ಅನೇಕ ದುಬಾರಿ ಹೋಟೆಲ್ ಗಳಲ್ಲಿ 13 ನಂಬರ್ ರೂಮ್ ಇರುವುದಿಲ್ಲ! ಇದರ ಹಿಂದಿನ ರಹಸ್ಯವೇನು ಗೊತ್ತಾ?

ನಮ್ಮ ಸುತ್ತಮುತ್ತ ಘಟಿಸುವ ಅನೇಕ ವಿಷಯಗಳ ಬಗ್ಗೆ ಶುಭ ಮತ್ತು ಅಶುಭಗಳಿಗೆ ತಾಳೆಹಾಕಿ ನೋಡುತ್ತೇವೆ. ಈ ರೀತಿ ಬರೀ ಭಾರತದಲ್ಲಷ್ಟೇ ಅಲ್ಲ ಜಗತ್ತಿನ ಎಲ್ಲ ಭಾಗಗಳಲ್ಲೂ ಕೆಲವೊಂದು ನಂಬಿಕೆಗಳು ಗಟ್ಟಿಯಾಗಿ ಜನರ ಮನಸ್ಸಿನಲ್ಲಿ ಉಳಿದುಕೊಂಡಿವೆ. ವಾಸ್ತುಶಾಸ್ತ್ರದಲ್ಲಿ ನಂಬರ್ ಗಳಿಗೂ ಸಹ ತುಂಬಾ ಮಹತ್ವವಿದೆ. ನೀವು ಪ್ರವಾಸಕ್ಕೆ ಅಥವಾ ಸುತ್ತಾಡಲು ಹೋಗಿದ್ದಾಗ ತಂಗಲು ಹೋಟೆಲ್ ಗಳಿಗೆ ಭೇಟಿ ನೀಡುತ್ತೀರಿ. ಅನೇಕ ಹೋಟೆಲ್ಗಳಲ್ಲಿ 13 ನಂಬರ್ ಕೋಣೆಯೇ ಇರುವುದಿಲ್ಲ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ? ಸಾಕಷ್ಟು ಹೋಟೆಲ್ಗಳಲ್ಲಿ 13 ನಂಬರ್ ಕೋಣೆ ಮತ್ತು ಅಂತಸ್ತು ಇರುವುದಿಲ್ಲ. ಕಾರಣ ಈ ನಂಬರ್ ತುಂಬಾ ಅಶುಭವೆಂದು ತಿಳಿಯಲಾಗುತ್ತದೆ.

ವಾಸ್ತವಿಕವಾಗಿ ಭಾರತಕ್ಕಿಂತಲೂ ಪಾಶ್ಚಾತ್ಯ ದೇಶಗಳಲ್ಲಿ 13 ಈ ಸಂಖ್ಯೆಯನ್ನು ತುಂಬಾ ಅಶುಭ ಅಥವಾ ದರಿದ್ರವೆಂದು ತಿಳಿಯಲಾಗುತ್ತದೆ. ಈ ಪರಿಣಾಮದಿಂದಾಗಿ ಸದ್ಯಕ್ಕೆ ಭಾರತದಲ್ಲಿಯೂ ಇದರ ಅನುಕರಣೆ ಮಾಡಲಾಗುತ್ತಿದೆ. ಅನೇಕ ಹೋಟೆಲ್ಗಳಲ್ಲಿ 12 ಈ ಸಂಖ್ಯೆಯ ನಂತರ ನೇರ 14 ಈ ಸಂಖ್ಯೆ ರೂಮ್ ಕಾಣಸಿಗುತ್ತದೆ. ಆದರೆ 13 ಈ ಸಂಖ್ಯೆ ರೂಮ್ ಮಾತ್ರ ಕಾಣಸಿಗುವುದಿಲ್ಲ. ಈ ರೀತಿಯಾಗಿ ಪ್ರತಿಯೊಂದು ಹೋಟೆಲ್ ಗಳಲ್ಲಿ ಇರುವುದಿಲ್ಲ ಆದರೆ ಹೆಚ್ಚಿನ ಸಂಖ್ಯೆಯ ಹೋಟೆಲ್ ಗಳಲ್ಲಿ ಈ ರೀತಿಯಾಗಿ ಕಂಡುಬರುತ್ತದೆ.

13 ಯಾಕೆ ಅಶುಭವೆಂದು ತಿಳಿಯಲಾಗುತ್ತದೆ?
ಇದರ ಹಿಂದಿರುವ ಕಾರಣಗಳೇನು ನೋಡಿ.

ವಿದೇಶಗಳಲ್ಲಿ 13 ಈ ಸಂಖ್ಯೆ ಜನರ ಮನಸ್ಸಿನಲ್ಲಿ ಭೀತಿಯನ್ನು ನಿರ್ಮಾಣ ಮಾಡಿದೆ. ಕ್ರಿಶ್ಚಿಯನ್ ಧರ್ಮದ ಆರಾಧ್ಯ ದೇವರಾದ ಯೇಸುಕ್ರಿಸ್ತರ ಜೊತೆಗೆ ದ್ರೋಹವನ್ನು ಮಾಡಿದ ವ್ಯಕ್ತಿ 13 ನಂಬರ್ ಚೇರ್ ಮೇಲೆ ಕುಳಿತುಕೊಳ್ಳುತ್ತಿದ್ದನಂತೆ. ಈ ಕಾರಣದಿಂದಾಗಿ 13 ನಂಬರ್ ಪಾಶ್ಚಾತ್ಯದೇಶಗಳಲ್ಲಿ ಅಶುಭವೆಂದು ತಿಳಿಯಲಾಗುತ್ತದೆ. ಈ ಸಂಖ್ಯೆಯ ಹೆದರಿಕೆಯಿಂದಾಗಿ ಕಟ್ಟಡಗಳಲ್ಲಿಯೂ ಸಹ 12 ರ ನಂತರ 13ರ ಬದಲಾಗಿ ನೇರ 14 ನಂಬರ್ ಮಹಡಿ ಇರುತ್ತದೆ.

ಭಾರತದಲ್ಲೇಕೆ?

ಅನೇಕ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುವ ಸಲುವಾಗಿ ಬರುತ್ತಾರೆ. ಹೀಗಾಗಿ ಆ ಜನರ ವಿಶ್ವಾಸ ಮತ್ತು ಶ್ರದ್ಧೆ ಗಮನದಲ್ಲಿಟ್ಟುಕೊಂಡು ಭಾರತದಲ್ಲಿಯೂ ಅನೇಕ ಹೊಟೇಲುಗಳಲ್ಲಿ 13 ಈ ಸಂಖ್ಯೆಯ ಕೋಣೆಯನ್ನೇ ಇಟ್ಟಿಲ್ಲ.