ಅಜ್ಜಿಯ ಬರೀ 15 ಸೆಕೆಂಡಿನ ಡಾನ್ಸ್ ಟಷನ್ ನೋಡಿ, ಫುಲ್ ಫ್ರೆಶ್! 70/80 ಹರೆಯದಲ್ಲೂ ಉಕ್ಕುವ ಸ್ಫೂರ್ತಿ.

ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿ ಪಡುವಂತಹ ವಿಡಿಯೋಗಳು ಮತ್ತು ಫೋಟೋಗಳು ಕೆಲವೊಮ್ಮೆ ನೋಡಲು ಸಿಗುತ್ತವೆ. ಇಂಥ ಕಂಟೆಂಟ್ ಗಳನ್ನು ನೋಡಿದಾಗ ನಿಜಕ್ಕೂ ಒಮ್ಮೆಲೆ ನಂಬಲು ಸಾಧ್ಯವಾಗುವುದಿಲ್ಲ. ಈಗ ಅಜ್ಜಿಯು ಡಾನ್ಸ್ ಮಾಡುವ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ. ಈ ಡಾನ್ಸ್ ನೋಡಿದಾಗ ಬೇಂದ್ರೆ ಅವರ ಮಾತು ನೆನಪಿಗೆ ಬರುತ್ತದೆ. 60 ರ ನಂತರ ಅರಳೋ ಮರುಳೋ ಎನ್ನುವ ನುಡಿಗೆ ತುಂಬಾ ಸುಂದರವಾಗಿ ತಿರುಗಿಸಿ ಇಟ್ಟಿದ್ದರು ಬೇಂದ್ರೆ ಅಜ್ಜ. ಈ ಶಬ್ದಗಳ ಗಾರುಡಿಗ ಅರಳೋ ಮರುಳೋ ಅಲ್ಲ ‘ಮರಳಿ ಅರಳು’ ಎಂದಿದ್ದರು.

ಈ ಮೇಲಿನ ಮಾತುಗಳನ್ನೇ ಬಹುಶಃ ಅಜ್ಜಿ ತಮ್ಮ ಡಾನ್ಸ್ ಮಾಡುತ್ತಾ ಹೇಳುತ್ತಿರಬೇಕು ಎನಿಸುತ್ತದೆ. ಜನ ಸ್ವಲ್ಪ ವಯಸ್ಸಾದರೆ ಸಾಕು ಎಲ್ಲವೂ ಮುಗಿಯಿತು ಎನ್ನುವ ಹಾಗೆ ಸದಾ ಋಣಾತ್ಮಕ ಮಾತುಗಳನ್ನೇ ಆಡುತ್ತಿರುತ್ತಾರೆ. ಅಂಥವರ ಜೀವನಕ್ಕೆ ಈ ಅಜ್ಜಿ ಚೇತನೆಯ ಚಿಲುಮೆಯಾಗಿದ್ದಾರೆ.

ಅಜ್ಜಿಯು ಈ ಡಾನ್ಸ್ ನಲ್ಲಿ ಬರೀ 15 ನಿಮಿಷ ಪರ್ ಫಾರ್ಮನ್ಸ್ ತೋರಿಸಿದ್ದಾರೆ. ಆದರೆ ಅದು ಸಖತ್ತಾಗಿದೆ. ಈ ಹಾಡಿಗೆ ಬಾಲಿವುಡ್ ಫೇಮಸ್ ಸಾಂಗ್ ‘ಡಮ್ ಡಮ್ ಡಿಗಾ ಡಿಗಾ’ ಆಯ್ದುಕೊಂಡಿದ್ದಾರೆ. ಈ ಹಾಡಿಗೆ ತುಂಬಾ ಸುಂದರವಾಗಿ ಹಾಗೂ ಅಷ್ಟೇ ಆಕ್ಟಿವ್ ಆಗಿ ಹೆಜ್ಜೆಗಳನ್ನು ಹಾಕಿದ್ದಾರೆ. ಅಜ್ಜಿಯವರು ಈ ವಯಸ್ಸಿನಲ್ಲಿ ಮಾಡಿದ ಈ ಡಾನ್ಸ್ ಯುವಕರಿಗೂ ಸ್ಫೂರ್ತಿಯಾಗಿದೆ ಎಂದರೆ ತಪ್ಪಲ್ಲ. ಜೀವನದ ಸಂಧ್ಯಾಕಾಲದಲ್ಲಿಯೂ ಬದುಕನ್ನು ಪ್ರೀತಿಯಿಂದ ನೀಡುವ ಈ ಅಜ್ಜಿ ತುಂಬಾನೇ ಗ್ರೇಟ್ ಎನ್ನಬಹುದು.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಸಾಕಷ್ಟು ಜನರು ನೋಡಿ ಆನಂದಿಸಿದ್ದಾರೆ, ಜೊತೆಗೆ ಭರ್ಜರಿಯಾಗಿ ಲೈಕ್ ಸಹ ಮಾಡಿದ್ದಾರೆ. ಅಜ್ಜಿಯ ಹುಮ್ಮಸ್ಸನ್ನು ನೋಡಿ ಅನೇಕ ನೆಟ್ಟಿಗರು ತಮ್ಮ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೋಂದಾಯಿಸಿದ್ದಾರೆ.