ಅಬ್ಬಾ!! ಚಿನ್ನದ ಹುಡುಗ ನೀರಜ್ ಚೋಪ್ರಾ ತರಬೇತಿಗಾಗಿ ಭಾರತ ಸರ್ಕಾರ ಖರ್ಚು ಮಾಡಿದೆ, ‘ಇಷ್ಟೊಂದು’ ಕೋಟಿ ರೂಪಾಯಿ!!

ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಅವರು ಟೋಕಿಯೋ ಒಲಿಂಪಿಕ್ ನಲ್ಲಿ ಚಿನ್ನದ ಪದಕವನ್ನು ಗೆದ್ದು 130 ಕೋಟಿ ಭಾರತೀಯರ ಮುಖದ ಮೇಲೆ ಸಂತೋಷವನ್ನು ಅರಳಿಸಿದರು. ಒಲಂಪಿಕ್ಸ್ ನ 125 ವರ್ಷಗಳ ಇತಿಹಾಸದಲ್ಲಿ ಭಾರತ ಅಥ್ಲೆಟಿಕ್ಸ್ ನಲ್ಲಿ ಪಡೆದ ಮೊದಲ ಚಿನ್ನದ ಪದಕವಾಗಿದೆ. ಮತ್ತು ಹದಿಮೂರು ವರ್ಷಗಳ ನಂತರ ಒಲಂಪಿಕ್ ನಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿತು. 2008 ರಲ್ಲಿ ಶೂಟರ್ ಅಭಿನವ್ ಬಿಂದ್ರಾ ಅವರು ಭಾರತೀಯರಿಗೆ ಇಂಥ ಐತಿಹಾಸಿಕ ಕ್ಷಣಗಳನ್ನು ಅನುಭವಿಸಲು ಎಡೆ ಮಾಡಿಕೊಟ್ಟಿದ್ದರು.

ನೀರಜ್ ಅವರ ಐತಿಹಾಸಿಕ ಯಶಸ್ಸಿನ ಹಿಂದೆ ಭಾರತ ಸರಕಾರದ ಪಾತ್ರವೂ ತುಂಬಾ ಮಹತ್ವದ್ದಿದೆ. ಸರಕಾರವು ನೀರಜ್ ಸಲುವಾಗಿ ಇಲ್ಲಿಯವರೆಗೆ ಎಷ್ಟೊಂದು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯುವ.

23 ವರ್ಷದ ಜಾವಲಿನ್ ಥ್ರೋವರ್ ನೀರಜ್ ಟೋಕಿಯೋ ಒಲಿಂಪಿಕ್ ಸ್ಪರ್ಧೆಯಲ್ಲಿ 87.58 ಮೀಟರ್ ಉದ್ದ ಭಲ್ಲೆಯನ್ನು ಎಸೆದು ಚಿನ್ನವನ್ನು ತಮ್ಮ ಜೋಳಿಗೆಗೆ ಹಾಕಿಕೊಂಡರು. ಮೊದಲ ಎರಡು ಪ್ರಯತ್ನದಲ್ಲಿ 87 ಮೀಟರ ವರೆಗೆ ತಲುಪಿದರು. ಅವರ ಪ್ರತಿಸ್ಪರ್ಧಿ ಅವರ ಹತ್ತಿರವೂ ಸುಳಿಯಲಿಲ್ಲ. ಜಾಕೋಬ್ (86.67) ಮತ್ತು ವಿಟೇಝಸ್ಲವ್ (85.44) ಅನುಕ್ರಮವಾಗಿ ರಜತ ಮತ್ತು ಕಂಚೀನ ಪದಕದ ಸಾಧನೆ ಮಾಡಿದರು.

ನೀರಜ್ ಅವರು 2016 ರ ದಕ್ಷಿಣ ಏಷಿಯಾ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದ ನಂತರ 20 ವರ್ಷಕ್ಕಿಂತಲೂ ಕೆಳಗಿನ ವರ್ಗದಲ್ಲಿ ಜಾಗತಿಕ ಮಟ್ಟದ ಗೆಲವನ್ನು ಸಾಧಿಸಿ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಇಲ್ಲಿ 86.48 ಮೀಟರ್ ಉದ್ದ ಎಸೆದಿದ್ದರು. ಈ ಸ್ಪರ್ಧೆಯಲ್ಲಿ ಚಿನ್ನದ ಬೇಟೆಯಾಡಿದ ಮೊದಲ ಭಾರತೀಯ ಆಟಗಾರರಾಗಿದ್ದರು.

ತದನಂತರ 2018 ರಲ್ಲಿ ನಡೆದ ಕಾಮನ್ವೆಲ್ತ್ ಸ್ಪರ್ಧೆಯಲ್ಲಿ ನೀರಜ್ 88.07 ಮೀಟರ್ ಉದ್ದದ ಅಂತರದಲ್ಲಿ ಜಾವಲಿನ್ ಎಸೆದು ಸ್ವಂತದ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದರು.

ಮುಂದೆ ಏಷ್ಯಾ ಸ್ಪರ್ಧೆಯ ನಂತರ ನೀರಜ್ ಅವರ ಕೈಗೆ ಗಾಯವಾಯಿತು. ಹೀಗಾಗಿ ಭಲ್ಲೆಯನ್ನು ಎಸೆವಾಗ ನೀರಜ್ ಅವರಿಗೆ ಸಮಸ್ಯೆ ಎದುರಾಗತೊಡಗಿತು. ಹೆಚ್ಚು ವೇದನೆ ಶುರುವಾದಾಗ 2019 ರಲ್ಲಿ ಅವರ ಮೇಲೆ ಶಸ್ತ್ರಕ್ರಿಯೆ ಮಾಡಲಾಯಿತು. ಆನಂತರ ಆಫ್ರಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಕಮ್ ಬ್ಯಾಕ್ ಮಾಡಿದರು. ಅಷ್ಟೇ ಅಲ್ಲ 87.86 ಮೀಟರ್ ಉದ್ದದ ಅಂತರದಲ್ಲಿ ಭಲ್ಲೆಯನ್ನು ಒಗೆದು ಟೋಕಿಯೋ ಒಲಿಂಪಿಕ್ ಗೆ ಟಿಕೆಟ್ ಫಿಕ್ಸ್ ಮಾಡಿಕೊಂಡರು.

ನವೆಂಬರ್ 2018 ರಿಂದ ಭಾರತೀಯ ಕ್ರೀಡಾ ಸಚಿವಾಲಯ ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಂ ನಲ್ಲಿ ಇವರ ಸಮಾವೇಶ ಮಾಡಲಾಯಿತು. ಯುವ ಕಲ್ಯಾಣ ಮತ್ತು ಕ್ರೀಡಾ ಸಚಿವಾಲಯವು ಆಟಗಾರರ ತರಬೇತಿ ಮತ್ತು ಟೈಮ್ ಟೇಬಲ್ ತಯಾರಿಸಿದರು. ಅಲ್ಲಿ ಅಥ್ಲೆಟಿಕ್ಸ್ ಮಹಾಸಂಘ ನಿಧಿ ನೀಡಲಾಗುತ್ತದೆ. ಅದೇ ಹಣದಲ್ಲಿಂದ ಸ್ವಲ್ಪ ಹಣ ನೀರಜ್ ಸಲುವಾಗಿ ಖರ್ಚು ಮಾಡಲಾಯಿತು.

2016 ರಿಂದ 2021 ರ ವರೆಗಿನ ಈ ಕಾಲಾವಧಿಯಲ್ಲಿ ನೀರಜ್ ಸಲುವಾಗಿ ಸುಮಾರು ಏಳು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇದರಲ್ಲಿ ವಿದೇಶಗಳಲ್ಲಿ ನಡೆದ ಸ್ಪರ್ಧೆ ಮತ್ತು ತರಬೇತಿಗಾಗಿ 4 ಕೋಟಿ 85 ಲಕ್ಷ 39,639 ರೂಪಾಯಿಗಳನ್ನು ಮತ್ತು ತರಬೇತುದಾರರ ವೇತನಕ್ಕಾಗಿ 1 ಕೋಟಿ 22 ಲಕ್ಷ 24887 ರೂಪಾಯಿ ಮತ್ತು ಭಲ್ಲೆ ಎಸೆತಕ್ಕಾಗಿ ಬೇಕಾಗುವ ಕ್ರೀಡಾ ಸಾಹಿತ್ಯ ಗಳಿಗಾಗಿ 4 ಲಕ್ಷ 35 ಸಾವಿರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಹೀಗೆ ಒಟ್ಟು ನೀರಜ್ ಅವರ ಸಲುವಾಗಿ ಭಾರತ ಸರಕಾರವು 6 ಕೋಟಿ 11 ಲಕ್ಷ 99,518 ರೂಪಾಯಿಗಳನ್ನು ಖರ್ಚು ಮಾಡಿದೆ.

ನೀರಜ್ ಅವರ ಈ ಅಮೋಘ ಸಾಧನೆಯಿಂದಾಗಿ 13 ವರ್ಷಗಳ ನಂತರ ಒಲಂಪಿಕ್ ಸ್ಪರ್ಧೆಯಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿತು. ಈ ಭಾವನಾತ್ಮಕ ಸಮಯದಲ್ಲಿ ಭಾರತೀಯರ ಕಣ್ಣಲ್ಲಿ ಆನಂದಾಶ್ರುಗಳು ಕಂಡುಬಂದವು. ಈ ವಿಜಯದ ನಂತರ ನೀರಜ್ ಚೋಪ್ರಾ ಅವರ ಮೇಲೆ ಅಕ್ಷರಶಃ ಬಹುಮಾನಗಳ ಸುರಿಮಳೆ ಬೀಳುತ್ತಿದೆ. ಬರೀ ಮೂರೇ ಮೂರು ಗಂಟೆಗಳಲ್ಲಿ ಹೆಚ್ಚು ಕಡಿಮೆ 16.75 ಕೋಟಿ ರೂಪಾಯಿಗಳ ಬಹುಮಾನ ಘೋಷಣೆಯಾಗಿದೆ.