಲ್ಯದ ಉದ್ಯಮದ ಮಾಲೀಕರಾಗಿದ್ದಾರೆ.

ಬಾಂಗ್ಲಾದೇಶದ ತಂಗೇಲಿ ಜಿಲ್ಲೆಯಲ್ಲಿ ಜನಿಸಿದ ಇವರಿಗೆ ನಾಲ್ಕು ಜನ ಸಹೋದರರು, ಇಬ್ಬರು ಸಹೋದರಿಯರು ಇದ್ದಾರೆ. ಇವರದು ನೇಕಾರರ ಕುಟುಂಬ. ಇವರ ತಂದೆ ನೇಯ್ಗೆ ಮಾಡುತ್ತಿದ್ದರು ಹಾಗೂ ಕವಿತೆಗಳನ್ನು ಬರೆಯುತ್ತಿದ್ದರು. ಬೀರೇನ್ ಮನೆಯಲ್ಲಿ ಕಿರಿಯ ಮಗನಾಗಿದ್ದರು. ನಾಲ್ಕು ದಶಕಗಳ ಹಿಂದೆ ಬೇರೆ ಕೊಲ್ಕತ್ತಾದ ರಸ್ತೆಗಳಲ್ಲಿ ಹಾಗೂ ಬೀದಿಗಳಲ್ಲಿ ಬೆನ್ನ ಮೇಲೆ ಸೀರೆಗಳ ಗಂಟನ್ನು ಹೊತ್ತು ಮನೆ ಮನೆಗೆ ತಿರುಗಿ ಸೀರೆಗಳ ವ್ಯಾಪಾರವನ್ನು ಇವರು ಮಾಡುತ್ತಿದ್ದರು. ಅವರು ಇಂದಿಗೂ ಆ ದಿನಗಳನ್ನು ಮರೆತಿಲ್ಲ. 66 ವರ್ಷದ ಬೀರೇನ್ ಕುಮಾರ್ ಇಂದು ಸೀರೆಯ ಉದ್ಯಮದಲ್ಲಿ ಜನಪ್ರಿಯ ಉದ್ಯಮಿಯಾಗಿದ್ದಾರೆ. ಇವರ ವ್ಯವಹಾರದ ಒಂದು ವರ್ಷದ ಟರ್ನ್ ಓವರ್ ಸುಮಾರು 50 ಕೋಟಿ ಗಳಿಗಿಂತ ಹೆಚ್ಚಾಗಿದೆ.

ಬಹಳ ಆತ್ಮವಿಶ್ವಾಸದಿಂದ ದಶಕಗಳ ಹಿಂದೆ ಅವರು ಎಂಟು ಜನ ಕೆಲಸಗಾರರೊಂದಿಗೆ ಒಂದು ಸೀರೆ ಅಂಗಡಿಯನ್ನು ಆರಂಭಿಸಿದರು. ಇಂದು ಅವರ ವ್ಯವಹಾರವು ಇಡೀ ದೇಶದಲ್ಲಿ ವ್ಯಾಪಿಸಿದೆ. ವರ್ಷವೊಂದಕ್ಕೆ ಕೈಮಗ್ಗದಿಂದ ನೇಯುವ 16000 ಸೀರೆಗಳನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸುತ್ತಾರೆ. ಅವರ ಬಳಿ ಇಂದು 24 ಜನ ಕೆಲಸಗಾರರು, ಐದು ಸಾವಿರ ಜನ ನೇಕಾರರು ಸೀರೆ ನೇಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಇವರ ಗ್ರಾಹಕರ ಪಟ್ಟಿ ಬಹಳ ದೊಡ್ಡದಾಗಿದ್ದು, ಅದರಲ್ಲಿ ದೇಶದ ಜನಪ್ರಿಯ ವ್ಯಕ್ತಿಗಳ ಹೆಸರು ಕೂಡ ಇವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾಜಿ ಕ್ರಿಕೆಟ್ ಆಟಗಾರ ಸೌರವ್ ಗಂಗೂಲಿ, ನಟಿ ಮೌಸಮಿ ಚಟರ್ಜಿ, ಶಾಸ್ತ್ರೀಯ ಸಂಗೀತಗಾರ ಉಸ್ತಾದ್ ಅಮ್ಜದ್ ಅಲಿ ಖಾನ್ ಹೇಗೆ ದೊಡ್ಡ ದೊಡ್ಡವರ ಹೆಸರು ಬೀರೇನ್ ಅವರ ಗ್ರಾಹಕರ ಪಟ್ಟಿಯಲ್ಲಿದೆ.

ಇವರ ಬಾಲ್ಯ ಜೀವನ ಕೂಡಾ ಬಹಳ ಕಷ್ಟಗಳಿಂದ ಕಳೆದಿತ್ತು. ಬೀರೇನ್ ಅವರ ತಂದೆಯ ಆದಾಯ ದೊಡ್ಡ ಮಟ್ಟದಲ್ಲಿ ಇರಲಿಲ್ಲ. ಅನೇಕ ಸಂದರ್ಭಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಇದಾದನಂತರ ಇದ್ದ ಊರಿನಲ್ಲಿ ಉಂಟಾದಂತಹ ಸಮಸ್ಯೆಗಳು, ಕೆಲವು ಗಲಭೆಗಳ ಕಾರಣದಿಂದ ಅವರು ನಮ್ಮ ಸಂಬಂಧಿಗಳು ಇದ್ದಂತಹ ಫುಲಿಯಾ ಎನ್ನುವ ಊರಿಗೆ ಹೋದರು. ಅಲ್ಲಿಗೆ ಹೋದ ಮೇಲೂ ಪರಿಸ್ಥಿತಿ ಸುಧಾರಿಸಲಿಲ್ಲ. ಆಗ ಬೀರೇನ್ ತಮ್ಮ ವಿದ್ಯಾಭ್ಯಾಸವನ್ನು ಬಿಟ್ಟು ಎರಡೂವರೆ ರೂಪಾಯಿ ಸಂಬಳಕ್ಕೆ ಸೀರೆಗಳನ್ನು ನೇಯುವ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಎಂಟು ವರ್ಷಗಳನ್ನು ಅಲ್ಲೇ ಕಳೆದರು.

ಇದಾದ ನಂತರ 1970 ರಲ್ಲಿ ಹತ್ತು ಸಾವಿರ ರೂಪಾಯಿ ಸಾಲವನ್ನು ಪಡೆದು ತಮ್ಮ ಅಣ್ಣನ ಜೊತೆ ಸೇರಿ ಕೋಲ್ಕತ್ತಾದಿಂದ ಸೀರೆಗಳನ್ನು ಕೊಂಡು ಮಾರಾಟ ಮಾಡಲು ಆರಂಭಿಸಿದರು. ಅವರ ವ್ಯಾಪಾರ ಚೆನ್ನಾಗಿ ನಡೆಯಿತು. ಒಳ್ಳೆಯ ಆದಾಯ ಬರತೊಡಗಿತ್ತು. 1981 ರಲ್ಲಿ ಅವರು ಹಾಗೂ ಅವರ ಸಹೋದರ ದಕ್ಷಿಣ ಕೋಲ್ಕತಾದಲ್ಲಿ 5 ಲಕ್ಷ ರೂಪಾಯಿ ಖರ್ಚು ಮಾಡಿ ನಿವೇಶನವನ್ನು ಕೊಂಡು 1985 ರಲ್ಲಿ ದೀರೇನ್ ಮತ್ತು ಬೀರೇನ್ ಬಸಾಕ್ ಕಂಪನಿಯನ್ನು ಸ್ಥಾಪಿಸಿದರು. ಆಗ ಪ್ರತಿ ತಿಂಗಳಿಗೆ ಐವತ್ತು ಸಾವಿರ ಆದಾಯ ಬರುತ್ತಿತ್ತು. ಹೀಗೆ ಒಂದು ಕೋಟಿ ವರೆಗೂ ಅವರ ಆದಾಯ ಬೆಳೆಯಿತು. ಅನಂತರ ಆದಾಯವನ್ನು ಇಬ್ಬರೂ ಸಹೋದರರು ಹಂಚಿಕೊಂಡರು.

ಇದಾದ ನಂತರ ಬಿರೇನ್ ತಮ್ಮ ಹಳ್ಳಿಗೆ ವಾಪಸಾಗಲು ಅವರಿಗೆ ಹಳ್ಳಿಯಲ್ಲಿ ಜೀವಿಸುವುದು ಬಹಳ ಇಷ್ಟವಾಗಿತ್ತು. ಹಳ್ಳಿಗೆ ಬಂದ ಮೇಲೆ ಹೊಸ ಆಲೋಚನೆಯೊಂದಿಗೆ, ಒಂದಷ್ಟು ಜನ ಕೆಲಸಗಾರರೊಂದಿಗೆ ಹಾಗೂ ನೇಕಾರರೊಂದಿಗೆ ಸೇರಿ ತಮ್ಮ ಮನೆಯಲ್ಲೇ ಬೀರೇನ್ ಸೀರೆಗಳನ್ನು ನೇಯ್ಗೆ ಮಾಡುವ ಕಾರ್ಯವನ್ನು ಆರಂಭಿಸಿದರು. ಅವರ ರಚನಾತ್ಮಕ ಕೌಶಲ್ಯ, ಹೊಸ ಹೊಸ ವಿನ್ಯಾಸ ಗಳು ಎಲ್ಲರ ಗಮನ ಸೆಳೆದವು. ಅವರ ಈ ಹೊಸ ಬಿರೇನ್ ಬಸಾಕ್ ಅಂಡ್ ಕಂಪನಿಬಹಳ ದೊಡ್ಡ ಮಟ್ಟಕ್ಕೆ ಬೆಳೆಯಿತು. ಅವರ ರಚನಾತ್ಮಕ ಆಲೋಚನೆಗಳಿಗೆ ಬೇಡಿಕೆ ಹೆಚ್ಚಿತು. ಅವರ ಅಣ್ಣನ ಸೀರೆಗಳ ಮಾರಾಟದ ಮೇಲೆ ಕೂಡ ನಕಾರಾತ್ಮಕ ಪರಿಣಾಮ ಬೀರಿತು. ಆದರೆ ಬೀರೇನ್ ಅವರ ಹೊಸ ಆಲೋಚನೆ ಫಲವಾಗಿ ಅವರ ಉದ್ಯಮ ಮತ್ತಷ್ಟು ವಿಸ್ತೃತ ವಾಯಿತು.

2013 ರಲ್ಲಿ ಕೇಂದ್ರ ಜವಳಿ ಸಚಿವಾಲಯವು ಇವರಿಗೆ ಸಂತ ಕಬೀರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಲ್ಲದೆ ಇನ್ನೂ ಅನೇಕ ಪ್ರಶಸ್ತಿಗಳು ಇವರಿಗೆ ಒಲಿದು ಬಂದಿದೆ. 1977 ರಲ್ಲಿ ಬೀರೇನ್ ರವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರ ಪತ್ನಿ ಬೀನಾ ಅವರು ತಮ್ಮ ಪತಿಯೊಂದಿಗೆ ಪ್ರತಿ ಹೆಜ್ಜೆಯಲ್ಲೂ ಸಹಕಾರ ನೀಡುತ್ತಾರೆ. ಪತಿ ನಡೆಸುವ ಉದ್ಯಮದ ಒಂದು ಭಾಗವಾಗಿದ್ದಾರೆ. ಒಟ್ಟಿನಲ್ಲಿ ಬೀರೇನ್ ಅವರ ಜೀವನವು ಶ್ರಮದಿಂದ ಹಾಗೂ ರಚನಾತ್ಮಕ ಕೌಶಲ್ಯಗಳಿಂದ ವ್ಯಕ್ತಿಯು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಿದೆ ಎಂಬುದನ್ನು ಸಾಬೀತು ಮಾಡಿದೆ. ಅನೇಕರಿಗೆ ಅವರ ಜೀವನ ಮಾದರಿ ಹಾಗೂ ಸ್ಪೂರ್ತಿದಾಯಕವಾಗಿದೆ.