ಅಬ್ಬಾ! ಆರ್ಯನ್ ಪರ ವಕೀಲ ಒಂದು ದಿನಕ್ಕೆ ಪಡೆವ ಶುಲ್ಕ ಕೇಳಿದ್ರೆ ತಲೆ ತಿರುಗುತ್ತೆ: ದುಬಾರಿ ವಕೀಲ ಸತೀಶ ಮಾನೆಶಿಂದೆ!
ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ನನ್ನು ಜೈಲಿನಿಂದ ಹೊರಗೆ ತರಲು ನಟ ಶಾರುಖ ಖಾನ್ ಅವರು ಪ್ರಸಿದ್ಧ ವಕೀಲರಾದ ಸತೀಶ್ ಮಾನೇಶಿಂದೆ ಅವರನ್ನು ನಿಯುಕ್ತಿ ಮಾಡಿದ್ದಾರೆ. ಸತೀಶ್ ಮಾನೇಶಿಂದೆ ಅವರು ಹಾಯ್ ಪ್ರೊಫೈಲ್ ವಕೀಲರಾಗಿದ್ದು ಈಗ ಕೋರ್ಟಿನಲ್ಲಿ ಆರ್ಯನ್ ಖಾನ್ ಅವರ ಪಕ್ಷವನ್ನು ಮಂಡಿಸಲಿದ್ದಾರೆ. ವಕೀಲರಾದ ಸತೀಶ್ ಅವರು ಈ ಮೊದಲು ರಿಯಾ ಚಕ್ರವರ್ತಿ, ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಅವರ ಕೇಸುಗಳನ್ನು ಹ್ಯಾಂಡಲ್ ಮಾಡಿದ್ದರು. ಸದ್ಯದ ಸಮಯದಲ್ಲಿ ಸತೀಶ್ ಮಾನೆಶಿಂಧೆ ಅವರನ್ನು ದೇಶದ ಪ್ರಸಿದ್ಧ ವಕೀಲರಲ್ಲಿ ಒಬ್ಬರೆಂದು ತಿಳಿಯಲಾಗುತ್ತದೆ.

ಇವರು 1998 ರ ವನ್ಯಪ್ರಾಣಿಯ ಬೇಟೆ ಮಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನು ಮತ್ತು 93 ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಅವರ ಪಕ್ಷವನ್ನು ಮಂಡಿಸಿದ್ದರು. ಸಲ್ಮಾನ್ ಖಾನ್ ಅವರಿಗೆ ಡ್ರಂಕ್ ಆಂಡ್ ಡ್ರೈವ್ ಕೇಸ್ ನಲ್ಲಿಯೂ ಜಾಮೀನು ದೊರಕಿಸಿ ಕೊಟ್ಟಿದ್ದರು. ಹೀಗಾಗಿ ಸತೀಶ್ ಮಾನೇಶಿಂದೆ ಅವರು ದೇಶದಲ್ಲಿ ಹಾಯ್ ಪ್ರೊಫೈಲ್ ವಕೀಲರೆಂದೇ ಪ್ರಸಿದ್ಧರಾಗಿದ್ದಾರೆ. 2010 ರ ರಿಪೋರ್ಟ್ ಪ್ರಕಾರ ವಕೀಲರಾದ ಸತೀಶ್ ಅವರು ಒಂದು ದಿನಕ್ಕೆ ತೆಗೆದುಕೊಳ್ಳುವ ಫೀ 10 ಲಕ್ಷ ₹ ಗಳು. ಅಂದಾಜಿನ ಪ್ರಕಾರ ಈಗಂತೂ 2021ರಲ್ಲಿ ಅವರ ಫೀಜ್ ಮತ್ತಷ್ಟು ಹೆಚ್ಚಾಗಿರುವ ಸಾಧ್ಯತೆಗಳಿವೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ನಂತರ ನಟಿ ರಿಯಾ ಚಕ್ರವರ್ತಿ ತುಂಬಾ ಸಂಕಷ್ಟದಲ್ಲಿದ್ದರು. ಆ ಸಮಯದಲ್ಲಿ ಸತೀಶ್ ಅವರೇ ರಿಯಾಳ ಬಚಾವ್ ಮಾಡುವಲ್ಲಿ ಯಶಸ್ವಿಯಾದರು.
ಸತೀಶ್ ಮಾನೇಶಿಂದೆ ಅವರ ಬಗ್ಗೆ ಹೇಳುವುದಾದರೆ, ಭಾರತದ ಸುಪ್ರಸಿದ್ಧ ವಕೀಲರಾದ ರಾಮ ಜೆಠ್ಮಲಾನಿ ಅವರ ಮಾರ್ಗದರ್ಶನದಲ್ಲಿ 1983 ರಿಂದ ಪ್ರಾಕ್ಟೀಸ್ ಶುರು ಮಾಡಿದ್ದರು. ಮುಂದಿನ ಹತ್ತು ವರ್ಷಗಳವರೆಗೆ ಜೇಟ್ಮಲಾನಿ ಅವರ ಜೊತೆಗೆ ಕೆಲಸ ಮಾಡಿದರು. ಸದ್ಯ ಸತೀಶ್ ಅವರು 55 ವರ್ಷದವರಿದ್ದು ಇವರಿಗೆ ವಿವಿಧ ದುಬಾರಿ ಕಾರುಗಳ ಹವ್ಯಾಸವಿದೆ.