ಅಕ್ಷಯ್ ಕುಮಾರ್ ಸಿನಿಮಾದ ಹಾಡಿದ ಭರ್ಜರಿ ಸ್ಟೆಪ್ ಹಾಕಿದ ಚಹಲ್ ಪತ್ನಿ ಧನಾಶ್ರೀ ವರ್ಮಾ; Video ವೈರಲ್

ಸೋಶಿಯಲ್ ಮೀಡಿಯಾ ಗಳಲ್ಲಿ ಡ್ಯಾನ್ಸಿಂಗ್ ಸೆನ್ಸೇಷನ್ ಎಂದರೆ ಅದು ಧನಾಶ್ರೀ ವರ್ಮಾ. ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲದಿಂದ ಸೋಶಿಯಲ್ ಮೀಡಿಯಾ ಗಳಲ್ಲಿ ಧನಾಶ್ರೀ ವರ್ಮಾ ಅವರ ಡ್ಯಾನ್ಸ್ ಗಳೆಂದರೆ ಡಾನ್ಸ್ ಪ್ರಿಯರಿಗೆ ಅದು ಫೇವರಿಟ್. ಧನಾಶ್ರೀ ಅವರ ಡಾನ್ಸ್ ನ ಪ್ರತಿಯೊಂದು ವೀಡಿಯೋ ಸಹಾ ವೈರಲ್ ಆಗುವಂತಹ ವಿಡಿಯೋ ಆಗಿರುತ್ತದೆ. ಧನಾಶ್ರೀ ವರ್ಮಾ ವೃತ್ತಿಯಿಂದ ವೈದ್ಯೆ. ಆದರೆ ಅವರು ಜನಪ್ರಿಯತೆಯನ್ನು ಪಡೆದುಕೊಂಡಿರುವುದು ಮಾತ್ರ ಒಬ್ಬ ಯೂಟ್ಯೂಬರ್ ಹಾಗೂ ಕೊರಿಯೋಗ್ರಾಫರ್ ಮತ್ತು ಡ್ಯಾನ್ಸರ್ ಆಗಿ. ಅವರ ಪ್ಯಾಷನ್ ಅವರಿಗೆ ದೊಡ್ಡ ಹೆಸರನ್ನು ತಂದು ಕೊಟ್ಟಿದೆ. ಧನಾಶ್ರೀ ವರ್ಮಾ ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಯಜ್ವೇಂದ್ರ ಚಹಲ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ಸೋಷಿಯಲ್ ಮೀಡಿಯಾಗಳಲ್ಲಿ ಮತ್ತಷ್ಟು ಜನಪ್ರಿಯ ಆದರು‌. ವಿವಾಹದ ನಂತರ ಕೂಡಾ ಅವರ ಚಾರ್ಮ್ ದುಪ್ಪಟ್ಟಾಯಿತು. ಧನಾಶ್ರೀ ಅವರ ವಿಡಿಯೋಗಳು ಕಡಿಮೆ ಸಮಯದಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ವೀಕ್ಷಣೆ ಮಾಡಲ್ಪಡುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಡ್ಯಾನ್ಸಿಂಗ್ ಕ್ರೇಜ್ ಅನ್ನು ಇವರ ಡಾನ್ಸ್ ಗಳು ಹುಟ್ಟು ಹಾಕುತ್ತಿವೆ.

ಸೋಶಿಯಲ್ ಮೀಡಿಯಾಗಳಲ್ಲಿ ಧನಾಶ್ರೀ ಅವರ ಫಾಲೋಯಿಂಗ್ ಕೂಡಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ‌. ಧನಾಶ್ರೀ ವರ್ಮಾ ಅವರು ಬಹುತೇಕ ಬಾಲಿವುಡ್ ಡಾನ್ಸ್ ಗಳು ಹಾಗೂ ಸುಪ್ರಸಿದ್ಧ ಪಂಜಾಬಿ ಹಾಡುಗಳಿಗೆ ಆಗಾಗ ತನ್ನದೇ ಆದ ಶೈಲಿಯಲ್ಲಿ ಡ್ಯಾನ್ಸ್ ಗಳನ್ನು ಮಾಡುವುದುಂಟು. ಅವರು ಮಾಡುವ ಡ್ಯಾನ್ಸ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಹೀಗೆ ಶೇರ್ ಮಾಡುವ ಡ್ಯಾನ್ಸ್ ವಿಡಿಯೋಗಳು ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಸಖತ್ ವೈರಲ್ ಆಗುತ್ತದೆ. ಅವರ ಅಭಿಮಾನಿಗಳ ಕಡೆಯಿಂದ ಅಸಂಖ್ಯಾತ ಮೆಚ್ಚುಗೆಗಳು, ಕಾಮೆಂಟ್ ಗಳು ಹರಿದುಬರುತ್ತದೆ.

ಧನಾಶ್ರೀ ವರ್ಮಾ ಕೆಲವೇ ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಹೊಸ ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಎಂದಿನಂತೆ ಈ ವಿಡಿಯೋವನ್ನೂ ಈಗಾಗಲೇ ಲಕ್ಷಾಂತರ ಮಂದಿ ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ವೀಕ್ಷಣೆಯನ್ನು ಮಾಡಿದ್ದಾಗಿದೆ. ಸಾವಿರಾರು ಜನ ವಿಡಿಯೋಗೆ ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಈ ಬಾರಿ ಧನಾಶ್ರೀ ವರ್ಮಾ ಬಾಲಿವುಡ್‌ ನ ಒಂದು ಸೂಪರ್ ಹಿಟ್ ಸಾಂಗ್ ಅನ್ನು ಸೆಲೆಕ್ಟ್ ಮಾಡಿಕೊಂಡು, ಅದಕ್ಕೆ ತನ್ನದೇ ಆದ ಶೈಲಿಯಲ್ಲಿ, ಸೂಪರ್ ಸ್ಟೆಪ್ ಗಳನ್ನು ಹಾಕಿ ಬಹಳ ಎನರ್ಜೆಟಿಕ್ ಆಗಿ ಕುಣಿದಿದ್ದಾರೆ.

ವಿಡಿಯೋ ನೋಡಿ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಗಾಯಕ ಹಾಗೂ ನಟನಾಗಿರುವ ದಿಲ್ಜಿತ್ ದೊಸಾಂಜ್ ಇಬ್ಬರೂ ಜೊತೆಯಾಗಿ ನಟಿಸಿರುವ ಗುಡ್ ನ್ಯೂಸ್ ಸಿನಿಮಾದ ಸೌದಾ ಕರಾ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾರೆ ಧನಾಶ್ರೀ.. ಅವರು ಡಾನ್ಸ್ ನಲ್ಲಿ ಕಪ್ಪು ಟ್ರ್ಯಾಕ್ ಪ್ಯಾಂಟ್ ಹಾಗೂ ಕೆಂಪು ಟೀ ಶರ್ಟ್ ಒಂದನ್ನು ಧರಿಸಿದ್ದು, ಡಾನ್ಸ್ ಪ್ರಿಯರು ಹುಚ್ಚೆದ್ದು ಕುಣಿಯುವಂತಹ ಸ್ಟೆಪ್ ಗಳನ್ನು ಹಾಕಿದ್ದಾರೆ.. ಡ್ಯಾನ್ಸ್ ಅನ್ನು ಬಹಳ ಇಷ್ಟಪಡುವವರು ಧನಾಶ್ರೀ ವರ್ಮಾ ಜೊತೆ ಹೆಜ್ಜೆ ಹಾಕಿದರೂ ಕೂಡಾ ಅದು ಅತಿಶಯೋಕ್ತಿ ಖಂಡಿತ ಅನಿಸುವುದಿಲ್ಲ ಎನ್ನುವಂತೆ ಧನಾಶ್ರೀ ಬಹಳ ಜೋಶ್ ನಿಂದ ಸ್ಟೆಪ್ ಗಳನ್ನು ಹಾಕಿ ರಂಜಿಸಿದ್ದಾರೆ.