ಅದೃಷ್ಟ! ಬೀಸುವ ಗಾಳಿಯಲ್ಲಿ ತೂರಿಕೊಂಡು ಬಂದ ಯಮನಿಂದ ಕೂದಲೆಳೆ ಅಂತರದಲ್ಲಿ ಬದುಕುಳಿದ ಯುವಕ! ವಿಡಿಯೋ ವೈರಲ್.
ಅನಾಹುತಗಳು ಯಾವತ್ತೂ ಹೇಳಿ ಕೇಳಿ ಘಟಿಸುವದಿಲ್ಲ, ಎಲ್ಲವೂ ಹಠಾತ್ತನೆ ಮತ್ತು ಯೋಚಿಸುವ ಮೊದಲೇ ನಡೆದು ಹೋಗುತ್ತವೆ. ಆದರೂ ಅಂತ ದುರ್ಘಟನೆಗಳಲ್ಲಿ ಕೆಲವರು ತುಂಬಾ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿಯುತ್ತಾರೆ. ಸದ್ಯ ಭಾರತದ ಆಗ್ನೇಯಕ್ಕೆ ಅಸನಿ ಸೈಕ್ಲೋನ್ ಬಂದು ಅಪ್ಪಳಿಸಿದೆ. ವೇಗದ ಗಾಳಿ ಜೊತೆಗೆ ಮಳೆಯೂ ತನ್ನ ಪ್ರಭಾವವನ್ನು ತೋರಿಸುತ್ತಿದೆ. ಈ ರೀತಿಯ ಗಾಳಿ ಮತ್ತು ಮಳೆಗೆ ಮನೆಯ ಮೇಲೆ ಹಾಕಿದ ತಗಡಿನ ಶೀಟ್ಗಳು ಅನಾಮತ್ತಾಗಿ ಹಾರಿ ಹೋಗುವುದು ಸಹಜ. ಕೆಲವೊಮ್ಮೆ ಈ ಶೀಟುಗಳು ಮನುಷ್ಯರ ಜೀವಕ್ಕೆ ಕುತ್ತು ತರುತ್ತವೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕೇವಲ 11 ಸೆಕೆಂಡುಗಳ ಈ ವಿಡಿಯೋ ನೋಡಿದಾಗ ಒಮ್ಮೆಲೆ ದೇಹ ಕಂಪಿಸುವದು. ವಿಡಿಯೋ ನಿರ್ದಿಷ್ಟವಾಗಿ ಎಲ್ಲಿಯದು ಎಂಬುದು ಗೊತ್ತಾಗಿಲ್ಲ. ಪರಿಸರ ನೋಡಿದಾಗ ಹಳ್ಳಿ ಇದೆ ಎಂಬುದು ಗೊತ್ತಾಗುತ್ತದೆ. ವ್ಯಕ್ತಿಯೊಬ್ಬನು ಸಹಜವಾಗಿ ಮೊಬೈಲ್ ನಿಂದ ಶೂಟ್ ಮಾಡುತ್ತಿರುವಾಗ ಎದುರಿನ ಮನೆಯ ಮನೆಯ ಮೇಲಿನ ತಗಡಿನ ಶೀಟ್ ಒಂದು ವೇಗದ ಗಾಳಿಗೆ ತೂರಿಕೊಂಡು ಬಂದಿದೆ. ಗಾಳಿಯು ತುಂಬಾ ಜೋರಾಗಿ ಬೀಸುತ್ತಿರುವುದರಿಂದ ಸುತ್ತಮುತ್ತಲಿನ ಮರಗಳು ಹವೆಯಲ್ಲಿ ಒಂದೇಸಮನೆ ತೇಲಾಡುತ್ತಿವೆ. ಅಷ್ಟರಲ್ಲಿ ಕ್ಯಾಮೆರಾ ಎದುರಿಗಿರುವ ಇಬ್ಬರು ವ್ಯಕ್ತಿಗಳ ಮೇಲೆ ಬಂದು ನಿಲ್ಲುತ್ತದೆ. ಇಬ್ಬರು ವ್ಯಕ್ತಿಗಳು ಬೈಕಿನ ಮೇಲೆ ಎಲ್ಲಿಯಾದರೂ ಹೋಗಲು ರೆಡಿಯಾಗಿರುತ್ತಾರೆ. ಹಿಂದಿನ ಬ್ಲೂ ಬಣ್ಣದ ಶರ್ಟ್ ತೊಟ್ಟುಕೊಂಡಿರುವ ವ್ಯಕ್ತಿ ಸಹಜವಾಗಿ ತನ್ನ ಬಲ ಬದಿಗೆ ದೃಷ್ಟಿ ಹಾಯಿಸಿದಾಗ ಆತನಿಗೆ ತನ್ನ ಮರಣವೇ ತಗಡಿನ ಶೀಟ್ ಮುಖಾಂತರ ಬರುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಅದನ್ನು ಗಮನಿಸಿದ ಯುವಕ ಮುಂದಿನ ಅವಘಡವನ್ನು ಕ್ಷಣಾರ್ಧದಲ್ಲಿ ತಿಳಿದುಕೊಂಡು ತೂರಿಕೊಂಡು ಬರುತ್ತಿರುವ ತಗಡಿನ ಶೀಟ್ ನ ದಾರಿಯಿಂದ ಹಠಾತ್ತನೆ ಸರಿದು ಬಿಡುತ್ತಾನೆ. ಆತ ಬದಿಗೆ ಸರಿಯಲು ಬರೀ ಒಂದು ಕ್ಷಣವೂ ಲೇಟ್ ಆಗಿದ್ದರೆ ಆ ಶೀಟ್ ಬಂದು ಆತನ ಜೀವವನ್ನೇ ತೆಗೆದುಕೊಳ್ಳುವುದರಲ್ಲಿತ್ತು. ಯುವಕ ಕ್ಷಣದಲ್ಲಿ ಎಚ್ಚೆತ್ತುಕೊಂಡು ಸಾವಿಗೆ ಕಟ್ ಹೊಡೆದು ತನ್ನ ಮಾರ್ಗ ಬದಲಿಸಿಕೊಂಡಿದ್ದಾನೆ.
ನೋಡಿ ಈ ವಿಡಿಯೋ..
ಪ್ರಸ್ತುತ ವಿಡಿಯೋ ಯುಟ್ಯೂಬ್ ಚಾನೆಲ್ ನಿಂದ ಶೇರ್ ಮಾಡಲಾಗಿದೆ.