ಅಬ್ಬಾ ! ಅದೃಷ್ಟ ! ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಶೂಟ್ ಆಯಿತು ಮೈ ನಡುಗುವ ದೃಶ್ಯ ; ಚಲಿಸುವ ಟ್ರಕ್ಕಿನ ಡಬಲ್ ವ್ಹೀಲ್ ಕಳಚಿ ಪುಟಿಪುಟಿದು…

ರಸ್ತೆಗಳು ಹೆಚ್ಚಾದಂತೆ ದಿನದಿಂದ ದಿನಕ್ಕೆ ವಾಹನಗಳನ್ನು ಖರೀದಿ ಮಾಡುವವರ ಸಂಖ್ಯೆಯು ಅಗಣಿತವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ವಾಹನಗಳ ಅಪಘಾತವಾಗುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿನಂಪ್ರತಿ ಅಪಘಾತಗಳ ಫೋಟೋ ಮತ್ತು ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನೋಡುತ್ತೇವೆ. ವಾಹನ ಸವಾರರು ಎಷ್ಟೇ ಕಾಳಜಿ ವಹಿಸಿದರೂ ಅಪಘಾತ ಯಾವ ರೀತಿಯಲ್ಲಿ ಆಗುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಮುಖ್ಯವಾದ ರಸ್ತೆಗಳಲ್ಲಿ ಇಂಥ ಭಯ ಜಾಸ್ತಿಯಾಗಿರುತ್ತದೆ. ಕಾರಣ ಅಲ್ಲಿ ಓಡಾಡುವ ವಾಹನಗಳೇ ಬೇರೆಯಾಗಿರುತ್ತವೆ. ಮತ್ತು ತುಂಬಾ ಹೇವಿ ಆಗಿರುತ್ತವೆ.

ಈಗ ಇದೇ ರೀತಿಯ ಒಂದು ವಿಚಿತ್ರ ದೃಶ್ಯವನ್ನು ನಿಮ್ಮ ಮುಂದೆ ವಿಡಿಯೋ ಮುಖಾಂತರ ತಂದಿದ್ದೇವೆ. ಈ ಸಂಪೂರ್ಣ ವಿಡಿಯೋ ವೆಹಿಕಲ್ ಒಂದರ ಡ್ಯಾಶ್ ಕ್ಯಾಮೆರಾದಲ್ಲಿ ಚಿತ್ರಿತವಾಗಿದೆ. ವಿಡಿಯೋದಲ್ಲಿ ಕಂಡುಬರುವ ಹಾಗೆ ರಸ್ತೆಯ ಮೇಲೆ ಟ್ರಕ್ಕಿನ ಜೋಡಿ ಚಕ್ರಗಳು ಜೊತೆಜೊತೆಯಾಗಿ ವೇಗದಲ್ಲಿ ಕ್ರಮಿಸುತ್ತಾ ಮುನ್ನುಗ್ಗುತ್ತಿವೆ. ಅದೃಷ್ಟವೆಂದರೆ ಚಕ್ರಗಳು ಮುನ್ನುಗ್ಗುತ್ತಿರುವ ದಾರಿಯಲ್ಲಿ ಯಾವುದೇ ರೀತಿಯ ವಾಹನಗಳು ಮತ್ತು ಜನಸಂಚಾರ ಇಲ್ಲ. ಯಾಕೆಂದರೆ ಎದುರಿನಿಂದ ಬರುವ ವಾಹನಗಳು ಡಿವೈಡರ್ ಆಚೆಯಿಂದ ಬರುತ್ತಿವೆ. ಎರಡು ಚಕ್ರಗಳು ಒಂದೇ ಸವನೆ ಸಲೀಸಾಗಿ, ಉರುಳುತ್ತಾ, ಪುಟಿಯುತ್ತ, ಜಿಗಿಯುತ್ತ ಭಯ ಹುಟ್ಟಿಸುವ ಹಾಗೆ ಎಲ್ಲಿಯೂ ನಿಲ್ಲದೆ ಮುಂದೆ ತೂರಿಕೊಂಡು ಹೋಗುತ್ತಿವೆ. ಏತನ್ಮಧ್ಯೆ ಎರಡು ಗಾಲಿಗಳು ಮಧ್ಯದಲ್ಲಿರುವ ಡಿವೈಡರ್ ಗೆ ಹಾಗೂ ಬದಿಯಲ್ಲಿರುವ ಗುಡ್ಡಕ್ಕೆ ಜೋರಾಗಿ ಬಡಿದು ಅಪ್ಪಳಿಸಿ ಎಲ್ಲಿಯೂ ನಿಲ್ಲದೆ ಹಾಗೆಯೇ ಸುಮಾರು ಆರೇಳು ಅಡಿ ಪುಟಿಪುಟಿದು ಚಲಿಸುತ್ತಿವೆ. ಈ ಸಂಪೂರ್ಣ ಶೂಟ್ ಹಿಂದಿನ ವಾಹನದಲ್ಲಿ ಅಳವಡಿಸಿದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ನೋಡಲು ತುಂಬಾ ಭಯವೆನಿಸುತ್ತದೆ. ಯಾಕೆಂದರೆ ಜೋಡಿ ಚಕ್ರಗಳು ಮುಂದೆ ಹೋಗಿ ಯಾವುದಾದರೂ ಅಪಘಾತಕ್ಕೆ ಎಡೆಮಾಡಿಕೊಡುತ್ತದೆಯೇನೋ ಎಂಬ ಶಂಕೆ ಮನದಲ್ಲಿ ಮೂಡುತ್ತದೆ. ಆದರೆ ಆ ರೀತಿಯ ಯಾವುದೇ ಹಾನಿ ಅಲ್ಲಿ ಆಗಿಲ್ಲ. ವಿಡಿಯೋಗೆ ಹಿಂದಿ ಸಾಂಗ್ ವಾಯ್ಸ್ ಓವರ್ ಜೋಡಿಸಿದ್ದರಿಂದ ಕೇಳಲು ಒಳ್ಳೆಯದೆನಿಸುತ್ತದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಐಎಫ್ಎಸ್ ಆಫೀಸರ್ ಆದ ಸುರೇಂದ್ರ ಮೆಹರಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ.