ಅಬ್ಬಾ! ಟೆರೇಸ್ ನಿಂದ ಹೀಗೂ ಇಳಿಯುತ್ತಾರಾ! ಹೊಸ ಪಾಠ ಕಲಿಸಿಕೊಟ್ಟ ಸ್ಪೈಡರ್ ಕಿಡ್; ಒಂದು ಸಲ ನೋಡಿಯೇ ಬಿಡಿ, ಈ ವೈರಲ್ ವಿಡಿಯೋ …
ಸೋಶಿಯಲ್ ಮೀಡಿಯಾ ಪ್ರತಿಯೊಬ್ಬರಿಗೂ ಹುಚ್ಚು ಹಿಡಿಸಿ ಬಿಟ್ಟಿದೆ. ಇಲ್ಲಿ ಪ್ರಸಿದ್ಧಿಯನ್ನು ಪಡೆಯಲು ಕೆಲವರು ಎಂಥ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲು ಹಿಂದೆಮುಂದೆ ನೋಡುವುದಿಲ್ಲ.
ಈಗ ನೋಡಲಿರುವ ಈ ವಿಡಿಯೋದಲ್ಲಿ ಪೋಷಕರು ಒಂದು ಪುಟ್ಟ ಮಗುವಿನ ಜೀವವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಪ್ರಸ್ತುತ ವಿಡಿಯೋ ಮಾಡಿಕೊಂಡಿದ್ದು ಕಂಡುಬರುತ್ತಿದೆ. ವಿಡಿಯೋ ನೋಡಿದಾಗ ನಿಜಕ್ಕೂ ಭಯವಾಗುವದು. ಏಕೆಂದರೆ ನೋಡುವ ದೃಶ್ಯದ ಮೇಲೆ ವಿಶ್ವಾಸವೇ ಕೂಡುವುದಿಲ್ಲ. ಮಗುವೊಂದು ಟೆರೇಸ್ ಮೇಲಿನಿಂದ ಕಟ್ಟಿಗೆಯ ಏಣಿಯ ಮುಖಾಂತರ ಕೆಳಗಿಳಿಯುವ ಪದ್ಧತಿ ತುಂಬಾ ವಿಚಿತ್ರ ಹಾಗೂ ಅಷ್ಟೇ ಭಯಭೀ#ತವಾಗಿದೆ. ಇದನ್ನು ನೋಡಿದ ನೇಟಿಜನ್ಸ್ ಗಳು ಬಾಲಕನ ಪೋಷಕರಿಗೆ ಛೀಮಾರಿ ಹಾಕಿದ್ದಾರೆ.
ಟೆರೆಸ್ ನಿಂದ ಬಾಲಕ ಕಟ್ಟಿಗೆಯ ಕಚ್ಚಾ ಏಣಿಯ ಮುಖಾಂತರ ಕೆಳಗಿಳಿಯುವ ದೃಶ್ಯ ನಿಜಕ್ಕೂ ಅದ್ಭುತವಾಗಿದೆ ಎನ್ನಬೇಕು. ಹಾಗೆ ನೋಡಲಾಗಿ ಆತ ಇಳಿಯುತ್ತಿಲ್ಲ ಆತ ಅಲ್ಲಿ ಜಾರುಬಂಡೆ ಆಡುತ್ತಿರುವ ಹಾಗಿದೆ ದೃಶ್ಯ. ಅಷ್ಟೊಂದು ಸಲೀಸಾಗಿ ಮೇಲಿನಿಂದ ಕೆಳಗೆ ಕ್ಷಣಾರ್ಧದಲ್ಲಿ ಬಂದು ಮುಟ್ಟಿದ್ದಾನೆ. ಆ ಇಳಿಯುವ ದೃಶ್ಯವನ್ನು ಪೋಷಕರು ಕೆಳಗೆ ನಿಂತು ವಿಡಿಯೋ ಮಾಡುತ್ತಿದ್ದಾರೆ.
ಚಳಿಯಲ್ಲಿಯೂ ಬೆವರು ಹರಿಸುವ ಈ ಬಾಲಕನ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ಚಿಕ್ಕ ಬಾಲಕ ಚಲನಚಿತ್ರದಲ್ಲಿ ಸ್ಟಂಟ್ ಮಾಡುತ್ತಿರುವ ಹಾಗೆ ಕಂಡುಬರುತ್ತಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
ವೀಡಿಯೋ ನೋಡಿ
ಮಗುವಿನ ಈ ಸಹಜವಾದ ಸಾಹಸ ಮತ್ತು ಧೈರ್ಯಕ್ಕೆ ನೇಟಿಜನ್ಸ್ ಗಳು ದಂಗಾಗಿದ್ದಾರೆ. ಕೆಲವರು ಮಗುವಿನ ಈ ಅದ್ಭುತ ಸಾಹಸಕ್ಕೆ ಹೊಗಳಿದರೆ ಇನ್ನೂ ಕೆಲವರು ಮಗುವಿನ ಪೋಷಕರ ಬೇಜವಾಬ್ದಾರಿತನಕ್ಕೆ ಹಿಡಿಶಾಪ ಹಾಕಿದ್ದಾರೆ. ಈತ ಜೂನಿಯರ್ ಸ್ಪೈಡರ್ ಕಿಡ್ ಎಂತಲೂ ಕರೆಯುತ್ತಿದ್ದಾರೆ.