ಅದ್ಭುತ ಬ್ಯಾಟಿಂಗ್ ಸ್ಟೈಲ್ ಹೊಂದಿದ (SKY) ಸೂರ್ಯ ಕುಮಾರ್ ಯಾದವ್ ಅವರ ತಿಂಗಳ ಸಂಬಳ ನೋಡಿ ಇಷ್ಟು!
ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲೆಡೆಯೂ ಹೆಚ್ಚು ಹೆಸರು ಕೇಳಿ ಬರುತ್ತಿರುವ ಆಟಗಾರ ಎಂದರೆ ಭಾರತದ ಸೂರ್ಯ ಕುಮಾರ್ ಯಾದವ್. ಇವರು SKY ಹೆಸರಿನಿಂದಲೇ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರ ಅದ್ಭುತ ಬ್ಯಾಟಿಂಗ್ ಬರೀ ಭಾರತದವರಿಗೆ ಅಷ್ಟೇ ಅಲ್ಲ ಜಗತ್ತಿನ ಎಲ್ಲ ಕ್ರಿಕೆಟ್ ರಸಿಕರಿಗೆ ಮಂತ್ರಮುಗ್ಧಗೊಳಿಸಿದೆ. ಸದ್ಯ ಇವರ ತಿಂಗಳ ಸಂಬಳ ಎಷ್ಟು ಎಂಬುದರ ಬಗ್ಗೆ ಇಲ್ಲಿ ತಿಳಿಯುವ.

ಸೂರ್ಯ ಈಗ ಬಹು ಬೇಡಿಕೆಯ ಆಟಗಾರರಾಗಿದ್ದಾರೆ. ಇವರು ತಮ್ಮ ವಿಚಿತ್ರ ಶೈಲಿಯ ಬ್ಯಾಟಿಂಗ್ ನಿಂದಾಗಿ ಕ್ರಿಕೆಟ್ ರಸಿಕರಿಗೆ ಬಹು ಬೇಗನೆ ಪರಿಚಿತರಾಗಿದ್ದಾರೆ. ಇವರು T-20 ಯಲ್ಲಂತೂ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಇವರ ಪ್ರತಿ ತಿಂಗಳ ಆದಾಯ 75 ರಿಂದ 80 ಲಕ್ಷ ರೂಪಾಯಿಗಳಷ್ಟು ಎಂದು ತಿಳಿದು ಬಂದಿದೆ. ಇನ್ನು ಇವರ ನೆಟ್ ವರ್ಥ್ ಸುಮಾರು 32 ಕೋಟಿ ರೂಪಾಯಿಗಳಷ್ಟು ಇದೆ. ಪ್ರತಿಷ್ಠಿತ IPL ನಲ್ಲಿ 8 ಕೋಟಿ ರೂಪಾಯಿಗಳ ಮೊತ್ತಕ್ಕೆ ಬೇಡಿಕೆಯನ್ನು ಪಡೆದಿದ್ದಾರೆ. ಇದರ ಹೊರತಾಗಿ ಅನೇಕ ಬ್ರಾಂಡ್ ಎಂಡ್ರೋಸ್ ಮೆಂಟ್ ಮತ್ತು ಮ್ಯಾಚ್ ಫೀ ಗಳಿಕೆ ಬೇರೆಯೇ ಆಗಿದೆ. ಇಷ್ಟಾದರೂ ಸೂರ್ಯಾ ಅವರಿಗೆ BCCI ನ ಅನ್ಯುಲ್ ಕಾಂಟ್ರಾಕ್ಟ್ ಲಿಸ್ಟ್ ನಲ್ಲಿ ಶಾಮೀಲು ಮಾಡಿಲ್ಲ. ಇನ್ನೊಂದು ವಿಶೇಷ ಸಂಗತಿ ಎಂದರೆ ಸೂರ್ಯ ಅವರ ಪತ್ನಿಯ ಹೆಸರು ದಿವಿಶಾ ಶೆಟ್ಟಿ ಇದೆ.