ಅಬ್ಬಾ.. ಇದಪ್ಪ ಅದೃಷ್ಟ ಅಂದರೆ! ಬ್ಯಾಂಕ್ ಖಾತೆಯೂ ಇಲ್ಲದ ಕೂಲಿ ಕಾರ್ಮಿಕನಿಗೆ ಹೊಡೆಯಿತು 80 ಲಕ್ಷ ರೂಪಾಯಿಗಳ ಲಾಟರಿ!

ಪ್ರತಿಯೊಬ್ಬ ವ್ಯಕ್ತಿ ಅತಿ ಬೇಗ ಶ್ರೀಮಂತನಾಗಬೇಕು ಎಂದು ಕನಸು ಕಂಡೆ ಕಾಣುತ್ತಾನೆ. ಒಂದೇ ರಾತ್ರಿಯಲ್ಲಿ ಶ್ರೀಮಂತನಾಗಬೇಕೆಂದರೆ ವ್ಯಕ್ತಿಗೆ ಒಂದು ಖಜಾನೆ ದೊರೆಯಬೇಕು ಇಲ್ಲವಾದರೆ ಎರಡನೆಯದು ಲಾಟರಿ ಹೊಡೆಯಬೇಕು. ಮೀಡಿಯಾಗಳಿಂದ ಲಾಟರಿ ಮುಖಾಂತರ ಒಂದೇ ರಾತ್ರಿಯಲ್ಲಿ ಶ್ರೀಮಂತರಾದ ಬಗ್ಗೆ ಎಷ್ಟೋ ಸುದ್ದಿಗಳನ್ನು ಕೇಳಿದ್ದೇವೆ. ಇದೇ ರೀತಿಯ ಒಂದು ಸುದ್ದಿ ಕೇರಳದಿಂದ ದಾಖಲಾಗಿದೆ. ಇಲ್ಲಿಯ ಒಬ್ಬ ಕಾರ್ಮಿಕ 40 ರೂಪಾಯಿಗಳ ಲಾಟರಿ ಖರೀದಿಸಿ 80 ಲಕ್ಷ ರೂಪಾಯಿಗಳ ಮಾಲೀಕನಾಗಿದ್ದಾನೆ.

ಕೇರಳದ ತಿರುವನಂತಪುರದಲ್ಲಿ ಕಟ್ಟಡಗಳನ್ನು ಕಟ್ಟುವ ಕೆಲಸ ಮಾಡುವ ಕಾರ್ಮಿಕನಾದ ಪ್ರತಿಭಾ ಮಂಡಲನಿಗೆ 80 ಲಕ್ಷ ರೂಪಾಯಿಗಳ ಲಾಟರಿ ಹೊಡೆದಿದೆ. ಆತ ಗೆದ್ದಿರುವುದು ಕೇರಳ ಸರಕಾರದ ಅಧೀನದಲ್ಲಿರುವ ಸಾಪ್ತಾಹಿಕ ಕಾರುಣ್ಯ ಪ್ಲಸ್ ನಲ್ಲಿ 80 ಲಕ್ಷ ರೂಪಾಯಿಗಳ ಲಾಟರಿಯಲ್ಲಿ. ವಿಶೇಷವೇನೆಂದರೆ ಈ ಕಾರ್ಮಿಕನ ಹೆಸರಲ್ಲಿ ಬ್ಯಾಂಕ್ ಅಕೌಂಟೇ ಇಲ್ಲ. ತನಗೆ ಆಕಸ್ಮಿಕವಾಗಿ ಲಾಟರಿ ಹೊಡೆದ ಸುದ್ದಿಯನ್ನು ಕೇಳಿ ಮತ್ತು ತನಗೆ ಇಷ್ಟೊಂದು ಹಣ ದೊರೆಯಲಿದೆ ಎಂದು ತಿಳಿದಾಗ ಪ್ರತಿಭಾ ಹೆಸರಿನ ಈ ಕಾರ್ಮಿಕ ಕೆಲವು ಕ್ಷಣಗಳ ವರೆಗೆ ಸ್ಥಬ್ದನಾಗಿದ್ದನು. ಆನಂತರ ಆತನಿಗೆ ಭೀತಿ ಮತ್ತು ಹೆದರಿಕೆಯೂ ಆಗಿದೆ. ಆತನ ಮುಂದೆ ಅನೇಕ ಪ್ರಶ್ನೆಗಳು ಒಮ್ಮೆಲೇ ಎದುರಾದವು. ಆತನಿಗೆ ಏನು ತೋಚದಾದಾಗ ಹಾಗೂ ಈ ಗೊಂದಲದಿಂದ ಪಾರಾಗಲು ಆತ ನೇರ ಪೊಲೀಸ್ ಸ್ಟೇಷನ್ನಿಗೆ ಹೋಗಿದ್ದಾನೆ.

ಅಲ್ಲಿ ಹೋಗಿ ಇದ್ದದ್ದನ್ನು ಹೇಳಿ ಪೊಲೀಸರಿಗೆ ಸಂರಕ್ಷಣೆ ಕೇಳಿದ್ದಾನೆ. ಹಾಗೆಯೇ ಹಣದ ವ್ಯವಸ್ಥೆ ಮಾಡಿಕೊಳ್ಳಲು ಪೊಲೀಸರಿಂದಲೇ ಸಹಾಯ ಕೇಳಿದ್ದಾನೆ. ಆನಂತರ ಪೊಲೀಸರು ಕೆನರಾ ಬ್ಯಾಂಕಿನ ಎಂಪ್ಲೊಯ್ ಯನ್ನು ಬ್ಯಾಂಕಿಗೆ ಕರೆಯಿಸಿ ಅಕೌಂಟ್ ತೆರೆಯಲು ಸಹಾಯ ಮಾಡಿದ್ದಾರೆ. ಸದ್ಯ ಲಾಟರಿಯಲ್ಲಿ ಗೆದ್ದ ಹಣವನ್ನು ಅಕೌಂಟ್ ನಲ್ಲಿ ಜಮೆ ಮಾಡಲಾಗಿದೆ.