ಅಂದು 200 ರೂ. ಉದ್ಯೋಗ ಮಾಡುತ್ತಿದ್ದ ಪಿಜ್ಜಾ ಡಿಲೆವರಿ ಬಾಯ್ ಇಂದು 8.5 ಕೋಟಿ ಉದ್ಯಮದ ಮಾಲೀಕ
ಜೀವನದಲ್ಲಿ ಪ್ರತಿಯೊಬ್ಬರು ಕೂಡಾ ಸಫಲತೆ ಹಾಗೂ ಯಶಸ್ಸನ್ನು ಪಡೆಯಬೇಕೆಂದು ಎಲ್ಲರೂ ಕೂಡಾ ಆಸೆ ಪಡುತ್ತಾರೆ. ಆದರೆ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮಾತ್ರ ಕೆಲವರಲ್ಲಿ ಮಾತ್ರವೇ ಇರುತ್ತದೆ. ಅಷ್ಟೇ ಅಲ್ಲ ಪರಿಸ್ಥಿತಿ ಗಳನ್ನು ಎದುರಿಸಿ ರಿ ಸ್ಕ್ ತೆಗೆದುಕೊಳ್ಳುವ ಧೈರ್ಯ, ತಾಕತ್ತು ಕೂಡಾ ಎಲ್ಲರಲ್ಲೂ ಇರುವುದಿಲ್ಲ. ಆದರೆ ಇಂತಹ ಕ ಠಿ ಣ ಪರಿಸ್ಥಿತಿಯಲ್ಲಿ ಕೂಡಾ ದಿಟ್ಟತನದಿಂದ ನಿಂತು ಸಮಸ್ಯೆ ಎ ದು ರಿ ಸು ವ ಮಂದಿ ಇತಿಹಾಸವನ್ನು ಸೃಷ್ಟಿಸುತ್ತಾರೆ. ಇತಿಹಾಸದಲ್ಲಿ ತಮಗಾಗಿ ಒಂದು ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಇಂದು ನಾವು ಹೇಳಲು ಹೊರಟಿರುವುದು ಕೂಡಾ ಅಂತಹುದೇ ಒಂದು ಸುವರ್ಣಾಕ್ಷರಗಳಲ್ಲಿ ಇತಿಹಾಸ ರಚಿಸುವ ಸಾಮರ್ಥ್ಯವನ್ನು ಉಳ್ಳ ವ್ಯಕ್ತಿಯ ಸ್ಪೂರ್ತಿಯ ಕಥೆಯನ್ನು.
ಪಿಜ್ಜಾ ಡಿಲೆವರಿ ಬಾಯ್ ಆಗಿ ಕೆಲಸವನ್ನು ಆರಂಭಿಸಿ ಇಂದು ಬಹುಕೋಟಿ ಸಾಮ್ರಾಜ್ಯವನ್ನು ಕಟ್ಟಿದ ಸುನೀಲ್ ವಸಿಷ್ಠ ಅವರ ಕಥೆ ಇದಾಗಿದೆ. ದೆಹಲಿಯ ಒಂದು ಕಡು ಬಡ ಕುಟುಂಬದಲ್ಲಿ ಜನಿಸಿದ ಸುನಿಲ್ ಬಹಳ ಕಷ್ಟಪಟ್ಟು ತನ್ನ ಎಸ್ ಎಸ್ ಸಿ ಪರೀಕ್ಷೆಯನ್ನು ಪಾಸ್ ಮಾಡಿಕೊಂಡರು. ಆದರೆ ಐದು ಜನರ ಕುಟುಂಬದಲ್ಲಿ ತಂದೆಯೊಬ್ಬರೇ ಸಂಪಾದನೆ ಮಾಡುವ ವ್ಯಕ್ತಿಯಾಗಿದ್ದರು ಹಾಗೂ ಅವರೂ ಕೂಡ ಯಂತ್ರ ಚಲಾಯಿಸುವ ಕಾರ್ಮಿಕರಾಗಿದ್ದು, ಅವರ ಆದಾಯದಲ್ಲಿ ಕುಟುಂಬ ನಡೆಯುವುದು ಬಹಳ ಕಠಿಣವಾಗಿತ್ತು. ಆಗ ಬೇರೆ ದಾರಿಯಿಲ್ಲದೆ ಸುನಿಲ್ ತನ್ನ ಓದನ್ನು ಅಲ್ಲಿಗೆ ನಿಲ್ಲಿಸಿ ಕುಟುಂಬ ನಿರ್ವಹಣೆಗಾಗಿ ದಿನಕ್ಕೆ 200 ರೂಪಾಯಿಗಳನ್ನು ಗಳಿಸುವ ಸಣ್ಣ ಪುಟ್ಟ ಕೆಲಸ ಗಳಿಗೆ ಸೇರಿಕೊಂಡರು.

ಹೀಗೆ ಸ್ವಲ್ಪ ದಿನ ಕಳೆದ ನಂತರ ಅವರು ಡಾಮಿನೊಸ್ ಪಿಜ್ಜಾ ಔಟ್ಲೆಟ್ ನಲ್ಲಿ 1998 ರಲ್ಲಿ ಡಿಲೆವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡರು. ಪಿಜ್ಜಾ ಡೆಲಿವರಿ ಬಾಯ್ ಆಗಿ ಸಮಯಕ್ಕೆ ಸರಿಯಾಗಿ ಕೆಲಸ ಮಾಡುವ ಮೂಲಕ ಒಳ್ಳೆಯ ಹೆಸರನ್ನು ಪಡೆದುಕೊಂಡು, ಬೆಸ್ಟ್ ಎಂಪ್ಲಾಯಿ ಎನ್ನುವ ಹೆಸರನ್ನು ಕೂಡಾ ಪಡೆದುಕೊಂಡರು. ಇದು ಅಲ್ಲಿ ಕೆಲಸ ಮಾಡುತ್ತಿದ್ದ ಅನೇಕರ ಹೊಟ್ಟೆ ಕಿ ಚ್ಚಿ ಗೆ ಕೂಡಾ ಕಾರಣವಾಗಿತ್ತು. ಮುಂದೆ ಸುನಿಲ್ 2003ರಲ್ಲಿ ಆ ಕೆಲಸವನ್ನು ಬಿಟ್ಟು ಬಿಟ್ಟರು. ಕೆಲಸ ಬಿಟ್ಟ ನಂತರ ಸುಮ್ಮನೆ ಹೊಸ ಕೆಲಸವನ್ನು ಹುಡುಕುವ ಬದಲಾಗಿ ಸುನೀಲ್ ತನ್ನ ಉಳಿತಾಯದ ಹಣದಿಂದ ರಸ್ತೆ ಬದಿಯಲ್ಲಿ ಒಂದು ಹೋಟೆಲನ್ನು ಮಾಡಿದರು.
ಆದರೆ ಅಧಿಕಾರಿಗಳೊಂದಿಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾದ ಕಾರಣ ಸುನೀಲ್ ಅವರ ಮೊದಲನೆಯ ಬ್ಯುಸಿನೆಲ್ ವಿಫಲವಾಯಿತು. ಆದರೆ 2007 ರವರೆಗೆ ಅಂದರೆ ಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ ಹಣವನ್ನು ಗಳಿಸದೆ ಹೋದರೂ ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದರು ಸುನೀಲ್. 2007 ರಲ್ಲಿ ಮೊದಲಗಿಂತ ಇನ್ನು ಉತ್ತಮವಾದದ್ದು ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಆ ಸುತ್ತಮುತ್ತಲ ಪ್ರದೇಶದಲ್ಲಿ ತಿರುಗಾಡಿ ಅಲ್ಲಿ ಕೇಕ್ ಅಂಗಡಿಯ ಅವಶ್ಯಕತೆ ಎಂಬುದನ್ನು ಅರಿತುಕೊಂಡರು. ಅನಂತರ ಸುನಿಲ್ ತಮ್ಮ ಉಳಿತಾಯ ಹಾಗೂ ಸ್ನೇಹಿತನಿಂದ 58 ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದು ಫ್ಲೈಯಿಂಗ್ ಕೇಕ್ ಬ್ಯಾನರ್ ಅಡಿಯಲ್ಲಿ ತಮ್ಮ ಕನಸಿಗೆ ಅನ್ನ ಕೊಟ್ಟರೆ ರೂಪವನ್ನು ನೀಡಿದರು.

ಇದು ಸುನಿಲ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಆದರೆ ಬಂಡವಾಳ ಕಡಿಮೆ ಇದ್ದುದರಿಂದ ಅದನ್ನು ನಡೆಸಿಕೊಂಡು ಹೋಗುವುದು ದೊಡ್ಡ ಸವಾಲಾಗಿತ್ತು. ಆದರೆ ಕಾಲ ಎಂದಿಗೂ ಒಂದೇ ರೀತಿ ಇರುವುದಿಲ್ಲ ಅದು ಬದಲಾಗುತ್ತದೆ ಎಂಬುದನ್ನು ನಂಬಿದ್ದ ಸುನಿಲ್ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಕೇಕ್ ಬ್ಯುಸಿನೆಸ್ ಮುನ್ನಡೆಸಿದ್ದರು. ಹೀಗಿರುವಾಗ ಒಂದು ದಿನ ಪಕ್ಕದಲ್ಲೇ ಇದ್ದ HCL ಕಂಪನಿಯ ನಿರ್ವಾಹಕ ವಿಭಾಗದ ಮುಖ್ಯಸ್ಥರಾಗಿದ್ದ ಮಹಿಳೆಯೊಬ್ಬರು ತಮ್ಮ ಮಗನ ಹುಟ್ಟು ಹಬ್ಬಕ್ಕೆ ಸುನಿಲ್ ಅವರ ಫ್ಲೈಯಿಂಗ್ ಕೇಕ್ ನಲ್ಲಿ ಕೇಕ್ ಆರ್ಡರ್ ನೀಡಿದರು. ಸುನೀಲ್ ಸಿದ್ಧಪಡಿಸಿದ ಕೇಕ್ ಕ್ವಾಲಿಟಿ ಆ ಮಹಿಳೆಯ ಮನಸ್ಸನ್ನು ಗೆದ್ದಿದ್ದು ಮಾತ್ರವೇ ಅಲ್ಲದೇ ಅಲ್ಲಿಂದ ಕಾರ್ಪೋರೇಟ್ ಆರ್ಡರ್ ಗಳು ಬರಲಾರಂಭಿಸಿತು.
ಹೀಗೆ ಆರ್ಡರ್ ಗಳು ಬರಲಾರಂಭಿಸಿದ ಮೇಲೆ ಸುನಿಲ್ ಅವರು ಕೇಕಿನ ಕ್ವಾಲಿಟಿ ಹಾಗೂ ತಾಜಾ ಕೇಕ್ ತಯಾರಿಸುವ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡಿದರು. ಆರ್ಡರ್ ದೊರೆತ ಮೇಲೆ ಕೇಕನ್ನು ಸಿದ್ಧಪಡಿಸಿ, ಸಪ್ಲೈ ಮಾಡುತ್ತಿದ್ದರು. ಆರಂಭದ ದಿನಗಳಲ್ಲಿ ಹಗಲು ಇರುಳು ಎನ್ನದೆ ಶ್ರಮವಹಿಸಿ ಸುನಿಲ್ ತನಗೆ ಸಿಗುತ್ತಿದ್ದ ಆರ್ಡರ್ ಗಳನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿದ್ದರು. ಅವರು ನೀಡುತ್ತಿದ್ದ ಕ್ವಾಲಿಟಿಯಿಂದ ದಿನ ಕಳೆದಂತೆ ಕೇಕ್ ಬೇಡಿಕೆ ಏಕೆ ಹೆಚ್ಚುತ್ತಲೇ ಹೋಯಿತು. ಸುನಿಲ್ ಮತ್ತೆ ಹಿಂತಿರುಗಿ ನೋಡಲಿಲ್ಲ ಅವರ ಕೇಕ್ ಬ್ಯುಸಿನೆಸ್ ಬೆಳೆಯುತ್ತಾ ಹೋಯಿತು. ಇಂದು ಅವರ ಫ್ಲೈಯಿಂಗ್ ಕೇಕ್ ಒಂದು ಸುಪ್ರಸಿದ್ಧ ಕೇಕ್ ಬ್ರಾಂಡ್ ಆಗಿದೆ. ಫ್ಲೈಯಿಂಗ್ ಕೇಕ್ ನ ಬ್ರಾಂಚ್ ಗಳು ನೋಯ್ಡಾ, ದೆಹಲಿ, ಬೆಂಗಳೂರು, ಪುಣೆ ಗಳಂತಹ ದೊಡ್ಡ ದೊಡ್ಡ ನರಗಗಳಲ್ಲಿ ಕೂಡ ಸ್ಥಾಪನೆಯಾಗಿವೆ.
ಅವರ ಉದ್ಯಮ 8.5 ಕೋಟಿ ವ್ಯಾಪ್ತಿಯನ್ನು ಹೊಂದಿದೆ. ಅಲ್ಲದೇ ಈಗ ಅವರು ಪಿಜ್ಜಾ, ಬರ್ಗರ್ ಹಾಗೂ ಫಾಸ್ಟ್ ಫುಡ್ ಕೂಡಾ ಆರಂಭಿಸಿದ್ದಾರೆ.