ಅಪ್ಪು ಹಾಗೂ ಅಶ್ವಿನಿಯವರು ವಿವಾಹವಾಗುವ ಸಮಯದಲ್ಲಿ ಇಬ್ಬರ ವಯಸ್ಸು ಎಷ್ಟಿತ್ತು ಗೊತ್ತಾ? ನೋಡಿ….!!
ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಎಷ್ಟೋ ದಿನಗಳು ಕಳೆದರು ಸಹ ಅವರ ಮೇಲಿನ ಪ್ರೀತಿ ಇನ್ನೂ ಹೆಚ್ಚುತ್ತಲೇ ಇದೆ. ಅವರ ಸತ್ಕಾರ್ಯ, ನಡುವಳಿಕೆ ಮತ್ತು ಸಾಮಾಜಿಕ ಕಾರ್ಯ ಇವುಗಳನ್ನು ಕೇಳಿದರೆ ಅವರು ನಿಜವಾದ ದೇವರು ಅಂತ ಅನಿಸುತ್ತೇ. ಅಂತಹ ದೇವತಾ ಮನುಷ್ಯನನ್ನು ವಿಧಿ ಅಷ್ಟು ಬೇಗನೆ ಕರೆದುಕೊಂಡು ಹೋಗುತ್ತೇ ಅಂತ ಯಾರೂ ಕೂಡ ಊಹಿಸಿರಲಿಲ್ಲ. ಅವರ ಅಗಲುವಿಕೆಯ ದುಃಖ ಇಡೀ ಜಗತ್ತಿಗೆ ತಗಲಿದೆ. ಇಂದು ಜಗತ್ತಿನ ಪ್ರತಿಯೊಂದು ಮೂಲೆ ಮೂಲೆಯಲ್ಲಿ ಸಹ ಪುನೀತ್ ಅವರ ಹೆಸರು ಅಜರಾಮರ. ಪುನೀತ್ ರಾಜಕುಮಾರ್ ಅವರು ನಡೆದುಬಂದ ದಾರಿ, ಅವರ ಜೀವನದ ಶೈಲಿ ಮತ್ತು ಸಾಮಾಜಿಕ ಕಾರ್ಯ ಇವುಗಳ ಆಧಾರದ ಮೇಲೆ ನಾವು ಕಲಿತುಕೊಳ್ಳಬೇಕಾಗಿದೆ.
ಅಪ್ಪುವಿನ ಸಾಮಾಜಿಕ ಕಾರ್ಯ ಮಾಡುವ ಪರಿ ಹೇಗಿತ್ತೆಂದರೆ ಎಡಗೈಯಲ್ಲಿ ಮಾಡಿದ ಕಾರ್ಯ ಬಲಗೈಗೆ ಗೊತ್ತಾಗಬಾರರು ಅಂತಹ ಸಿದ್ಧಾಂತವನ್ನು ಹೊಂದಿದ ಅಪ್ಪು ಇಂದು ನಮ್ಮ ನಿಮ್ಮೆಲ್ಲರ ಮನದಲ್ಲಿ ಅಜರಾಮರ.
ಸಮಾಜಕ್ಕಾಗಿ ಶ್ರಮಿಸಿದ ಅಪ್ಪು ಇಂದು ನಮ್ಮಲ್ಲಿ ಇಲ್ಲ ಎಂಬ ಸಂಗತಿ ತುಂಬಾನೇ ದುಃ#ಖ ತರುತ್ತದೆ.
ರಾಜಕುಮಾರ್ ನ ಹಾಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಹಾಯ ಮಾಡಿರುವ ಅಪ್ಪು ನಾನು ಮಾಡಿದ್ದೇನೆ ಎಂದು ಎಂದೆಂದೂ ಹೇಳಿಕೊಂಡಿಲ್ಲ. ಆದರೆ ನಮ್ಮೆಲ್ಲರನ್ನು ಅಗಲಿದ ತಕ್ಷಣ ಅಪ್ಪು ಮಾಡಿರುವ ಕಾರ್ಯಗಳು ಎಲ್ಲರೆದುರಿಗೆ ಒಂದೊಂದಾಗಿ ಬರುತ್ತಿವೆ. ಅವರನ್ನು ನೆನೆದರೆ ಇಂದಿಗೂ ಸಹ ಅಭಿಮಾನಿಗಳ ಕಣ್ಣಲ್ಲಿ ನೀರು ಬರದೆ ಇರಲಾರವು.

ಇಂದು ನಾವು ಅಪ್ಪುವಿನ ಮದುವೆಯ ಸಮಯದಲ್ಲಿ ಅಪ್ಪು ಮತ್ತು ಅಶ್ವಿನಿಯವರ ನಡುವಿನ ವಯಸ್ಸಿನ ಅಂತರ ಎಷ್ಟಿತ್ತು ಅಂತ ಹೇಳಿ ಕೊಡಲಿದ್ದೇವೆ. ಅಪ್ಪು ಹಾಗೂ ಅಶ್ವಿನಿಯವರ ವಿವಾಹ 1999 ಡಿಸೆಂಬರ್ 1 ರಂದು ನಡೆದಿದೆ. ಅಂದರೆ ಇಂದಿಗೆ ಅವರು ಮದುವೆಯಾಗಿ ಸುಮಾರು ಇಪ್ಪತ್ಮೂರು ವರ್ಷ ಕಳೆದಿವೆ. ಆದರೆ ಅವರು ಇರುವಷ್ಟು ದಿನ ತಮ್ಮ ಮಡದಿಯೊಂದಿಗೆ ಉತ್ತಮ ಪತಿಯಾಗಿ ಬಾಳಿ ಆದರ್ಶ ದಂಪತಿಗಳು ಎನಿಸಿಕೊಂಡಿದ್ದಾರೆ.

ಈ ದಂಪತಿಗಳು ದಾಂಪತ್ಯ ಜೀವನ ಇನ್ನೂ ಬೆಳೆದು ಎಲ್ಲೆಡೆಗೆ ಕೀರ್ತಿ ತರಬೇಕಿತ್ತು ಆದರೆ ಆ ದೇವರಿಗೂ ಕೂಡಾ ಇವರ ಮುದ್ದಾದ ಜೋಡಿ ಬಹಳಷ್ಟು ಇಷ್ಟ ವಾಯಿತು ಅನ್ನೋ ಹಾಗೆ ಅಪ್ಪು ಅವರನ್ನು ಆ ದೇವರು ತನ್ನೆಡೆಗೆ ಬೇಗನೆ ಕರೆದುಕೊಂಡು ಹೋದ. ಈ ದಂಪತಿಗಳಿಗೆ ಇಬ್ಬರು ಮುದ್ದಾದ ಹುಡುಗಿಯರು ಇದ್ದಾರೆ. ಅಪ್ಪು ಮತ್ತು ಅಶ್ವಿನಿ ಇವರ ವಿವಾಹವಾದ ಸಮಯದಲ್ಲಿ ಇಬ್ಬರ ವಯಸ್ಸಿನ ಅಂತರ ಕೇವಲ ಎರಡು ಇತ್ತು. ಅಪ್ಪು ಅವರು 17 ಮಾರ್ಚ್ 1975 ರಂದು ಜನಸಿದರು, ಅಶ್ವಿನಿಯವರು 14 ಮಾರ್ಚ್ 1977 ರಂದು ಜನಸಿದರು ಹೀಗಾಗಿ ಇವರಿಬ್ಬರ ನಡುವೆ ಕೇವಲ ಎರಡು ವರ್ಷಗಳ ವಯಸ್ಸಿನ ಅಂತರ ವಿದೆ.