ಅದ್ಭುತ ಡಾನ್ಸ್ ಮಾಡುತ್ತಿದ್ದ ನೋರಾಗೆ ಬಿತ್ತು ಮಮ್ಮಿ ಎಸೆದ ಚಪ್ಪಲಿ ಏಟು: ವೈರಲ್ ವೀಡಿಯೋ ನೋಡಿ ನಕ್ಕರು ನೆಟ್ಟಿಗರು

ಬಾಲಿವುಡ್ ನ ಜನಪ್ರಿಯ ನಟಿ ಹಾಗೂ ಪ್ರಸ್ತುತ ಬಾಲಿವುಡ್ ನ ಡಾನ್ಸಿಂಗ್ ಸೆನ್ಸೇಷನ್ ಎಂದೇ ಕರೆಯಲ್ಪಡಿತ್ತಿರುವ ಅತ್ಯುತ್ತಮ ಡ್ಯಾನ್ಸರ್ ನೋರ ಫತೇಹಿ. ಈ ನಟಿ ಕಮ್ ಡಾನ್ಸರ್ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ವ್ಯಾಪಕವಾಗಿ ಸುದ್ದಿಯಲ್ಲಿರುತ್ತಾರೆ. ನೋರಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತನ್ನ ಅಂದವಾದ ಫೋಟೋಗಳು ಹಾಗೂ ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾ ಸದಾ ಅವರ ಸಂಪರ್ಕದಲ್ಲಿರುತ್ತಾರೆ. ನೋರಾ ತನ್ನ ಡ್ಯಾನ್ಸ್ ಮಾತ್ರವೇ ಅಲ್ಲದೆ ತನ್ನ ಲುಕ್ ಹಾಗೂ ಸ್ಟೈಲ್ ನಿಂದಾಗಿ ಕೂಡಾ ಅಭಿಮಾನಿಗಳ ಮನಸ್ಸನ್ನು ಸೂರೆಗೊಳ್ಳುವ ಯಾವುದೇ ಅವಕಾಶವನ್ನು ಕೂಡ ಕೈಜಾರಿ ಹೋಗಲು ಬಿಡುವುದಿಲ್ಲ. ನೋರಾ ತನ್ನ ಫ್ಯಾಷನ್ ಹಾಗೂ ಸ್ಟೈಲಿಶ್ ಡ್ರೆಸ್ ಗಳಿಂದಾಗಿ ಕೂಡ ಸಿನಿಮಾ ಜಗತ್ತಿನ ಸುದ್ದಿಗಳಲ್ಲಿ ಸದಾ ಮಂಚೂಣಿಯಲ್ಲಿ ಇರುತ್ತಾರೆ.

ನೋರಾ ಡ್ಯಾನ್ಸ್ ಗಳೆಂದರೆ ಅದಕ್ಕೆ ಪ್ರತ್ಯೇಕವಾದ ಅಭಿಮಾನಿಗಳ ಬಳಗವೇ ಇದೆ. ಬಾಲಿವುಡ್ ನಲ್ಲಿ ಪ್ರಸ್ತುತ ಡ್ಯಾನ್ಸ್ ಗಳ ವಿಷಯ ಬಂದಾಗ ನೋರ ಹೆಸರನ್ನು ಹೇಳುವಷ್ಟರ ಮಟ್ಟಿಗೆ ತನ್ನ ಛಾಪನ್ನು ಮೂಡಿಸಿದ್ದಾರೆ ಈಕೆ. ಸಿನಿಮಾಗಳಲ್ಲಿ ನೋರಾ ಡ್ಯಾನ್ಸ್ ಮಾಡಿರುವ ಹಾಡುಗಳು ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿವೆ ಎನ್ನುವುದು ವಾಸ್ತವ. ಸೋಶಿಯಲ್ ಮೀಡಿಯಾದಲ್ಲಿ ನೋರಾರ ಒಂದು ಹಳೆಯ ವಿಡಿಯೋ ಪ್ರಸ್ತುತ ಸಿಕ್ಕಾಪಟ್ಟೆ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆದಿದೆ. ಈ ವಿಡಿಯೋ ಯಾವ ಮಟ್ಟಕ್ಕೆ ವೈರಲ್ ಆಗಿದೆ ಎಂದರೆ, ಈಗಾಗಲೇ ಇದನ್ನು ವಿಡಿಯೋವನ್ನು 77 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ.

ಹಾಗಾದರೆ ನೋರಾ ಅವರ ಈ ಡ್ಯಾನ್ಸ್ ವಿಡಿಯೋ ವಿಶೇಷತೆಯಾದರೂ ಏನು? ಎಂದು ಹೇಳುವುದಾದರೆ, ಇದೊಂದು ಹಳೆಯ ವಿಡಿಯೋ ಆಗಿದ್ದ, ಒಂದು ಕಡೆ ನೋರಾ ಬಹಳ ಉತ್ಸಾಹದಿಂದ ಕುಣಿಯುತ್ತಿದ್ದರೆ, ಇನ್ನೊಂದು ಕಡೆ ಅವರ ತಾಯಿ ಕೋಪದಿಂದ ಮಗಳ ಕಡೆಗೆ ಚಪ್ಪಲಿಯನ್ನು ಎಸೆದಯ ಹೊಡೆಯುವುದನ್ನು ಗಮನಿಸಬಹುದಾಗಿದೆ. ವಿಡಿಯೋದಲ್ಲಿ ನೋರಾ ವ್ಯಾಪ್ ಚಾಲೆಂಜನ್ನು ಪೂರ್ತಿ ಮಾಡುತ್ತಿದ್ದಾರೆ. ಆಕೆ ಒಂದು ಅದ್ಭುತವಾದ ಡ್ಯಾನ್ಸ್ ಅನ್ನು ಮಾಡುವಾಗಲೇ ಆಕೆಯ ತಾಯಿ ಅಡುಗೆ ಮನೆಯಲ್ಲಿ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಆದರೆ ಮಗಳ ಡಾನ್ಸ್ ಹಾಗೂ ಮಾತನ್ನು ಕೇಳಿಸಿಕೊಂಡು ಆಕೆ ಹೊರಗಡೆ ಬರುತ್ತಾರೆ.

ಮಗಳು ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಿ ಕೋಪದಿಂದ ಚಪ್ಪಲಿಯನ್ನು ಎಸೆದು ಮಗಳನ್ನು ಹೊಡೆದು, ಜನರು ಕೊರೊನಾದಿಂದ ಸಾಯುತ್ತಿದ್ದಾರೆ, ನಿಮಗೆ ವ್ಯಾಪ್ ಚಾಲೆಂಜ್ ಬೇಕಾ? ಎಂದು ಆಕೆ ಕೂಗಾಡುತ್ತಾರೆ. ಈ ವಿಡಿಯೋವನ್ನು ನೋರಾ ಕೇವಲ ಮನರಂಜನೆ ನೀಡುವ ಸಲುವಾಗಿ ಮಾಡಿದ್ದು ವಿಡಿಯೋದಲ್ಲಿ ತನ್ನ ತಾಯಿಯ ಪಾತ್ರವನ್ನು ಕೂಡಾ ತಾನೇ ನಿರ್ವಹಿಸಿದ್ದಾರೆ. ನೋರಾ ಶೇರ್ ಮಾಡಿ ಕೊಂಡ ಈ ವಿಡಿಯೋವನ್ನು ನೋಡಿ ಬಾಲಿವುಡ್‌ ನ ತಾರೆಯರು ಕೂಡಾ ತಮ್ಮ ನಗುವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ ನೋರಾ ಅಭಿನಯದ ಛೋಡ್ ದಂಗೆ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇತರ ಹಾಡಿನಲ್ಲಿ ಕೆಂಪು ಬಣ್ಣದ ಡ್ರೆಸ್ ನಲ್ಲಿ ನೋರಾ ಬಹಳ ಸುಂದರವಾಗಿ ಕಂಡಿದ್ದು, ಆಕೆಯ ನಟನೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ.

ನೋರಾ ಈ ಮೊದಲು ಕೂಡಾ ತಾನು ಡ್ಯಾನ್ಸ್ ಮಾಡಿರುವ ಹಾಡುಗಳಿಗೆ ಜೀವ ತುಂಬಿದ್ದು, ತನ್ನ ಹೆಜ್ಜೆಗಳ ಮೂಲಕ ಜನರನ್ನು ಹುಚ್ಚೆದ್ದು ಕುಣಿಸಿದ್ದಾರೆ. ಒಂದೊಂದು ಹಾಡಿನಲ್ಲೂ ಕೂಡ ತನ್ನ ಡ್ಯಾನ್ಸ್ ಕೌಶಲ್ಯವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಗುರು ರಾಂಧವ ಅವರ ಜೊತೆ ಮಾಡಿದ ನಾಚ್ ಮೇರಿ ರಾಣಿ ಡಾನ್ಸ್ ಯೂಟ್ಯೂಬ್ ಮತ್ತು ಇತರೆ ಸೋಶಿಯಲ್ ಮೀಡಿಯಾ ಗಳಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇನ್ನು ನೋರ ಭುಜಾ: ದ ಪ್ರೈಡ್ ಆಫ್ ಇಂಡಿಯಾ ಸಿನಿಮಾದಲ್ಲಿ ಕೂಡಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.