ಅಬ್ಬಾ! ಈ ಮಹಾತಾಯಿ ತನ್ನ ಕರುಳಿನ ಕುಡಿಯನ್ನೇ ಸೀರೆಯಿಂದ ಕಟ್ಟಿ 10 ನೇ ಅಂತಸ್ತಿನ ಮೇಲೆ ನೇತಾಡಿಸುತ್ತಿದ್ದಳು! ಕಾರಣವೇನು ಸ್ವಲ್ಪ ನೋಡಿ…

ಸೋಶಿಯಲ್ ಮೀಡಿಯಾದಲ್ಲಿ ತಾಯಿಯೊಬ್ಬಳು ಮಾಡಿದ ಒಂದು ಘನಕಾರ್ಯದ ಸುದ್ದಿ ತುಂಬಾ ವೈರಲ್ ಆಗುತ್ತಿದೆ. ಮಹಿಳೆಯೊಬ್ಬಳು ತನ್ನ ಕರುಳಿನ ಕುಡಿಯನ್ನು ಕಟ್ಟಡದ ಹತ್ತನೆಯ ಅಂತಸ್ತಿನ ಗ್ಯಾಲರಿಯಲ್ಲಿ ನೇತಾಡಿಸುತ್ತಿದ್ದಳು. ಪ್ರಸ್ತುತ ಘಟನೆಯು ದೆಹಲಿ ಹತ್ತಿರದ ಫರಿದಾಬಾದ್ ನಿಂದ ವರದಿಯಾಗಿದೆ. ಈ ವೈರಲ್ ಆಗುತ್ತಿರುವ ವಿಡಿಯೋ ನೋಡಿದಾಗ ನಿಜಕ್ಕೂ ಮೈ ಕಂಪಿಸುತ್ತದೆ. ಒಂದು ತಾಯಿ ತನ್ನ ರಕ್ತವನ್ನು ಹಂಚಿದ ಮಗುವನ್ನೇ ಈ ರೀತಿಯಾಗಿ ಹತ್ತನೇ ಅಂತಸ್ತಿನ ಗ್ಯಾಲರಿಯಲ್ಲಿ ನೇತಾಡಿಸಬಹುದೇ ಎಂಬ ಪ್ರಶ್ನೆ ಮನದಲ್ಲಿ ಹುಟ್ಟುತ್ತದೆ.

ಮಗುವಿಗೆ ಸೀರೆಯಿಂದ ಕಟ್ಟಿದ ಗಂಟು ಸ್ವಲ್ಪೇ ಸ್ವಲ್ಪ ಲೂಸ್ ಆಗಿದ್ದರೆ ಮಗುವಿನ ಗತಿ ಏನಾಗುತ್ತಿತ್ತು ಎಂಬುದರ ವಿಚಾರ ಮಾಡಿದರೂ ಸಾಕು ಮೈ ಬೆವರುತ್ತದೆ. ಆದರೆ ಅದೃಷ್ಟಕ್ಕೆ ಅಂತ ಯಾವ ದುರ್ಘಟನೆಯೂ ಅಲ್ಲಿ ನಡೆದಿಲ್ಲ. ನಂತರ ಮಗುವಿಗೆ ಸುಖರೂಪವಾಗಿ ಮೇಲೆ ಎಳೆದು ಕೊಳ್ಳಲಾಗಿದೆ.

ವೈರಲ್ ಆಗುತ್ತಿರುವ ಈ ವಿಡಿಯೋ ದೆಹಲಿ ಹತ್ತಿರದ ಫರಿದಾಬಾದ್ ನ ಸೆಕ್ಟರ್ 82 ರಲ್ಲಿ ಇರುವ ಫ್ಲೋರಿಡಾ ಸೊಸೈಟಿಯಿಂದ ವರದಿಯಾಗಿದೆ. ಘಟನೆ ತಿಳಿದ ನಂತರ AajTak ಟೀಮ್ ಪ್ರಸ್ತುತ ಮಹಿಳೆಗೆ ಭೇಟಿಯಾಗಿ ಈ ಪ್ರಸಂಗದ ಬಗ್ಗೆ ಕೇಳಿದ್ದಾರೆ. ಆಗ ಮಹಿಳೆಯು ಹೇಳಿದ ಉತ್ತರ ಕೇಳಿ ಅಲ್ಲಿದ್ದ ಎಲ್ಲರಿಗೂ ಶಾಕ್ ಆಗಿದೆ. 9 ನೇ ಅಂತಸ್ತಿನ ಬಾಲ್ಕನಿಯಲ್ಲಿ ಪ್ರಸ್ತುತ ಮಹಿಳೆಯ ಬಟ್ಟೆಗಳು ಕೆಳಗೆ ಬಿಟ್ಟಿದ್ದವು. ಆ ಮನೆಗೆ ಬೀಗ ಇರುವ ಕಾರಣದಿಂದ ಕೆಳಗೆ ಹೋಗಿ ತನ್ನ ಬಟ್ಟೆಗಳನ್ನು ತೆಗೆದುಕೊಂಡು ಬರುವುದು ಸಾಧ್ಯವಿರಲಿಲ್ಲ. ಈ ಕಾರಣದಿಂದಾಗಿ ತನ್ನ ಮಗುವಿಗೆ ಸೀರೆಯಿಂದ ಕಟ್ಟಿ ಹತ್ತನೇ ಅಂತಸ್ತಿನಿಂದ 9ನೆಯ ಅಂತಸ್ತಿನ ಗ್ಯಾಲರಿಗೆ ಬಿಟ್ಟಿದ್ದಾಳೆ. ಈ ದೃಶ್ಯವನ್ನು ಎದುರಿನ ಬಿಲ್ಡಿಂಗ್ ನಲ್ಲಿರುವ ನಿವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯಕ್ಕೆ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.