ಅನಂತ್ ಅಂಬಾನಿ ನೀಡಿದ ಉತ್ತರ ಅಂದು ವೇದಿಕೆ ಮೇಲೆ ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಬಾಯಿಗೆ ಬೀಗ ಹಾಕುವಂತೆ ಮಾಡಿತ್ತು!

ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದಿರುವ, ಹಾಗೂ ಏಷ್ಯಾದ ನಂಬರ್ ಒನ್ ಶ್ರೀಮಂತ ದಂಪತಿ ಎಂದರೆ ಅದು ರಿಲಯನ್ಸ್ ನ ಒಡೆಯರಾದ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ. ಅದು ಮಾತ್ರವೇ ಅಲ್ಲದೇ ವಿಶ್ವದ ಬಹು ಚ ರ್ಚಿ ತ ದಂಪತಿಗಳು ಕೂಡಾ ಇವರಾಗಿದ್ದು, ಪ್ರತಿ ನಿತ್ಯವೂ ಕೂಡ ಒಂದಲ್ಲ ಒಂದು ಮಾಧ್ಯಮದಲ್ಲಿ ಮುಖೇಶ್ ಹಾಗೂ ನೀತಾ ಅಂಬಾನಿ ಅವರ ಕುರಿತಾಗಿ ಸುದ್ದಿಗಳು ಇದ್ದೇ ಇರುತ್ತದೆ. ಈ ದಂಪತಿಗೆ ಮೂರು ಜನ ಮಕ್ಕಳಿದ್ದಾರೆ. ಅವರೇ ಮಗಳು ಇಶಾ ಅಂಬಾನಿ ಮತ್ತು ಮಗ ಆಕಾಶ್ ಅಂಬಾನಿ. ಇವರಿಬ್ಬರು ಮುಖೇಶ್ ಮತ್ತು ನೀತಾ ಅವರ ಅವಳಿ ಮಕ್ಕಳಾದರೆ, ಅವರ ಕಿರಿ ಮಗನ ಹೆಸರು ಅನಂತ್ ಅಂಬಾನಿ. ಇದರಲ್ಲಿ ಅನಂತ್ ಅಂಬಾನಿ ತಮ್ಮ ತಂದೆಯಂತೆಯೇ ಬಹಳ ಸರಳವಾದ ಜೀವನವನ್ನು ಇಷ್ಟಪಡುವ ವ್ಯಕ್ತಿತ್ವವನ್ನು ಹೊಂದಿದ್ದಾರೆ.

ಅನಂತ್ ಅಂಬಾನಿ ಸರಳ ವ್ಯಕ್ತಿತ್ವದ ಜೊತೆಗೆ ಬುದ್ಧಿವಂತಿಕೆ ಹಾಗೂ ಮಾತುಗಾರಿಕೆಯಲ್ಲಿ ಕೂಡ ನಿಪುಣರಾಗಿದ್ದಾರೆ. ಅವರು ಆಡುವ ಸಮಯೋಚಿತವಾದ ಮಾತುಗಳು ಬಹಳ ಮೆಚ್ಚುಗೆಯನ್ನು ಕೂಡಾ ಪಡೆಯುವುದುಂಟು. ಅನಂತ್ ತಮ್ಮ ಮಾತಿನಿಂದಾಗಿ ಒಮ್ಮೆ ಬಾಲಿವುಡ್ ನ ದಿಗ್ಗಜ ನಟ ಶಾರುಖ್ ಖಾನ್ ಅವರನ್ನು ಕೂಡ ಸುಮ್ಮನೆ ಆಗುವಂತೆ, ಮರು ಪ್ರಶ್ನೆ ಮಾಡದಂತೆ ಮಾಡಿದ್ದರಂತೆ. 2017 ರಲ್ಲಿ ರಿಲಯನ್ಸ್ ಕಂಪನಿ 40 ಯಶಸ್ವಿ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗುಜರಾತ್ ನ ಜಾಮ್ ನಗರದಲ್ಲಿ ಒಂದು ಬಹುದೊಡ್ಡ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಬಹಳ ವೈಭವಯುತವಾಗಿ ಆಯೋಜನೆ ಮಾಡಿದ್ದ. ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದವರು ಮತ್ತಾರೂ ಅಲ್ಲ, ಬಾಲಿವುಡ್ ಬಾದ್ ಶಾ ಎಂದೇ ಖ್ಯಾತಿಯನ್ನು ಪಡೆದ ಜನಪ್ರಿಯ ನಟ ಶಾರುಖ್ ಖಾನ್ ಅವರು. ಶಾರೂಖ್ ಬಹಳ ಆ್ಯಕ್ಟೀವ್ ಮತ್ತು ಎನೆರ್ಜೆಟಿಕ್ ಆಗಿ ಅಂದು ಕಾರ್ಯಕ್ರಮ ನಡೆಸಿಕೊಡುತ್ತಾ, ವೇದಿಕೆಯ ಮೇಲೆ ಅವರು ಅಂಬಾನಿ ಅವರ ಕುಟುಂಬದ ಸದಸ್ಯರೊಡನೆ ಬಹಳಷ್ಟು ವಿಷಯಗಳನ್ನು ಮಾತನಾಡಿದ್ದರು, ಬಹಳಷ್ಟು ವಿಷಯಗಳನ್ನು ನೆರದಿದ್ದವರೊಂದಿಗೆ ಹಂಚಿಕೊಂಡಿದ್ದು ಮಾತ್ರವೇ ಅಲ್ಲದೆ ಮುಖೇಶ್ ಅಂಬಾನಿಯವರ ಮಕ್ಕಳ ಜೊತೆ ವೇದಿಕೆ ಮೇಲೆ ಭರ್ಜರಿ ಡಾನ್ಸ್ ಕೂಡ ಮಾಡಿ ಕಾರ್ಯಕ್ರಮಕ್ಕೆ ಹುರುಪನ್ನು ಅವರು ನೀಡಿದ್ದರು.

ಇದೇ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ಅನಂತ ಅಂಬಾನಿಯವರ ಜೊತೆ ಮಾತನಾಡುತ್ತಾ, ತನ್ನ ವೃತ್ತಿ ಜೀವನದಲ್ಲಿ ತಾನು ಪಡೆದ ಮೊದಲ ಸಂಬಳ ಐವತ್ತು ರೂಪಾಯಿಗಳಾಗಿತ್ತು ಎಂಬ ವಿಚಾರವನ್ನು ಹಂಚಿಕೊಂಡ ಶಾರುಖ್ ಖಾನ್, ತಾನು ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಗಾಯಕ ಪಂಕಜ್ ಉದಾಸ್ ಅವರ ಸಂಗೀತ ಕಚೇರಿ ನಡೆದಿತ್ತು. ಆಗ ಅಲ್ಲಿ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸಿದ್ದೆ, ಆ ಕೆಲಸಕ್ಕಾಗಿ ತನಗೆ ದಕ್ಕಿದ್ದ ಹಣ 50ರೂಪಾಯಿಗಳು, ಅದೇ ನನ್ನ ಮೊದಲ ಸ್ಯಾಲರಿ ಎಂದು ವಿವರಿಸಿದ ಶಾರೂಖ್ ತಾನು ಆ ಹಣದಿಂದ ತಾಜ್ ಮಹಲ್ ನೋಡಿಕೊಂಡು ಬರಲು ಹೋಗಿದ್ದಾಗಿ ತಿಳಿಸಿದರು.

ಇಷ್ಟು ಹೇಳಿದ ನಂತರ ಶಾರುಖ್ ಅನಂತ್ ಅಂಬಾನಿ ಅವರನ್ನು ನಿಮ್ಮ ಮೊದಲ ಸ್ಯಾಲರಿ ಎಷ್ಟಾಗಿತ್ತು ಎನ್ನುವ ಪ್ರಶ್ನೆ ಕೇಳಿದ್ದಾರೆ. ಶಾರುಖ್ ಖಾನ್ ಕೇಳಿದ ಪ್ರಶ್ನೆಗೆ ಅನಂತ್ ಅಂಬಾನಿ ನೀಡಿದ ಉತ್ತರ ನಿಜಕ್ಕೂ ಅನಿರೀಕ್ಷಿತವಾದ ಉತ್ತರವಾಗಿದ್ದು ಮಾತ್ರವಲ್ಲದೆ, ಅಲ್ಲಿ ನೆರೆದಿದ್ದ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗುವಂತೆ ಮಾಡಿತ್ತಂತೆ. ಏಕೆಂದರೆ ಅನಂತ್ ಅಂಬಾನಿ ಉತ್ತರ ನೀಡುತ್ತಾ, “ನನ್ನ ಮೊದಲನೇ ಸಂಬಳ ಎಷ್ಟು ಎಂದು ನಾನು ಹೇಳಿದರೆ ನೀವು ಕೂಡ ಅದನ್ನು ಕೇಳಿ ನಾಚಿಕೆ ಪಡುವಂತ ಆಗುತ್ತದೆ ಓಕೆ ಅದಕ್ಕೆ ನಾನು ಆ ವಿಚಾರವನ್ನು ಈಗ ಹೇಳುವುದಿಲ್ಲ” ಎಂದು ಉತ್ತರವನ್ನು ನೀಡಿದರಂತೆ ಅಲ್ಲಿಗೆ ಶಾರೂಖ್ ಖಾನ್ ಮತ್ತೆ ಪ್ರಶ್ನೆ ಮಾಡುವ ಅವಕಾಶವೇ ಸಿಗದಂತೆ ಆಗಿತ್ತಂತೆ.