ಅಂದು ರಾತ್ರಿಯಲ್ಲಿ ನಡೆದ ಈ ಘಟನೆಯಿಂದ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ನಡುವೆ ಬ್ರೇಕ್ ಅಪ್ ಆಯಿತು…!

ಸುಮಾರು 20 ವರ್ಷಗಳ ಹಿಂದೆ ಅಂದರೆ 1999 ರಲ್ಲಿ ಎಲ್ಲಕ್ಕಿಂತ ಹೆಚ್ಚು ಜನರ ಮನಸ್ಸನ್ನು ಗೆದ್ದ ಹಾಗೂ ಜನರಿಂದ ತುಂಬಾ ಮೆಚ್ಚುಗೆ ಪಡೆದ ಹಿಂದಿ ಚಿತ್ರಪಟವೆಂದರೆ ಅದುವೇ ‘ಹಮ ದಿಲ್ ದೇ ಚುಕೆ ಸನಮ್’. ಆ ಕಾಲದಲ್ಲಿ ಈ ಚಿತ್ರಪಟ ಪ್ರೇಕ್ಷಕರ ಮನಸ್ಸಿನ ಮೇಲೆ ತನ್ನ ರಾಜ್ಯವೇ ಸ್ಥಾಪಿಸಿತ್ತು. ಪ್ರತಿಯೊಬ್ಬರ ಬಾಯಲ್ಲಿ ಈ ಚಿತ್ರಪಟದ ಹಾಡು ಹಾಗೂ ಪ್ರತಿಯೊಬ್ಬರ ಬಾಯಲ್ಲಿ ಈ ಚಿತ್ರಪಟದ ಕೆಲವು ಸನ್ನಿವೇಶಗಳ ಸಂಭಾಷಣೆ ಇರುತ್ತಿತ್ತು. ಈ ಚಿತ್ರಪಟಕ್ಕೆ ಅಂದಿನಕಾಲದಲ್ಲಿ ಪ್ರೇಕ್ಷಕರಿಂದ ತುಂಬಾ ರೆಸ್ಪಾನ್ಸ ಸಿಕ್ಕಿತ್ತು. ಈ ಚಿತ್ರಪಟದಲ್ಲಿ ಸಲ್ಮಾನ್ಖಾನ್ ಹಾಗೂ ಐಶ್ವರ್ಯ ರೈ ಅವರ ಜೋಡಿ ಇತ್ತು. ಈ ಚಿತ್ರದ ನಂತರ ಅವರಿಬ್ಬರ ನಡುವಳಿಕೆಯಲ್ಲಿ ತುಂಬಾ ಬದಲಾವಣೆಯಾಗಿತ್ತು. ಅಲ್ಲದೆ ಈ ಚಿತ್ರಪಟ ಯಶಸ್ಸುಕಂಡ ನಂತರ ಅವರಿಬ್ಬರ ನಡುವೆ ಡೇಟ್ ಸಹ ಮಾಡಿದ್ದರು. ಅಲ್ಲದೆ ಅಂದಿನ ಬಾಲಿವುಡ್ನಲ್ಲಿ ಎಲ್ಲಕ್ಕಿಂತ ಮುದ್ದು ಜೋಡಿ ಎಂದೇ ಹೆಸರಾಗಿದ್ದರು ಆದರೆ ಆ ಜೋಡಿ ಇಂದು ಒಬ್ಬರಿಗೊಬ್ಬರು ಕಣ್ಣು ಎತ್ತಿ ನೋಡುವದಕ್ಕೆ ಸಹ ಅಸಹ್ಯ ಪಡುತ್ತಾರೆ ಅಷ್ಟೊಂದು ದ್ವೇಷ ಇವರಿಬ್ಬರ ಮನದಲ್ಲಿ ಇಂದು ತುಂಬಿದೆ. ಅಷ್ಟಕ್ಕೂ ಅವರಿಬ್ಬರ ನಡುವೆ ಬ್ರೇಕ್ಅಪ್ ಆಗಿದ್ದು ಯಾಕೆ ಅಂತ ನೋಡೋಣ ಬನ್ನಿ.

ಬಾಲಿವುಡ್ ನ ಈ ಕಪಲ್ ಸುಮಾರು ಮೂರು ವರ್ಷಗಳ ಕಾಲ ಒಂದಾಗಿದ್ದರು. 2002 ರಲ್ಲಿ ಇವರಿಬ್ಬರ ಸಂಬಂಧದಲ್ಲಿ ಬಿರುಕು ಉಂಟಾಯಿತು ಆಗ ಐಶ್ವರ್ಯ ರೈ ಅವರು ಸಲ್ಮಾನ್ ಖಾನ್ ಅವರ ಮೇಲೆ ತಮ್ಮನ್ನು ಹೊಡೆದರು ಎಂಬ ಆರೋಪ ಮಾಡಿದ್ದರು. ಆದರೆ ಸಲ್ಮಾನ್ಖಾನ್ ಅವರು ಈ ಆರೋಪ ಒಪ್ಪಲಿಲ್ಲ. ಆದರೆ ಅವರು ತಮ್ಮ ಸಿಟ್ಟಿನ ವರ್ತನೆಯಿಂದ ಜನರು ಅವರನ್ನೇ ತುಂಬಾ ಟೀಕಿಸಿದರು.

ಮೀಡಿಯಾಗಳ ರಿಪೋರ್ಟ್ ಅನುಸಾರ , ಈ ಸಂಪೂರ್ಣ ಘಟನೆಯು ರಾತ್ರಿಯ ಸುಮಾರು 3 ಗಂಟೆಯವರೆಗೆ ನಡೆಯುತ್ತಿತ್ತು. ಬಾಗಿಲು ಬಡೆದು ಬಡೆದು ಸಲ್ಮಾನ್ಅವರ ಕೈಯಿಂದ ರಕ್ತ ಹರಿಯಲು ಪ್ರಾರಂಭವಾಯಿತು. ಎರಡು ಮೂರು ಗಂಟೆಯ ವರೆಗಿನ ಈ ಘಟನೆಯ ನಂತರ ಸುಮಾರು 3 ಗಂಟೆಗೆ ಐಶ್ವರ್ಯರೈ ಅವರು ಬಾಗಿಲು ತೆರೆದು ಸಲ್ಮಾನ್ಅವರನ್ನು ಮನೆಯೊಳಗೆ ಕರೆದುಕೊಂಡರಂತೆ. ಇಂಡಿಯಾ ಟುಡೇ ಯ ರಿಪೋರ್ಟ್ ಪ್ರಕಾರ, ಇದಕ್ಕೆಲ್ಲ ಕಾರಣ ಅವರಿಬ್ಬರ ನಡುವೆ ವಿವಾಹ ಮಾಡಿಕೊಳ್ಳುವ ಒಪ್ಪಿಗೆ ಇರಲಿಲ್ಲ, ಸಲ್ಮಾನ್ಖಾನ್ ಅವರು ಐಶ್ವರ್ಯರೈ ಅವರನ್ನು ಮದುವೆಯಾಗಲು ಒಪ್ಪಿಗೆ ಕೇಳಿದರು ಆದರೆ ಐಶ್ವರ್ಯ ರೈ ಅವರು ಆ ಒಪ್ಪಂದವನ್ನು ತಿರಸ್ಕರಿಸಿದರು ಆದುದರಿಂದ ಅವರ ನಡುವೆ ಬ್ರೆಕ್ಅಪ ಆಯಿತಂತೆ.

ಸಲ್ಮಾನ್ಮತ್ತು ಐಶ್ವರ್ಯ ರೈ ಅವರ ಹತ್ತಿರದ ವ್ಯಕ್ತಿಯ ಹೇಳಿಕೆಯ ಪ್ರಕಾರ, ಐಶ್ವರ್ಯರೈ ಅವರು ಮದುವೆ ಯಾಗಲು ತಯಾರು ಇರಲಿಲ್ಲ ಇದು ಸಲ್ಮಾನ್ ಅವರಿಗೆ ತುಂಬಾ ಬೇಸರ ತಂದಿತು. ಅದಲ್ಲದೆ ಅದೇ ಸಮಯದಲ್ಲಿ ಸಲ್ಮಾನ್ ಅವರು ತಮ್ಮ ಎಕ್ಸ್ ಗರ್ಲ್ ಫ್ರೆಂಡ್ ಸೊಮಿ ಅಲಿಯ ಸಹಾಯಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ಹೋದ ವಿಷಯ ಐಶ್ವರ್ಯರೈ ಅವರಿಗೆ ತಿಳಿಸಿರಲಿಲ್ಲ. ಸೊಮಿ ಅವರನ್ನು ಭೇಟಿಯಾಗಿ ಬಂದ ನಂತರ ಐಶ್ವರ್ಯರೈ ಅವರು ತುಂಬಾ ಕೋಪದಿಂದ ಇದ್ದರು.

ಅದೇ ವೇಳೆಗೆ ಐಶ್ವರ್ಯರೈ ಅವರು ಬ್ರೇಕ್ ಅಪ್ ಮಾಡಲು ಹೇಳಿದರು. ಈ ಒಂದು ಕಾರಣದಿಂದ ಅವರಿಬ್ಬರು ಒಬ್ಬರಿಂದ ಒಬ್ಬರು ದೂರಾದರೂ. ಕೊನೆಗೆ 2002 ರಲ್ಲಿ ಬ್ರೇಕ್ ಅಪ್ ಆಯಿತು. ಇದಕ್ಕಿಂತ ಮುಂಚೆ ನವೆಂಬರ ರಾತ್ರಿಯಲ್ಲಿ ನಡೆದ ಘಟನೆ ತುಂಬಾ ಗಾಸಿಪ್ ಕಂಡುಕೊಂಡಿತು.