ಅಬ್ಬಾ! ಒಂದು ಸಮಯದಲ್ಲಿ 5 ರೂಪಾಯಿ ಸಂಬಳಕ್ಕಾಗಿ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದ ಗ್ರೇಟ್ ಖಲಿ; ಇಂದು ‘ಇಷ್ಟೊಂದು’ ಕೋಟಿಗಳ ಒಡೆಯರು!
ದ ಗ್ರೇಟ್ ಖಲಿ ಯಾರಿಗೆ ಗೊತ್ತಿಲ್ಲ? ಡಬ್ಲ್ಯೂಡಬ್ಲ್ಯೂಇ ನೋಡುವವರಿಗೆ ಖಲಿ ಬಗ್ಗೆ ಗೊತ್ತಿದೆ. ಮೊನ್ನೆ ಆಗಸ್ಟ್ 27 ರಂದು ಅವರ ಹುಟ್ಟುಹಬ್ಬ ಆಚರಿಸಲಾಯಿತು. 48 ವರ್ಷದವರಾದ ಖಲಿಯ ಜನ್ಮ ಹಿಮಾಚಲ ಪ್ರದೇಶದಲ್ಲಿ ಆಗಿದೆ. ಇವರ ನಿಜವಾದ ಹೆಸರು ದಲೀಪ್ ಸಿಂಗ್ ಇದ್ದು ‘ದ ಗ್ರೇಟ್ ಖಲಿ’ ಹೆಸರಿನಿಂದ ಪ್ರಖ್ಯಾತರಾಗಿದ್ದಾರೆ. ಖಲಿಯ 157 ಕೆಜಿ ತೂಕವಿದ್ದು ಎತ್ತರ 7 ಫೀಟ್ 1 ಇಂಚು ಇರುವ ಭಾರತದ ಏಕಮೇವ ಅತಿ ಎತ್ತರದ ಹೆವಿವೇಯ್ಟ್ ಚಾಂಪಿಯನ್ ಆಗಿದ್ದಾರೆ.
ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ ಖಲಿಯ ಬಾಲ್ಯ ತುಂಬ ಕಷ್ಟದಿಂದ ಕೂಡಿತ್ತು. ಹೀಗಾಗಿಯೇ ಅವರ ಶಿಕ್ಷಣ ಕಾಲೇಜಿನವರಗೆ ಸರಿಯಾಗಿ ಮುಂದುವರಿಯಲಿಲ್ಲ. ಒಂದು ಬಡಕುಟುಂಬದಲ್ಲಿ ಜನಿಸಿದ ಖಲಿಯುವರು ಆರು ಜನ ಅಣ್ಣ-ತಮ್ಮಂದಿರರು ಇದ್ದರು. ಕಿತ್ತು ತಿನ್ನುವ ಬಡತನ ದೊಡ್ಡ ಕುಟುಂಬ ಇವೆರಡು ಕಾರಣದಿಂದ ಕೆಲಸ ಮಾಡದೆ ಅನ್ನಕ್ಕೆ ಗತಿ ಇರಲಿಲ್ಲ. ಈಗ 18 ನಂಬರಿನ ಬ್ರಾಂಡೆಡ್ ಶೂಜ್ ಧರಿಸುವ ಖಲಿ ಅವರಿಗೆ ಮೊದಲು ತೊಟ್ಟುಕೊಳ್ಳಲು ಚಪ್ಪಲಿಗಳು ಸಹಿತ ಇರಲಿಲ್ಲ.
ಖಲಿಯವರು ಮೊದಲಿನಿಂದಲೂ ಭೀಮಕಾಯವನ್ನು ಹೊಂದಿದ ವ್ಯಕ್ತಿ. ಇವರು ಈಗಿರುವ ಸ್ಥಾನಕ್ಕೆ ಬಂದು ತಲುಪಬೇಕಾದರೆ ಅನೇಕ ರೀತಿಯ ಸಂಘರ್ಷಗಳನ್ನು ಮಾಡಿ ಯಶಸ್ಸಿನ ಏಣಿಯನ್ನು ಏರಿದ್ದಾರೆ. ತಮ್ಮ ಆಟದೊಂದಿಗೆ ಇವರು ಅನೇಕ ಬಾಲಿವುಡ್ ಹಾಲಿವುಡ್ ಚಿತ್ರಗಳ ಜೊತೆಗೆ ಟಿವಿ ಶೋಗಳಲ್ಲಿ ಸಹಿತ ಕೆಲಸ ಮಾಡಿದ್ದಾರೆ.
ಖಲಿಯವರ ದೇಹದಾರ್ಡ್ಯ ಮತ್ತು ಅತಿ ಎತ್ತರವನ್ನು ಕಂಡು ಊರಲ್ಲಿ ಜನರು ಇವರನ್ನು ಚೇಷ್ಟೆಗೆ ಗುರಿ ಮಾಡುತ್ತಿದ್ದರು. ಎರಡು ಮೂರು ರೂಪಾಯಿಗಳು ಸಹಿತ ಶಾಲೆಯ ಫೀ ತುಂಬಲು ಆಗದ ಕಾರಣ ಹೆಚ್ಚು ಶಾಲೆಯನ್ನು ಸಹಿತ ಕಲಿಯಲಾಗದೆ ಅರ್ಧಕ್ಕೆ ಬಿಟ್ಟು ಬಿಟ್ಟರು. ಇವರು 18 ವರ್ಷದವರಿದ್ದಾಗ ಬರೀ 5 ₹ ಗಳ ಸಂಬಳಕ್ಕಾಗಿ ದಿನಪೂರ್ತಿ ಕಲ್ಲುಗಳನ್ನು ಒಡೆಯುವ ಕೆಲಸಮಾಡುತ್ತಿದ್ದರು. ತೋಟದಲ್ಲಿ ಮಾಲಿಯ ಕೆಲಸವನ್ನು ಮಾಡುತ್ತಿದ್ದರು. ಆದರೆ ಇವರ ಹಣೆಬರಹ ಚೆನ್ನಾಗಿದ್ದುದರಿಂದ ಪೊಲೀಸ್ ಸಿಪಾಯಿಯ ನೌಕರಿ ದೊರಕಿತು. ಪೊಲೀಸ್ ನಲ್ಲಿ ನೌಕರಿ ಮಾಡುತ್ತಾ ಮಾಡುತ್ತಾ ಹಾಗೆ ಜಿಮ್ ಅಟೆಂಡ್ ಮಾಡಿ ತಮ್ಮ ಕುಸ್ತಿ ಆಟಗಾರನಾಗುವ ಕನಸನ್ನು ನನಸಾಗಿಸಲು ಪ್ರಯತ್ನವನ್ನು ಶುರುಮಾಡಿದರು.

ಹತ್ತಿರ ಜಾಸ್ತಿ ಹಣವಿಲ್ಲದ ಕಾರಣದಿಂದ ಕುಸ್ತಿಯ ತರಬೇತಿಗಾಗಿ ಅಮೆರಿಕೆಗೆ ಹೋಗಲು ತುಂಬಾ ಸಮಸ್ಯೆಗಳು ಎದುರಾದವು. ಇವರನ್ನು ಪ್ರಯೋಜಕರನ್ನಾಗಿ ಮಾಡಲು ಯಾವುದೇ ಕಂಪನಿಗಳು ಮುಂದೆ ಬರಲಿಲ್ಲ. ಅಂಥ ದಿನಗಳಲ್ಲಿ ಹೇಗಾದರೂ ಮಾಡಿ 40 ಸಾವಿರ ರೂಪಾಯಿಗಳನ್ನು ಒಗ್ಗೂಡಿಸಿ ಅಮೆರಿಕೆಗೆ ಹೋದರು. ಅಮೆರಿಕೆಯ ಸನ್ ಫ್ರನ್ಸಿಸ್ಕೋ ನಲ್ಲಿ ಹೋದನಂತರ ಅಲ್ಲಿಯೂ ಸಹಿತ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು.ಆದರೂ ಸಹಿತ ಗುರಿಯಿಂದ ಹಿಮ್ಮೆಟ್ಟದೆ, ಪ್ರಯತ್ನ ಮಾಡಿ ಜಪಾನ್ ಮತ್ತು ಮೆಕ್ಸಿಕೋ ದೇಶಗಳಲ್ಲಿಯೂ ಹೋಗಿ ಅನೇಕ ಕುಸ್ತಿಗಳನ್ನು ಆಡಿದರು. ಅಲ್ಲಿ ದ ಗ್ರೇಟ್ ಖಲಿಯವರಿಗೆ ಜಾಯಿಂಟ್ ಸಿಂಗ್ ಎಂದು ಕರೆಯತೊಡಗಿದರು.
ಆನಂತರ ಮತ್ತೆ ಮರಳಿ ಅಮೆರಿಕಾಗೆ ಬಂದನಂತರ ಖಲಿಯವರಿಗೆ ಹಾಲಿವುಡ್ ಚಲನಚಿತ್ರಗಳಲ್ಲಿ ಕುಸ್ತಿ ಆಟಗಾರನ ರೋಲ್ ಗಳು ದೊರೆಯಲಾರಂಭಿಸಿದವು. ಮುಂದೆ ಡಬ್ಲ್ಯೂಡಬ್ಲ್ಯೂಇ ಜೊತೆಗೂ ಕರಾರುಗಳ ಆದನಂತರ ಮುಂದೆ ಅವರ ಜೀವನದಲ್ಲಿ ಅಮೂಲಾಗ್ರವಾದ ಬದಲಾವಣೆಗಳಾದವು.
ಇಷ್ಟೆಲ್ಲಾ ಪ್ರಸಿದ್ಧಿಯ ಶಿಖರದ ಮೇಲೆ ಏರಿದ ಖಲಿಯವರ ಜೀವನ ಈಗ ಸಂಪೂರ್ಣವಾಗಿ ಬದಲಾಗಿದೆ. ಮುಂಬಯಿ ಮತ್ತು ಅಮೆರಿಕೆಯಲ್ಲಿ ಒಂದೊಂದು ಮನೆಗಳನ್ನು ಹೊಂದಿರುವ ಹಾಗೂ ಅನೇಕ ಲಕ್ಸುರಿ ಕಾರುಗಳನ್ನು ಹೊಂದಿರುವ ಖಲಿಯವರು ಈಗ ಒಂದು ಸಾಮಾನ್ಯ ವ್ಯಕ್ತಿಯಿಂದ ವಿಶೇಷ ವ್ಯಕ್ತಿಯಾಗಿದ್ದಾರೆ. ಖಲಿಯವರ ಒಟ್ಟು ಸಂಪತ್ತು 120 ಕೋಟಿಗಳನ್ನು ದಾಟಿದೆ.