ಅದ್ಭುತ! ನಾಯಿಯೊಂದು ಮಗುವಿಗೆ ಅಂಬೆಗಾಲಿಡಲು ಕಲಿಸುತ್ತಿರುವ ವೀಡಿಯೊ ವೈರಲ್! ಲಕ್ಷಾಂತರ ಹೃದಯಗಳನ್ನು ಗೆಲ್ಲುವಲ್ಲಿ ಯಶಸ್ವಿ…
ಪ್ರಾಣಿಗಳು ಸಹ ಅದ್ಭುತವಾದ ಜ್ಞಾನವನ್ನು ಹೊಂದಿರುತ್ತವೆ ಎಂಬುದಕ್ಕೆ ಇನ್ನೊಂದು ಭರ್ಜರಿಯಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಸಾಕುಪ್ರಾಣಿಗಳಲ್ಲಿಯೇ ಎಲ್ಲರಿಗೂ ಪ್ರಿಯವಾದ ಹಾಗೂ ವಿಶ್ವಾಸಕ್ಕೆ ಪಾತ್ರವಾದ ಪೊಮೇರಿಯನ್ ಜಾತಿಯ ನಾಯಿಯೊಂದು ತನ್ನ ಜಾಣತನದಿಂದ ನೇಟಿಜನ್ಸ್ ಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ನೋಡುತ್ತಿರುವಂತೆ ಅನೇಕ ಪ್ರಾಣಿಗಳು ತಮ್ಮ ಜಾಣತನವನ್ನು ಮೇಲಿಂದ ಮೇಲೆ ತೋರಿಸಿ ಸೈ ಎನಿಸಿಕೊಂಡಿವೆ. ಇಂಥ ಪ್ರಾಣಿಗಳ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗುತ್ತವೆ. ಈಗ ನೋಡುವ 18 ಸೆಕೆಂಡ್ ಗಳ ವಿಡಿಯೋದಲ್ಲಿ ನಾಯಿಯೊಂದು ನಂಬಲಾಗದಷ್ಟು ಅದ್ಭುತ ಕೃತಿ ಮಾಡಿ ತೋರಿಸಿದೆ.
ಈ ವಿಡಿಯೋವನ್ನು ಟ್ವಿಟರ್ನಲ್ಲಿ ಐಎಫ್ಎಸ್ ಅಧಿಕಾರಿಯಾದ ಸುಸಂತ ನಂದ ಅವರು ಅಪ್ಲೋಡ್ ಮಾಡುವುದಷ್ಟೇ ತಡ ಲಕ್ಷಾವಧಿ ಜನರು ವೀಕ್ಷಿಸಿದ್ದಾರೆ. “ಬೋಧನೆಯ ಪ್ರಕ್ರಿಯೆ ಹೃದಯದಿಂದಾಗುವ ಕೆಲಸವಾಗಿದೆ, ಈ ನಾಯಿಮರಿಯು ಮಗುವಿಗೆ ಅಂಬೆಗಾಲಿಡುವ ಕಲೆಯನ್ನು ಕಲಿಸುವ ಪದ್ಧತಿ ತುಂಬಾ ಸುಂದರವಾಗಿದೆ” ಎಂದು ಕ್ಯಾಪ್ಷನ್ ನೀಡಿದ್ದಾರೆ.
ವಿಡಿಯೋದ ಪ್ರಾರಂಭದಲ್ಲಿ ಪುಟ್ಟ ಮಗುವೊಂದು ಹಾಸಿಗೆಯ ಮೇಲೆ ಪೊಮೆರೇನಿಯನ್ ನಾಯಿಯೊಂದಿಗೆ ಮಲಗಿರುವುದು ಕಂಡುಬರುತ್ತದೆ. ಮಗು ಅಂಬೆಗಾಲಿಡುವ ಸಂದರ್ಭದಲ್ಲಿ ಅಸಫಲವಾದಾಗ ನಾಯಿಯು ಮಗುವಿಗೆ ಅಂಬೆಗಾಲಿಡಲು ಕಲಿಸಲು ಮತ್ತು ಪ್ರಯತ್ನಿಸಲು ಸಹಾಯಮಾಡುತ್ತದೆ.
ನೇಟಿಜನ್ಸ್ ಗಳ ಹೃದಯ ಗೆದ್ದ ಈ ವಿಡಿಯೋದಲ್ಲಿ ಮಗು ನಾಯಿಯ ಚಲನೆಯನ್ನು ನಕಲು ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ನಾಯಿಯು ಮಗುವಿಗೆ ಕಲಿಸುವ ಸಲುವಾಗಿ ತನ್ನ ಮುಂಭಾಗದ ಕಾಲುಗಳಿಂದ ತೆವಳುತ್ತ ತೆವಳುತ್ತ ಮುಂದೆ ಸರಿಯುತ್ತಾ ಹೋಗುತ್ತದೆ. ಈ ರೀತಿ ಮಗುವಿಗೆ ನಾಯಿ ಅಂಬೆಗಾಲಿಡುವ ಪದ್ಧತಿಯನ್ನು ಹೃದಯದಿಂದ ಕಲಿಸುತ್ತಿದೆ. ಮಗುವಿಗೆ ಅಂಬೆಗಾಲಿಡುವ ಪದ್ಧತಿಯನ್ನು ಕಲಿಸುವ ನಾಯಿಯ ಈ ಪ್ರಯತ್ನ ನಿಜಕ್ಕೂ ಅದ್ಭುತವಾಗಿದೆ. ಈ ವಿಡಿಯೋ ನೋಡಿದರೆ ನೇಟಿಜನ್ಸ್ ಗಳು ಅನೇಕ ರೀತಿಯ ತಮ್ಮ ಪ್ರತಿಕ್ರಿಯೆಗಳನ್ನು ಹೊರಹಾಕಿದ್ದಾರೆ.
ನೋಡಿ ಈ ವೈರಲ್ ವಿಡಿಯೋ…
Teaching is a work of heart💕
— Susanta Nanda IFS (@susantananda3) November 19, 2021
Doggy teaching the design & art of crawling to the baby is so beautiful pic.twitter.com/mj8OOxDv3W