ಅಂದು ಮಗಳ ಮದುವೆಯಲ್ಲಿ 500 ಕೋಟಿ ರೂಪಾಯಿ ಖರ್ಚು ಮಾಡಿದ್ದ; ಇಂದು ‘ಅನಿಲ್ ಅಂಬಾನಿ’ಗಿಂತಲೂ ದಿವಾಳಿಕೋರ!
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ತನ್ನ ಹೆಸರನ್ನು ಕೂಡಾ ಹೊಂದಿದ್ದವರು ಲಕ್ಷ್ಮೀ ನಿವಾಸ್ ಮಿತ್ತಲ್ ಅವರು. ಆದರೆ ಇವರ ಸಹೋದರ ಪ್ರಮೋದ್ ಮಿತ್ತಲ್ ಈಗ ಬ್ರಿಟನ್ ನ ಅತಿ ದೊಡ್ಡ ದಿವಾಳಿ ವ್ಯಕ್ತಿಯಾಗಿದ್ದಾರೆ ಎಂದರೆ ನಂಬಲು ಬೇಕಾಗಿದೆ. ಈ ಹಿಂದೆ ಪ್ರಮೋದ್ ಮಿತ್ತಲ್ ತಮ್ಮ ಮಗಳು ಸೃಷ್ಟಿಯ ಮದುವೆ ಸಂದರ್ಭದಲ್ಲಿ ಸುದ್ದಿಯಾಗಿದ್ದರು. ಅದಕ್ಕೆ ಕಾರಣವಾಗಿದ್ದು ಮಗಳ ಮದುವೆಗೆ ಅವರು ಖರ್ಚು ಮಾಡಿದ ಹಣ. ಪ್ರಮೋದ್ ಮಿತ್ತಲ್ ತಮ್ಮ ಮಗಳು ಸೃಷ್ಟಿಯ ವಿವಾಹವನ್ನು ಡಚ್ ಮೂಲದ ಇನ್ವೆಸ್ಟೆರ್ ಬ್ಯಾಂಕರ್ ಗುಲ್ರಾಜ್ ಬೆಹಲ್ ಜೊತೆ 2013 ರಲ್ಲಿ ಮಾಡಿದ್ದರು. ಆಗ ಮಗಳ ಮದುವೆಗೆ ಅವರು ಬರೋಬ್ಬರಿ 500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿ ಎಲ್ಲರ ಗಮನ ಸೆಳೆದಿದ್ದರು.
ಆದರೆ ಈಗ ಅದೇ ಪ್ರಮೋದ್ ಮಿತ್ತಲ್ ಹೆಗಲ ಮೇಲೆ ಬರೋಬ್ಬರಿ 24 ಸಾವಿರ ಕೋಟಿಗಳ ಸಾಲದ ಹೊರೆಯಿದ್ದ, ಅದನ್ನು ತೀರಿಸಲು ಪ್ರಮೋದ್ ಮಿತ್ತಲ್ ಬಳಿ ಚಿಕ್ಕಾಸು ಕೂಡಾ ಇಲ್ಲವಂತೆ. ಪ್ರಮೋದ್ ಮಿತ್ತಲ್ ಈಗ ತನ್ನ ಬಳಿ ಕೇವಲ 1,10,000 ಪೌಂಡ್ ಅಂದರೆ ಸುಮಾರು 1.5 ಕೋಟಿ ರೂಗಳ ಆಸ್ತಿ ಮಾತ್ರ ಇದೆ ಎಂದಿದ್ದಾರೆ. ಅವರು ತಮ್ಮ ಬಳಿ 7000 ಪೌಂಡ್ ಮೌಲ್ಯದ ಒಡವೆಗಳು, 66,669 ಪೌಂಡ್ ಗಳ ಮೌಲ್ಯದ ಶೇರುಗಳು, ದೆಹಲಿಯಲ್ಲಿ 45 ಪೌಂಡ್ ಮೌಲ್ಯದ ಜಮೀನು ಹೊಂದಿರುವುದಾಗಿ ಹೇಳಿರುವ ಅವರು ತಾವು ಯಾರು ಯಾರಿಗೆ ಎಷ್ಟು ಮೊತ್ತದ ಹಣವನ್ನು ನೀಡಬೇಕು ಎಂಬುದನ್ನು ಕೂಡಾ ಅವರು ತಿಳಿಸಿದ್ದಾರೆ.
ಅವರು ತಮ್ಮ 94 ವರ್ಷದ ತಂದೆಗೆ 17 ಮಿಲಿಯನ್ ಪೌಂಡ್ ( ಅಂದರೆ ಸುಮಾರು 16 ಬಿಲಿಯನ್ 27 ಕೋಟಿ ರೂಪಾಯಿ), ಪತ್ನಿ ಸಂಗೀತಾ ಅವರಿಗೆ 1.1 ಮಿಲಿಯನ್ ಪೌಂಡ್ (ಸುಮಾರು 10 ಮಿಲಿಯನ್ ರೂಪಾಯಿ), ಅವರ ಮಗ ದಿವೇಶ್ ಗೆ 24 ಮಿಲಿಯನ್ ಪೌಂಡ್ (ಸುಮಾರು 23 ಮಿಲಿಯನ್ ರೂಪಾಯಿ), ಅವರ 45 ವರ್ಷದ ಸೋದರ ಮಾವ ಅಮಿತ್ ಲೋಹಿಯಾ ಅವರು 11 ಮಿಲಿಯನ್ (ಸುಮಾರು 1.5 ಕೋಟಿ ರೂ.) ಗಳಷ್ಟು ಹಣವನ್ನು ತಾನು ಹಿಂತಿರುಗಿಸಬೇಕಾಗಿದೆ ಎಂದು ಹೇಳಿದ್ದಾರೆ. ಇದಲ್ಲದೆ ಕೆಲವು ಕಂಪನಿಗಳು ಅವರಿಗೆ ಶತಕೋಟಿ ರೂಪಾಯಿಗಳನ್ನು ನೀಡಬೇಕಾಗಿ ಎಂದು ಕೂಡಾ ತಿಳಿಸಿದ್ದಾರೆ.

ಸುಮಾರು 14 ವರ್ಷಗಳ ಹಿಂದೆ ಪ್ರಮೋದ್ ಮಿತ್ತಲ್ ಬೋಸ್ನಿಯನ್ ಕೋಕ್ ತಯಾರು ಮಾಡುವ ಕಂಪನಿಯ ಸಾಲಕ್ಕೆ ಖಾತ್ರಿ ನೀಡಲು ಒಪ್ಪಿದ್ದರು. ಅಲ್ಲಿಂದ ಅವರ ಅ ವ ಸಾನ ಆರಂಭವಾಯಿತು ಎನ್ನಲಾಗಿದೆ. ಜಿಐಕೆಐಇಎಲ್ ಕಂಪನಿಗೆ ಇವರ ಸ್ಟೀಲ್ ಕಂಪನಿ ಸಾಲಕ್ಕೆ ಗ್ಯಾರಂಟಿ ಆಯಿತು. ಆದರೆ ಜಿಐಕೆಐಇಎಲ್ ಕಂಪನಿ ದಿವಾಳಿಯ ಹಾದಿ ತುಳಿದ ಕಾರಣ ಮಿತ್ತಲ್ ಮೂರ್ಗೆಟ್ ಇಂಡಸ್ಟ್ರಿ ಯಿಂದ ಪಡೆದ ಸಾಲ ತೀರಿಸುವುದು ಅಸಾಧ್ಯವಾಯಿತು. ಅಲ್ಲಿಂದ ಮಿತ್ತಲ್ ಕಂಪನಿಯ ದಿವಾಳಿ ಪ್ರಕ್ರಿಯೆ ಆರಂಭವಾಯಿತು ಎನ್ನಲಾಗಿದೆ. ವಿಚಾರ ಕೋರ್ಟ್ ಮೆಟ್ಟಿಲು ಏರಿತು. ಕೋರ್ಟ್ ಕೂಡಾ ಮೂರ್ಗೆಟ್ ಕಂಪನಿಯ ಪರವಾಗಿ ತನ್ನ ತೀರ್ಪನ್ನು ಘೋಷಿಸಿತು.
ಮಿತ್ತಲ್ ಸುಮಾರು 139,786,656 ಪೌಂಡ್, ಅಂದರೆ ಸುಮಾರು 14,000 ಕೋಟಿ ರೂ., ಜೊತೆಗೆ 10,000 ಕೋಟಿ ರೂ ಬಡ್ಡಿಯನ್ನು ಪಾವತಿಸಲು ವಿಫಲರಾಗಿದ್ದರಿಂದ ಕೋರ್ಟ್ ಮಿತ್ತಲ್ ರನ್ನು ದಿವಾಳಿ ಎಂದು ಘೋಷಣೆ ಮಾಡಿದೆ. ಪ್ರಮೋದ್ ಅವರ ಹಿರಿಯ ಸಹೋದರ ಲಕ್ಷ್ಮೀ ಮಿತ್ತಲ್ ಪ್ರಮೋದ್ ನೆರವಿಗೆ ಧಾವಿಸಿಲ್ಲ ಎನ್ನಲಾಗಿದೆ. ಈ ಹಿಂದೆ 84 ಕೋಟಿ ರೂಪಾಯಿಗಳ ವಂ ಚನೆ ಪ್ರಕರಣದಲ್ಲಿ ಲಕ್ಷ್ಮೀ ಮಿತ್ತಲ್ ತಮ್ಮನನ್ನು 92 ಕೋಟಿ ರೂ ಜಾಮೀನು ನೀಡಿ ಬಿಡಿಸಿದ್ದು ಬಿಟ್ಟರೆ ಅವರು ಬೇರೇನೂ ನೆರವನ್ನು ನೀಡಿಲ್ಲ ಎನ್ನಲಾಗಿದೆ.