ಅಬ್ಬಾ..! ಇಷ್ಟೊಂದು ಕೋಟಿ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ ಸಂಜಯ್ ದತ್ತ!
ಭಾರತೀಯ ಸಿನಿಮಾ ರಂಗದಲ್ಲಿ ಕೋಪದ ಸ್ವಭಾವ, ಡೈಲಾಗ್ ಡೆಲಿವರಿ ಮತ್ತು ಕಾಮಿಡಿ ಯೊಂದಿಗೆ ಅಭಿನಯಿಸಿ ಬಾಲಿವುಡ್ ನಲ್ಲಿ ವಿಭಿನ್ನ ಶೈಲಿಯನ್ನೇ ನಿರ್ಮಾಣ ಮಾಡಿರುವ ನಟ ಯಾರು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೇನೆ ಇಲ್ಲ. ಕಾರಣ ಇಂತಹ ವ್ಯಕ್ತಿತ್ವ ಹೊಂದಿದ ನಟನಿಗೆ ಅನೇಕ ಹೆಸರುಗಳಿವೆ. ಅಂತಹ ವ್ಯಕ್ತಿ ಬೇರೆ ಯಾರೂ ಅಲ್ಲ, ಅವರೇ ಸಂಜಯ್ ದತ್ತ. ಸಂಜಯ ದತ್ತ ಅವರ ಅಭಿಮಾನಿಗಳು ಅವರಿಗೆ ಪ್ರೀತಿಯಿಂದ ಬಾಬಾ ಎಂದು ಕರೆಯುವರು. ಸಂಪೂರ್ಣ ಜಗತ್ತಿನಾದ್ಯಂತ ಅವರ ಕಾರ್ಯದ ಚರ್ಚೆ ನಡೆಯುತ್ತಿದೆ.

ಸಂಜಯ್ ದತ್ತ ಅವರು ತಮ್ಮ ಫೀಲ್ಮಿ ವೃತ್ತಿಯನ್ನು 1972 ರಲ್ಲಿ ಒಬ್ಬ ಬಾಲ ಕಲಾಕಾರರಾಗಿ ಪ್ರಾರಂಭಿಸಿದರು. ಇವರ ಮೊದಲನೆಯ ಚಿತ್ರಪಟ ‘ರಾಕಿ’ ಆ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚು ಹಣ ಗಳಿಸಿದ ಚಿತ್ರವಾಗಿತ್ತು. ಅಭಿನಯದೊಂದಿಗೆ ಸಂಜಯ್ ದತ್ತ ಇವರು ಪ್ಲೇ ಬ್ಯಾಕ್ ಸಿಂಗರ್, ವಾಯಿಸ್ ನರೇಟರ್ ಮತ್ತು ಟೇಲಿವಿಜನ್ ಪ್ರಸ್ತುತಕರ್ತರಾಗಿಯೂ ಕಾರ್ಯ ಮಾಡಿದ್ದಾರೆ. 1996 ಸಂಜಯ್ ದತ್ತ ಅವರು ಚಲನಚಿತ್ರ ನಿರ್ಮಾಪಕ ರಾಗಬೇಕೆಂದು ಯೋಚಿಸಿದರು ಮತ್ತು ಇವರು ಸ್ವಂತದ ಸಂಜಯ್ ದತ್ತ ಪ್ರೊಡಕ್ಷನ್ಸ್ ಪ್ರಾ. ಲಿಮಿಟೆಡ್ ಈ ಪ್ರೊಡಕ್ಷನ್ ಹೌಸ್ ದ ಸ್ಥಾಪನೆಯನ್ನೂ ಮಾಡಿದರು. ಸಂಜಯ್ ದತ್ತ ಇವರು ಜನಪ್ರಿಯ ಟಿವಿ ಶೋ ‘ಬಿಗ್ ಬಾಸ್ ‘ ನಲ್ಲಿ ಅತಿಥಿಯ ರೂಪದಲ್ಲಿ ಸಹ ಕೆಲಸ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಎಲ್ಲಕ್ಕಿಂತ ಹೆಚ್ಚು ಹಣ ಸಂಪಾದನೆ ಮಾಡುವವರಲ್ಲಿ ಸಂಜಯ ದತ್ತ ಕೂಡ ಒಬ್ಬರು.
ಸಂಜಯ್ ದತ್ತಕಡೆಗೆ ಅಮೆರಿಕನ್ ಡಾಲರ್ ಪ್ರಕಾರ 21.2 ಮಿಲಿಯನ್ ಡಾಲರ್ ನಷ್ಟು ಸಂಪತ್ತು ಇದೆ. ಅಂದರೆ ಭಾರತೀಯನ ಚಲನೆಯ ಪ್ರಕಾರ 137 ಕೋಟಿ ರೂಪಾಯಿಯಷ್ಟು ಸಂಪತ್ತನ್ನು ಸಂಜಯ್ ದತ್ತ ಹೊಂದಿದ್ದಾರೆ. ಚಲನಚಿತ್ರದ ಜೊತೆಗೆ ಸಂಜಯ ದತ್ತ ಅವರು ಕೆಲವು ಕಂಪನಿಗಳ ಬ್ರಾಂಡ್ ಅಂಬೇಸಡರ್ ಕೂಡಾ ಇದ್ದಾರೆ. ಇದರಿಂದ ಕೂಡಾ ಸಂಜಯ್ ದತ್ತ ತುಂಬಾ ಹಣ ಸಂಪಾದನೆ ಮಾಡುತ್ತಿರುತ್ತಾರೆ. ಪೋಲಿಯೋ ಉಪಚಾರದ ಸಲುವಾಗಿ ಭಾರತದಲ್ಲಿಯ ಬೇರೆ ಬೇರೆ ರಾಜ್ಯಗಳಲ್ಲಿ ಬ್ರಾಂಡ್ ಅಂಬೇಸಡರ್ ಎಂದು ಕೆಲಸ ಮಾಡುತ್ತಾರೆ. ಸಮಾಜಿಕ ಕಾರ್ಯ ಮತ್ತು ದಾನ ಧರ್ಮಗಳಲ್ಲಿ ಸಂಜಯ್ ದತ್ತ ಅವರದು ಎತ್ತಿದ ಕೈ. ಇವುಗಳಲ್ಲದೆ ಅತೀ ಹೆಚ್ಚು ಆದಾಯ ತೆರಿಗೆ ತುಂಬುವ ನಟರ ಪೈಕಿ ಸಂಜಯ್ ದತ್ತ ಸಹ ಒಬ್ಬರಾಗಿದ್ದಾರೆ.

ಮುಂಬಯಿಯಂತಹ ಮಾಯಾನಗರದಲ್ಲಿ ಸಂಜಯ್ ದತ್ತ ಅವರ ಅನೇಕ ಮನೆಗಳಿವೆ. ಆದರೆ ಸದ್ಯಕ್ಕೆ ಅವರು 58 smt ನರ್ಗಿಸ್ ದತ್ತ ರೋಡ್, ಪಾಲಿ ಹಿಲ್, ಬಾಂದ್ರಾ ದಲ್ಲಿ ವಾಸವಾಗಿದ್ದಾರೆ. ಅವರು ವಾಸವಾಗಿರುವ ಮನೆಯ ಸಮೀಪದ ರಸ್ತೆಯ ಹೆಸರು ಸಂಜಯ್ ದತ್ತ ಅವರ ತಾಯಿಯ ಹೆಸರಿನ ಮೇಲಿಂದಲೇ ಇಟ್ಟಿದ್ದಾರೆ. 2009 ರಲ್ಲಿ ಸಂಜಯ್ ದತ್ತ ಈ ಮನೆಯನ್ನು ಖರೀದಿ ಮಾಡಿದ್ದರು.

ಸಂಜಯ್ ದತ್ತ ಅವರ ಹತ್ತಿರವಿರುವ ಕಾರ್ ಸಂಗ್ರಹ ಬಗ್ಗೆ ಹೇಳಬೇಕೆಂದರೆ, ಅವರ ಬಳಿಯಲ್ಲಿ ರೆಡ್ ಫರಾರಿ 599 ಜಿಟಿಬಿ ಗಾಡಿ ಇದೆ. ಇದರ ಹೊರತು ರೋಲ್ಸ್-ರಾಯಲ್ಸ್ ಘೋಷ್ಟ್, ಆಡಿ ಎ 8 ಎಲ್ 12, ಟೊಯೊಟೋ ಲ್ಯಾಂಡ್ ಕ್ರೂಜರ್, ಮರ್ಸಿಡಿಸ್ ಎಮ್ ಕ್ಲಾಸ್ , ಲೆಕ್ಸಸ್ ಎಲ್ ಎಕ್ಸ್ 470, ಪೋರ್ಶ್ ಎಸ್ ಯು ವಿ, ಹಾರ್ಲೆ ದೇವಿಡಸನ್ ಮಟ್ಟಿ ಎಕ್ಸೋಟಿಕ್ಸ್ ದಂತಹ ದುಬಾರಿ ಬೆಲೆಯುಳ್ಳ ಕಾರುಗಳಿವೆ.