ಅನ್ನದಾತರೆ, ಇಲ್ಲಿ ನೋಡಿ 70 ರ ಹರೆಯದ ವ್ಯಕ್ತಿಯೊಬ್ಬರು ಸ್ಕೂಟರ್ ಎಂಜಿನ್ ನಿಂದ ತಯಾರಿಸಿದರು ಆಧುನಿಕ ನೇಗಿಲು!
ಮನದಲ್ಲಿ ಏನಾದರೂ ಮಾಡಿ ತೋರಿಸುವ ಹಂಬಲವಿದ್ದರೆ ವಯಸ್ಸು ಅದಕ್ಕೆ ಎಂದಿಗೂ ಅಡ್ಡಿ ಪಡಿಸುವದಿಲ್ಲ. ಛತ್ತೀಸಗಢದ ಬಿಲಾಸ್ ಪುರ್ ಜಿಲ್ಲೆಯ ಸ್ವಾರಘಾಟ್ ಊರಿನ70 ವರ್ಷ ವಯಸ್ಸಿನ ಹಿರಿಯರಾದ ಜಗದೀಶ ಚಂದ್ ಅವರು ಈ ರೀತಿಯ ಸಂಶೋಧನೆಯ ಕೆಲಸವನ್ನು ಮಾಡಿದ್ದಾರೆ. ಮನೆಯಲ್ಲಿ ಬಿದ್ದ ಹಳೆಯದಾದ ಸ್ಕೂಟರ್ ಎಂಜಿನ್ ಹಾಗೂ ಬೇರೆ ಕೆಲವು ವಸ್ತುಗಳನ್ನು ಜೋಡಿಸಿ ಹೊಲದಲ್ಲಿ ಉಳುವದಕ್ಕಾಗಿ ಆಧುನಿಕ ನೇಗಿಲನ್ನು ತಯಾರಿಸಿದ್ದಾರೆ. ಜಗದೀಶ್ ವೆಲ್ಡಿಂಗ್ ಮಾಡುವ ಕೆಲಸ ಮಾಡುತ್ತಾರೆ. ಮನೆಯಲ್ಲಿ ಕುಳಿತು ಯೂಟ್ಯೂಬ್ ನೋಡುತ್ತಿರುವಾಗ ಆ ವಿಡಿಯೋದಲ್ಲಿ ಏನೋ ಒಂದು ವಿಶೇಷ ಕಂಡು ಬಂತು. ಅದರದೇ ಪ್ರೇರಣೆಯಿಂದ ತನ್ನಲ್ಲಿಯ ಕಲೆ ಮತ್ತು ಸೂಪ್ತ ಗುಣದ ಪ್ರದರ್ಶನ ಮಾಡಬೇಕೆಂದು ನಿರ್ಧರಿಸಿದೆ.
ಕೆಲವು ದಿನಗಳವರೆಗೆ ಈ ಪ್ರೊಜೆಕ್ಟ್ ಮೇಲೆ ಕೆಲಸ ಮಾಡಿದೆ. ನನ್ನ ಪರಿಶ್ರಮಕ್ಕೆ ಬೆಲೆ ಸಿಕ್ಕಿತು. ಮನೆಯಲ್ಲಿ ಉಪಯೋಗವಿಲ್ಲದೆ ಬಿದ್ದ ಸ್ಕೂಟರ್ ಜೊತೆಗೆ ಕೆಲವು ಸಾಮಾನುಗಳನ್ನು ಜೋಡಿಸಿ ಸೃಜನಾತ್ಮಕವಾಗಿ ತಯಾರಿಸಿ ಜನರ ಮುಂದೆ ಪ್ರದರ್ಶಿಸಿದೆ.

ಈ ಆಧುನಿಕ ನೇಗಿಲು ಕೃಷಿ ಟೀಲರ್ ಹಾಗೆಯೇ ಇದೆ. ಸದ್ಯಕ್ಕೆ ಈ ಮಷಿನ್ ನಲ್ಲಿ ಕೆಲವು ಚಿಕ್ಕಪುಟ್ಟ ತೊಂದರೆಗಳಿವೆ. ಅವುಗಳನ್ನು ದೂರ ಮಾಡಿ ನಡೆಸಲು ಸರಳ ಮಾಡುವೆ. ಎಲ್ಲಿ ಟ್ರ್ಯಾಕ್ಟರ್ ಸೌಲಭ್ಯವಿಲ್ಲವೋ ಅಲ್ಲಿ ಈ ಸ್ಕೂಟರ್ ನೇಗಿಲು ಒಳ್ಳೆಯ ಪರ್ಯಾಯ ವ್ಯವಸ್ಥೆಯಾಗಿದೆ. ಜಗದೀಶ್ ಅವರು ಈಗಲೂ ತಮ್ಮ ವರ್ಕ್ ಶಾಪ್ ನಲ್ಲಿ 7 ರಿಂದ 8 ಗಂಟೆಯವರೆಗೆ ಕೆಲಸ ಮಾಡುತ್ತಾರೆ.