ಅಂಬಾನಿಗಿಂತಲೂ ಕಡಿಮೆ ಏನಿಲ್ಲ ಸೌರವ್ ಗಂಗೂಲಿ ಅರಮನೆ; ಮಹಾರಾಜರಂತಿದೆ ದಾದಾ ಅವರ ಜೀವನಶೈಲಿ! ಮನೆಯ ಒಳಗಿನ ದೃಶ್ಯ ನೋಡಿ

ಭಾರತೀಯ ಕ್ರಿಕೆಟ್ ತಂಡಕ್ಕೆ ಜಿದ್ದು ಅಂದರೆ ಏನು ಎಂಬುದನ್ನು ಕಲಿಸಿಕೊಟ್ಟ ನಾಯಕ ಬೆಂಗಾಲ್ ಟೈಗರ್ ಅಥವಾ ಮಹಾರಾಜ ಸೌರವ್ ಗಂಗೂಲಿಯವರು.

ಗಂಗೂಲಿಯವರಿಗೆ ಮಹಾರಾಜ ಎಂದು ಕರೆಯುತ್ತಾರೆ. ಅವರ ಜೀವನ ಶೈಲಿಯು ನಿಜವಾಗಿಯೂ ಮಹಾರಾಜರ ಹಾಗೆಯೇ ಇದೆ ಎಂದರೆ ತಪ್ಪಾಗಲಾರದು.

8 ಜುಲೈ 1972 ರಲ್ಲಿ ಕೋಲ್ಕತ್ತಾದ ಒಂದು ಶ್ರೀಮಂತ ಕುಟುಂಬದಲ್ಲಿ ಇವರ ಜನ್ಮವಾಗಿದೆ. ಮೊನ್ನೆಯೇ ಇವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಆದ್ದರಿಂದ ಕ್ರಿಕೆಟ್ ಬಿಟ್ಟು ನೈಜ ಜೀವನದ ಬಗ್ಗೆ ಕೆಲವೊಂದು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ವಿಶೇಷವಾಗಿ ದಾದಾ ಅವರ ಈ ಮನೆ ಮನೆಯಲ್ಲ ಅದು ಅರಮನೆ. ಆದ್ದರಿಂದ ಇದು ಹೇಗಿದೆ ಮತ್ತು ಎಷ್ಟೊಂದು ಭವ್ಯವಾಗಿದೆ ಎಂಬುದನ್ನು ತಿಳಿದುಕೊಳ್ಳುವ.

ಸೌರವ್ ಗಂಗೂಲಿಯವರ ಈ ಭವ್ಯವಾದ ಬಂಗಲೆ ಕೋಲ್ಕತ್ತಾದ ಬೇಹಲಾ ಭಾಗದಲ್ಲಿದೆ. ಇದೊಂದು ರಾಜಮಹಾರಾಜರ ಅರಮನೆಯಂತೆ ಇದೆ ಎಂದರೆ ಸುಳ್ಳಲ್ಲ. ಇದು ಸೌರವ್ ಗಂಗೂಲಿ ಅವರ ಪಿತ್ರಾರ್ಜಿತ ಮನೆಯಾಗಿದೆ.

ಪ್ರಿನ್ಸ್ ಆಫ್ ಕೊಲ್ಕತ್ತಾ ಅವರ ಈ ಮನೆಯ ಒಳಗಿನ ಇಂಟೀರಿಯರ್ ಡಿಸೈನ್ ಬಂಗಾಲದ ಸಂಸ್ಕೃತಿ ಮತ್ತು ಕಲೆಯನ್ನು ಎತ್ತಿತೋರಿಸುವ ಪರಿಪೂರ್ಣ ಮನೆಯಾಗಿದೆ. ಬಂಗಲೆಯ ಪ್ರತಿಯೊಂದು ಮೂಲೆಯೂ ಬಂಗಾಲಿ ಸಂಸ್ಕೃತಿಯಿಂದ ಮಿನುಗುತ್ತದೆ. ಮನೆಯೊಳಗಿನ ಸುಂದರ ಚಿತ್ರಗಳ ಫೋಟೋಗಳನ್ನು ನೀವಿಲ್ಲಿ ನೋಡಬಹುದು.

ಈ ಭವ್ಯವಾದ ಮನೆಯಲ್ಲಿ ಒಟ್ಟು 48 ಕೋಣೆಗಳಿವೆ. ಇವರು ಸ್ವಚ್ಛತೆ ಮತ್ತು ಉನ್ನತ ಜೀವನಶೈಲಿಗೆ ತುಂಬಾ ಇಷ್ಟಪಡುತ್ತಾರೆ. ಇವರ ಲೈಫ್ ಸ್ಟೈಲ್ ಲಕ್ಸುರಿ ಲೈಫ್ ಸ್ಟೈಲ್ ಆಗಿದೆ. ಹೀಗಾಗಿ ಈಗಲೂ ತಮ್ಮ ಗಳಿಕೆಯ ಹೆಚ್ಚುವರಿ ಹಣವನ್ನು ಮನೆಯ ಸೌಂದರ್ಯಕ್ಕಾಗಿಯೇ ಖರ್ಚು ಮಾಡುತ್ತಾರೆ.

ಭವ್ಯವಾದ ಡೈನಿಂಗ್ ಏರಿಯಾ…

ಸೌರವ್ ಗಂಗೂಲಿ ಅವರ ಮನೆಯಲ್ಲಿಯ ಡೈನಿಂಗ್ ಹಾಲ್ ನೋಡಲು ಎರಡು ಕಣ್ಣುಗಳು ಸಾಲದು. ಚಿತ್ರದಲ್ಲಿ ನೀವು ನೋಡಬಹುದು ಡೈನಿಂಗ್ ಟೇಬಲ್ ಎಷ್ಟೊಂದು ಸುಶೋಭಿತವಾಗಿದೆ. ಗಂಗೂಲಿ ಅವರ ತಾಯಿ ಇದೇ ಟೇಬಲ್ ಮೇಲೆ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್ ಅವರಂಥ ದಿಗ್ಗಜರಿಗೆ ಊಟ ಬಡಿಸಿದ್ದಾರೆ. ಸೌರವ್ ಅವರು ತಮ್ಮ ಮಗಳನ್ನು ತುಂಬಾ ಮುದ್ದಿಸುತ್ತಾರೆ. ಹೀಗಾಗಿ ಗೋಡೆಯಮೇಲೆ ಸನಾಳ ಭಾವಚಿತ್ರವನ್ನು ಅಂಟಿಸಲಾಗಿದೆ.

ಮನೆಯ ಒಳಗಿನ ಗೋಡೆಗಳ ಬಗ್ಗೆ ಹೇಳಬೇಕಾದರೆ ಗೋಡೆಯ ಮೇಲೆ ತಿಳಿಯಾದ ಬಣ್ಣಗಳನ್ನು ಉಪಯೋಗಿಸಲಾಗಿದೆ. ಗೋಡೆಯ ಮೇಲೆ ಅಲ್ಲಲ್ಲಿ ತಮ್ಮ ಹಳೆಯ ಸವಿ ನೆನಪುಗಳಿಗೆ ಮಹತ್ವ ನೀಡಿದ್ದಾರೆ. ಅವುಗಳನ್ನು ನೋಡಿದಾಗ ನಿಮಗೂ ಸಹ ತುಂಬಾ ಇಷ್ಟವಾಗುವುದು.

ಇದರ ಜೊತೆಗೆ ಸೌರವ್ ಗಂಗೂಲಿಯವರು ಮನೆಯ ಒಂದು ಭಾಗದಲ್ಲಿ ಸುಂದರವಾದ ಆಫೀಸ್ ಸಹ ತಯಾರಿಸಿ ಕೊಂಡಿದ್ದಾರೆ. ಆದರೆ ಆಫೀಸಿನಲ್ಲಿ ಕುಳಿತುಕೊಳ್ಳಲು ಅವರಿಗೆ ವೇಳೆಯೇ ಇಲ್ಲದಂತಾಗಿದೆ.