ಅತ್ತೆ ಮನೆಯಲ್ಲಿ ಸೊಸೆಯನ್ನು ಯಾರೇ ಥಳಿಸಿದರೂ ಕೂಡಾ ಅದಕ್ಕೆ ಆಕೆಯ ಪತಿಯೇ ಹೊಣೆಯಾಗಿರುತ್ತಾನೆ: ಸುಪ್ರೀಂ ಕೋರ್ಟ್
ದೇಶದಲ್ಲಿ ಮಹಿಳೆಯರ ರಕ್ಷಣೆಗಾಗಿ ಈಗಾಗಲೇ ಅನೇಕ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಮಹಿಳಾ ಶೋಷಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಕಾನೂನು ಸಾಕಷ್ಟು ಶಿಸ್ತಿನ ಕ್ರಮಗಳನ್ನು ಕೂಡಾ ಕೈಗೊಂಡಿದೆ ಎನ್ನುವುದು ಕೂಡಾ ತಿಳಿದಿರುವ ವಿಷಯವೇ ಆಗಿದೆ. ಈಗ ಇದೆಲ್ಲವುಗಳ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಅತ್ತೆಯ ಮನೆಯಲ್ಲಿ ಸೊಸೆಯ ಮೇಲೆ ನಡೆಯುವ ಹಲ್ಲೆಯ ಕುರಿತಾಗಿ ಸುಪ್ರೀಂ ಕೋರ್ಟ್ ಒಂದು ಮಹತ್ವದ ಹೇಳಿಕೆಯನ್ನು ನೀಡಿದೆ. ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆಯ ಪ್ರಕಾರ ಅತ್ತೆ ಮನೆಯಲ್ಲಿ ಸೊಸೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆದರೆ, ಆಕೆಯನ್ನು ಥಳಿಸಿದರೆ ಆಗ ಅದಕ್ಕೆ ನೇರವಾಗಿ ಆಕೆಯ ಪತಿಯೇ ಕಾರಣನಾಗುತ್ತಾನೆ ಎಂದು ಹೇಳಲಾಗಿದೆ. ಮಹಿಳೆಯನ್ನು ಆಕೆಯ ಪತಿಯ ಸಂಬಂಧಿಕರು ಥಳಿಸಿದರೂ ಕೂಡಾ ಅದಕ್ಕೆ ನೇರ ಹೊಣೆಗಾರಿಕೆ ಪತಿಯದ್ದೇ ಆಗಿರುತ್ತದೆ ಎನ್ನಲಾಗಿದೆ.
ನ್ಯಾಯಾಲಯವು ಮಹಿಳೆಯೊಬ್ಬರನ್ನು ಥಳಿಸಿದ ಪ್ರಕರಣದಲ್ಲಿ ಆ ರೋ ಪಿಗೆ ಜಾಮೀನು ನೀಡಲು ತಿರಸ್ಕರಿಸಿದೆ. ಆ ರೋ ಪಿ ಗಳ ವಕೀಲರು ನ್ಯಾಯಾಧೀಶರ ಮುಂದೆ ಪದೇ ಪದೇ ಜಾಮೀನಿನ ಮನವಿಯನ್ನು ಮಾಡಿದ್ದಾಗ, ಪ್ರಧಾನ ನ್ಯಾಯಾಧೀಶರು, ಆ ಮಹಿಳೆಯು ಆರೋ ಪಿಗಳು ಆಕೆಯ ಕುತ್ತಿಗೆ ಹಿಸುಕಿ ಕೊ ಲ್ಲುವ ಪ್ರಯತ್ನವನ್ನು ಮಾಡಿದ್ದಾರೆ. ಅಲ್ಲದೇ ಆಕೆಗೆ ಬಲವಂತವಾಗಿ ಗರ್ಭಪಾತ ವನ್ನು ಮಾಡಿಸಿದ್ದಾರೆ ಎನ್ನಲಾಗಿದೆ. ಪತ್ನಿಯನ್ನು ಕ್ರಿಕೆಟ್ ಬ್ಯಾಟ್ ನಿಂದ ಹೊಡೆಯುವ ನೀನು ಎಂತಹ ಗಂಡಸು ಎಂದು ನ್ಯಾಯಧೀಶರು ಮಹಿಳೆಯ ಆ ರೋ ಪಿ ಪತಿಯನ್ನು ಪ್ರಶ್ನೆ ಮಾಡಿದ್ದಾರೆ.

ಆಗ ಆ ರೋ ಪಿ ಪರ ವಕೀಲರು ವಾದ ಮಾಡುತ್ತಾ ಆಕೆಯನ್ನು ಬ್ಯಾಟ್ ನಿಂದ ಹೊ ಡೆ ದಿದ್ದು ಮಹಿಳೆಯ ಪತಿಯಲ್ಲ, ಬದಲಿಗೆ ತಮ್ಮ ಕ್ಲೈಂಟ್ ನ ತಂದೆ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯ ಪೀಠವು ಇಲ್ಲಿ ಹೊಡೆದಿದ್ದು ಆಕೆಯ ಪತಿಯೇ ಆಗಿರಲಿ ಅಥವಾ ಪತಿಯ ತಂದೆಯೇ ಆಗಿರಲಿ ಅದು ತಪ್ಪು. ಮಹಿಳೆಯ ಮೇಲೆ ಹ ಲ್ಲೆ ನಡೆಸಿರುವುದು ವಾಸ್ತವ. ಅಲ್ಲದೇ ಅತ್ತೆ ಮನೆಯಲ್ಲಿ ಸೊಸೆಗೆ ಯಾರೇ ಥಳಿಸಿದರೂ ಕೂಡಾ ಅದಕ್ಕೆ ನೇರ ಹೊಣೆ ಆಕೆಯ ಪತಿಯೇ ಆಗಿರುತ್ತಾನೆ ಎಂದು ನ್ಯಾಯಪೀಠವು ಹೇಳಿದ್ದು, ಸೊಸೆಗೆ ಅತ್ತೆಯ ಮನೆಯಲ್ಲಿ ಎದುರಾಗುವ ದೈಹಿಕ ಹಿಂ ಸೆಗೆ ಪತಿಯೇ ಕಾರಣನಾಗುವನು ಎನ್ನುವ ಎಚ್ಚರಿಕೆಯನ್ನು ಕೋರ್ಟ್ ನೀಡಿದೆ.
ಈ ಪ್ರಕರಣದಲ್ಲಿ ಮಹಿಳೆ ತನ್ನ ಪತಿಯ ವಿ ರು ದ್ಧ ಕೋರ್ಟ್ ಮೆಟ್ಟಿಲೇರಿದ್ದು, ಆಕೆಯ ಪತಿಗೆ ಇದು ಮೂರನೇ ವಿವಾಹ ಎನ್ನಲಾಗಿದೆ. ಕಳೆದ ವರ್ಷ ಜೂನ್ ನಲ್ಲಿ ಮಹಿಳೆ ಲುಧಿಯಾನಾದಲ್ಲಿ ತನ್ನ ಗಂಡ ಮತ್ತು ಅತ್ತೆ ಮನೆಯವರ ಮೇಲೆ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದರು. ಮಹಿಳೆಯು ತನ್ನ ಆ ರೋ ಪದಲ್ಲಿ ದಿನದಿಂದ ದಿನಕ್ಕೆ ಅತ್ತೆ ಮನೆಯವರು ಮಾಡುತ್ತಿರುವ ವರದಕ್ಷಿಣೆಯ ಬೇಡಿಕೆಯನ್ನು ತೀರಿಸಲು ಸಾಧ್ಯವಾಗುತ್ತಿಲ್ಲ, ವರದಕ್ಷಿಣೆ ಬೇಡಿಕೆ ತೀರಿಸದ ಕಾರಣ ತನಗೆ ತೀ ವ್ರ ವಾಗಿ ಥಳಿಸಿದ್ದಾರೆ ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದರು.

ಈ ಹೊಸ ನಿರ್ಣಯದ ಮೂಲಕ ಕೋರ್ಟ್ ಮಹಿಳೆಯ ಮೇಲೆ ಅತ್ತೆಯ ಮನೆಯಲ್ಲಿ ದೌ ರ್ಜ ನ್ಯ ನಡೆದರೆ ಅದಕ್ಕೆ ಕಾರಣ ಆಕೆಯ ಪತಿ ಎನ್ನುವ ಎಚ್ಚರಿಕೆ ನೀಡಿದೆ. ದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಸರ್ಕಾರ ಹಾಗೂ ಕಾನೂನುಗಳು ಸದೃಢವೇನೋ ಆಗುತ್ತಿವೆ. ಆದರೆ ಇದೇ ವೇಳೆ ಕೆಲವು ಕಡೆ ಮಹಿಳೆಯರು ತಮ್ಮ ಸುರಕ್ಷತೆಗೆ ಇರುವ ಕಾನೂನುಗಳನ್ನು ದು ರ್ಬಳಕೆ ಮಾಡಿಕೊಳ್ಳುತ್ತಿರುವುದು ಕೂಡಾ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವವರು ಇದರ ಬಗ್ಗೆ ಕೂಡಾ ಎಚ್ಚರವನ್ನು ವಹಿಸಬೇಕಾದ ಅಗತ್ಯವಿದ್ದು, ಎಲ್ಲಾ ಪ್ರಕರಣಗಳಲ್ಲಿ ಕೂಡಾ ಮಹಿಳೆಯೇ ಸರಿ ಎನ್ನುವುದನ್ನು ಪರಿಶೀಲಿಸುವ ಅಗತ್ಯ ಇರುತ್ತದೆ.