ಅನುಷ್ಕಾಳಿಗೆ ಫೋನ್ ಮಾಡಿ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ ವಿರಾಟ್ ಕೊಹ್ಲಿ; ಕಾರಣ ಕೇಳಿ ನಿಮಗೂ ವಿಚಿತ್ರವೆನಿಸಬಹುದು!

ಇಂದು ಟೀಮ್ ಇಂಡಿಯಾ ಮತ್ತು ನಮ್ಮ RCB ತಂಡದ ನಾಯಕರಾದ ವಿರಾಟ್ ಅವರ 32 ನೇ ಹುಟ್ಟುಹಬ್ಬ ಇದೆ. ಆದ್ದರಿಂದ ಜಗತ್ತಿನ ವಿವಿಧ ಸೇಲಿಬ್ರಿಟಿಗಳಿಂದ ವಿರಾಟ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಏತನ್ಮಧ್ಯೆ ಅವರ ಹಳೆಯ ಒಂದು ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅನುಷ್ಕಾ ಮತ್ತು ವಿರಾಟ್ ಅವರ ಮೊದಲ ಭೇಟಿ ಒಂದು ಶಾಂಪುವಿನ ಆಡ್ ಸಂದರ್ಭದಲ್ಲಿ ನಡೆದದ್ದು ನಂತರ ಅನೇಕ ವರ್ಷಗಳವರೆಗೆ ಡೇಟ್ ಮಾಡಿದ ಮೇಲೆ ಕೊನೆಗೆ 2017 ರಲ್ಲಿ ಇಟಲಿಯಲ್ಲಿ ರಾಜಮಹಾರಾಜರ ಬಿಂಕದಲ್ಲಿ ಮದುವೆ ಸಮಾರಂಭವನ್ನು ಏರ್ಪಡಿಸಿ ಒಂದುಗೂಡಿದರು.

ಈಗ ವಿರಾಟ್ ಮತ್ತು ಅನುಷ್ಕಾ ಈ ಜೋಡಿ ಶ್ರೀಮಂತಿಕೆಯ ಶಿಖರದ ಮೇಲೆ ಇದ್ದರೂ ವಿರಾಟ್ ಅವರು ಎಂದಿಗೂ ಆ ಕಳೆದ ದಿನಗಳನ್ನು ಮರೆತಿಲ್ಲ. ವಿರಾಟ್ ಅವರು ಮೈದಾನದ ಮೇಲೆ ಎಷ್ಟು ಆಕ್ರಮಕಾರಿಯಾಗಿ ಇರುತ್ತಾರೆಯೊ ನಿಜಜೀವನದಲ್ಲಿ ಅಷ್ಟೇ ಸಂವೇದನೆಯನ್ನು ಅಥವಾ ಮೆತ್ತಗಿನ ಸ್ವಭಾವವನ್ನು ಹೊಂದಿದ್ದಾರೆ.

2017 ರಲ್ಲಿಯೇ ಭಾರತ ಕ್ರಿಕೆಟ್ ತಂಡದ ನಾಯಕರನ್ನಾಗಿ ಬಿಸಿಸಿಐ ಕಡೆಯಿಂದ ಘೋಷಿಸಲಾಯಿತು. ಇದೇ ಸುದ್ದಿಯನ್ನು ಅನುಷ್ಕಾ ಅವರಿಗೆ ಹೇಳುವಾಗ ಮೊದಲಿನ ಜೀವನವನ್ನು ನೆನಪಿಸಿಕೊಂಡು ಒಂದೇ ಸಮನೆ ಗೊಳೋ ಅಂತ ಅತ್ತು ಬಿಟ್ಟಿದ್ದರಂತೆ.

ಸಂದರ್ಶನದಲ್ಲಿ ಮುಂದೆ ಹೀಗೂ ಹೇಳುತ್ತಾರೆ, ಅವರಿಗೆ ತಮ್ಮ ಕರಿಯರ್ ದ ಮೊದಲಿನ ಕಷ್ಟದ ದಿನಗಳಿಂದ ಹಿಡಿದು ಇಲ್ಲಿಯವರೆಗಿನ ಎಲ್ಲವೂ ಜ್ಞಾಪಕಕ್ಕೆ ಬಂದಿತ್ತಂತೆ. ಕ್ರಿಕೆಟ್ ಅಕ್ಯಾಡಮಿಯಿಂದ ಹಿಡಿದು ಟೀಮ್ ಇಂಡಿಯಾದ ನಾಯಕ…. ಈ ಪ್ರವಾಸ ನೆನಪಾಗಿ ಇದೆಲ್ಲವೂ ನನ್ನ ಜೊತೆಗೆ ನಡೆದು ಹೋಗುತ್ತದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ, ಎಂದು ಭಾವುಕರಾಗಿದ್ದರಂತೆ.