ಅಂಬಾನಿ ಮನೆಯಲ್ಲಿಯ ಕಸ (ತ್ಯಾಜ್ಯ), ಕಸದ ಡಬ್ಬಿಗೆ ಹೋಗದೆ, ನಿಶ್ಚಿತವಾಗಿ ಹೋಗುತ್ತಾದರೂ ಎಲ್ಲಿಗೆ?

ಪ್ರಸಿದ್ಧ ವ್ಯಕ್ತಿಗಳ ಚಿಕ್ಕಪುಟ್ಟ ವಿಷಯಗಳು ಸಹಿತ ದೊಡ್ಡ ಸುದ್ದಿಯಾಗುತ್ತವೆ. ಅವರ ಚಿಕ್ಕಪುಟ್ಟ ವಿಷಯಗಳೇ ನಮ್ಮಲ್ಲಿ ಚರ್ಚೆಯ ವಿಷಯಗಳಾಗುತ್ತವೆ. ಬದಲಾಗಿ ಸಾಮನ್ಯ ವ್ಯಕ್ತಿಯೊಬ್ಬ ಚರ್ಚೆಯಲ್ಲಿ ಬರಬೇಕಾದರೆ ಆತ ತುಂಬಾ ಶ್ರಮಿಸಬೇಕಾಗುವದು.

ಮುಖ್ಯ ವಿಷಯಕ್ಕೆ ಬರೋಣ. ನಿಮಗನಿಸಬಹುದು ಇದನ್ನೇಕೆ ಹೇಳುತ್ತಿದ್ದಾನೆ ಎಂದು? ಆದರೆ ಈ ಕಸ ಸಾಮಾನ್ಯವಲ್ಲ, ಮುಕೇಶ್ ಅಂಬಾನಿಯ ಮನೆಯ ಕಸವಿದೆ.

ಸುದ್ದಿ ಮೂಲಗಳ ಪ್ರಕಾರ ಅಂಬಾನಿಯವರ ಮನೆಯ ತ್ಯಾಜ್ಯ ವಸ್ತುಗಳು ನಮ್ಮ ನಿಮ್ಮ ಮನೆಯ ಕಸದ ಹಾಗೆ ಎಸೆಯದೆ ಅದರ ಒಂದು ವಿಶಿಷ್ಟವಾದ ಕೆಲಸಕ್ಕೆ ಉಪಯೋಗ ಮಾಡಲಾಗುತ್ತದೆ.

ಮುಕೇಶ್ ಅಂಬಾನಿಯವರು ಬರೀ ನಮ್ಮ ದೇಶದಲ್ಲಷ್ಟೇ ಅಲ್ಲ, ಇವರನ್ನು ಜಗತ್ತಿನ ಶ್ರೀಮಂತರಲ್ಲಿ ಅಳೆಯಲಾಗುತ್ತದೆ. ಇವರು ತಮ್ಮ ರಾಜೇಶಾಹಿ ಜೀವನಶೈಲಿಗೆ ಪ್ರಸಿದ್ಧರಾಗಿದ್ದಾರೆ. ಅವರ ಮನೆ ಎಂಟಿಲಿಯಾ ಇದು ಭಾರತದಲ್ಲೇ ಅತೀ ಸುಂದರವಾದ ಮನೆಗಳಲ್ಲಿ ಒಂದು.

27 ಅಂತಸ್ತಿನ ಈ ಮನೆಯಲ್ಲಿ 600 ಜನ ನೌಕರರು ಕೆಲಸಕ್ಕಾಗಿ ಇದ್ದಾರೆ. ಮನೆಯಲ್ಲಿಯ ಪ್ರತಿಯೊಂದು ಚಿಕ್ಕಪುಟ್ಟ ವಸ್ತುಗಳ ಕಡೆಗೆ ಹಾಗೂ ಅವುಗಳನ್ನು ಸರಿಯಾಗಿ ಇಡಲು ಗಮನಹರಿಸುತ್ತಾರೆ. ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಅಂಬಾನಿಯವರ ಕಸದ ವಿನಿಯೋಗದ ಬಗ್ಗೆ ತೀವ್ರ ಚರ್ಚೆಯಾಗುತ್ತಿವೆ.

ಇವರ ಮನೆಯ ಕಸವನ್ನು ಹಾಗೆಯೇ ಚೆಲ್ಲದೆ ಅದರಿಂದ ವಿದ್ಯುತ್ ನಿರ್ಮಿತಿಯನ್ನು ಮಾಡುತ್ತಾರೆ. ತಯಾರಾದ ವಿದ್ಯುತ್ತನ್ನು ಇವರು ತಮ್ಮ ಮನೆಗಾಗಿಯೇ ಉಪಯೋಗಿಸುವರು.

ಅವರ ಮನೆಯಲ್ಲಿ ಒಂದು ವಿಶಿಷ್ಟ ಪದ್ಧತಿಯನ್ನುಪಯೋಗಿಸಿ ಕಸದಿಂದ ವಿದ್ಯುತ್ ನಿರ್ಮಿಸುತ್ತಾರೆ. ಇದಕ್ಕಾಗಿ ಮೊದಲು ಒಣ ಕಸ ಹಾಗೂ ಹಸಿ ಕಸ ಬೇರೆ ಬೇರೆ ವಿಂಗಡಿಸಿ ಅನಂತರ ಅದರಿಂದ ವಿದ್ಯುತ್ ನಿರ್ಮಾಣ ಮಾಡುವರು. ಇಂಥ ದೊಡ್ಡ ಮನೆಯಲ್ಲಿ ಎಲ್ಲಕ್ಕೂ ಹೆಚ್ಚು ವಿದ್ಯುತ್ ತಗಲುವದೆಂದು ಈ ಐಡಿಯಾದ ಉಪಯೋಗ ಮಾಡಿದರು.

ಮುಕೇಶ್ ಅಂಬಾನಿಯವರ ಎಂಟಿಲಿಯಾ ಮನೆಯಲ್ಲಿ ಮಾಡಿದ ಈ ಕಸದ ವಿನಿಯೋಗ ತುಂಬಾ ಸುಂದರವಾಗಿದೆ. ಇದರ ಮೇಲಿಂದ ಮುಕೇಶ್ ಅಂಬಾನಿಯವರು ನಿಜವಾದ ವ್ಯವಸಾಯಿಕರಿದ್ದಾರೆಂದು ತಿಳಿಯುವದು. ಅವರಿಗೆ ಯಾವ ವಸ್ತುವಿನ ಉಪಯೋಗ ಎಲ್ಲಿ ಮಾಡಿಕೊಳ್ಳುವದು ಇದು ಚೆನ್ನಾಗಿ ಅರಿತಿದ್ದಾರೆ.

ಹೀಗೆ ಇದೇ ತರ ನಮ್ಮ ಮನೆಯಲ್ಲಿಯ ಕಸ ಅಥವಾ ಕಸದಂತಹ ವಸ್ತುಗಳನ್ನು ಏನಾದರೂ ಯಾವುದಾದರೂ ಕೆಲಸಕ್ಕೆ ಉಪಯೋಗ ಮಾಡಿಕೊಂಡರೆ ದೇಶದಲ್ಲಿ ನಡೆದಿರುವ ಸ್ವಚ್ಛ ಭಾರತ ಅಭಿಯಾನಕ್ಕೆ ಸಹಾಯ ಮಾಡಿದ ಹಾಗೆಯೂ ಆಗುತ್ತದೆ.