ಅಬ್ಬಾ! ತಂದೆಯ ಹ#ತ್ಯೆಯ ಸೇಡು ತೀರಿಸಿಕೊಳ್ಳಲು ಯುವತಿ ಆರೋಪಿಗೆ ಸಿಲುಕಿಸಿದಳು ತನ್ನ ಪ್ರೇಮಪಾಶದಲ್ಲಿ! ಆದರೆ…
ಸೋಶಿಯಲ್ ಮೀಡಿಯಾದ ಉಪಯೋಗವನ್ನು ಯಾರ್ಯಾರು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದ ಮುಖಾಂತರ ಯುವಕನೊಬ್ಬನಿಗೆ ತನ್ನ ಪ್ರೇಮ ಪಾಶದಲ್ಲಿ ಸಿಲುಕಿಸಿದ್ದಾಳೆ. ಆದರೆ ಆತನಿಗೆ ಕೊ#ಲ್ಲದೆ ಬೇರೆ ಯುವತಿಯ ಕೊಲೆ ಮಾಡಿದ್ದಾಳೆ.
ಈ ಯುತಿಯ ಹೆಸರು ಪಾಯಲ್ ಎಂದು ತಿಳಿದು ಬಂದಿದೆ. ಪಾಯಲ್ ಳ ತಂದೆಯನ್ನು ಕೆಲವೇ ತಿಂಗಳುಗಳ ಹಿಂದೆ ಕೊಲೆ ಮಾಡಲಾಗಿತ್ತು. ಈ ದ್ವೇಷವನ್ನು ಪಾಯಲ್ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಳು. ಈ ದ್ವೇಷ ಭಾವನೆಯಿಂದಾಗಿ ಪಾಯಲ್ ತನ್ನ ತಂದೆಯ ಕೊಲೆಯ ಸೇಡನ್ನು ಹೇಗಾದರೂ ಮಾಡಿ ತೆಗೆದುಕೊಳ್ಳಲೇಬೇಕೆಂದು ಮನಸಿನಲ್ಲಿ ನಿರ್ಧರಿಸಿದ್ದಳು.
ಪಾಯಲ್ ಳ ತಂದೆಯನ್ನು ಕೊಲೆ ಮಾಡಿದ ವ್ಯಕ್ತಿಯ ಹೆಸರು ಅಜಯ್. ಪಾಯಲ್ ಫೇಸಬುಕ್ ಮುಖಾಂತರ ಅಜಯ್ ಗೆ ಸಂಪರ್ಕಿಸಿದಳು. ಹಾಗೂ ಆತನನ್ನು ಈ ಮೋಸದಾಟದಲ್ಲಿ ಸರಿಯಾಗಿ ಸಿಲುಕಿಸುವ ಹುನ್ನಾರ ಮಾಡಿದಳು.
ಪಾಯಲ್ ಫೇಸಬುಕ್ ಮುಖಾಂತರ ಅಜಯ್ ನೊಂದಿಗೆ ಮೈತ್ರಿ ಮಾಡಿದಳು. ಈ ಮೈತ್ರಿಯ ರೂಪಾಂತರ ನಿಧಾನವಾಗಿ ಪ್ರೀತಿಯಲ್ಲಿ ಬದಲಾಗಳು ಹೆಚ್ಚು ಸಮಯ ಬೇಕಾಗಲಿಲ್ಲ. ಪಾಯಲ್ ಆಶಿಸಿದಂತೆಯೇ ಅಜಯ್ ಈ ಸುಳಿಯಲ್ಲಿ ಸಿಕ್ಕಿಬಿದ್ದನು.
ಕೆಲವೇ ದಿನಗಳಲ್ಲಿ ಅಜಯ್ ಪಾಯಲ್ ಳಿಗಾಗಿ ಹುಚ್ಚನಂತಾದ. ಆತ ಆಕೆಗಾಗಿ ಯಾವ ಹಂತಕ್ಕೂ ಹೋಗಲು ಸಿದ್ಧನಾದ. ಈಗ ಪಾಯಲ್ ಆತನ ಉಪಯೋಗವನ್ನು ತೆಗೆದುಕೊಳ್ಳಲು ಶುರು ಮಾಡಿದಳು.
ಮೊದಲು ಅಜಯನಿಗೆ ಸೇಮ್ ಟು ಸೇಮ್ ತನ್ನಂತಹ ದೇಹವನ್ನೇ ಉಳ್ಳ ಹುಡುಗಿಯನ್ನು ಶೋಧಿಸಲು ಹೇಳಿದಳು.
ತದನಂತರ ಅಜಯ್ ಮತ್ತು ಪಾಯಲ್ ಇಬ್ಬರೂ ಕೂಡಿ ಆ ಹುಡುಗಿಯನ್ನು ಮುಗಿಸಿದರು. ಇಲ್ಲಿ ಪಾಯಲ್ ತನ್ನ ಪ್ಲಾನ್ ಪ್ರಕಾರ ತನ್ನದೇ ಬಟ್ಟೆಗಳನ್ನು ಆಕೆಗೆ ತೊಡಿಸಿದಳು, ಅಷ್ಟೇ ಅಲ್ಲ ಆಕೆಯ ಮುಖದ ಗುರುತು ಸಿಗದಂತೆ ಇಬ್ಬರೂ ಕೂಡಿ ಮುಖದ ಮೇಲೆ ಎಸಿಡ್ ಚೆಲ್ಲಿದರು.
ಜನರ ದೃಷ್ಟಿಗೆ ಸಹಜವಾಗಿ ಮೃತ ದೇಹ ಕಾಣಿಸುವಂತೆ ಪಾಯಲ್ ಮತ್ತು ಅಜಯ್ ಕೂಡಿ ಆಕೆಯ ಮೃತ ದೇಹವನ್ನು ಒಂದು ಸ್ಥಳದಲ್ಲಿ ಎಸೆದರು. ನಂತರ ಮುಂದಿನ ಕೆಲಸ ಅಂದರೆ ಪೊಲೀಸರಿಗೆ ಸುದ್ದಿ ಮುಟ್ಟಿಸುವ ಕೆಲಸ ಮೃತದೇಹವನ್ನು ನೋಡಿದ ಜನರು ಮಾಡಿದರು. ಇತ್ತ ಪಾಯಲ್ ತನ್ನ ಮನೆಯಿಂದ ಪರಾರಿಯಾದಳು.
ಪಾಯಲ್ ಮನೆಯಿಂದ ಆಕಸ್ಮಿಕವಾಗಿ ಪರಾರಿಯಾದ ನಂತರ ಆಕೆಯ ಕುಟುಂಬದವರಿಗೂ ಚಿಂತೆಯಾಯಿತು. ಅವರು ಪಾಯಲ್ ಗೆ ಅತ್ತಿತ್ತ ಹುಡುಕಾಡಿ ಎಲ್ಲಿಯೂ ಸಿಗದೇ ಇದ್ದಾಗ ಕೊನೆಗೆ ಪೊಲೀಸರ ಹತ್ತಿರ ತಕರಾರು ದಾಖಲು ಮಾಡಿದರು.
ಇತ್ತ ಪೊಲೀಸರಿಗೆ ಪಾಯಲ್ ಹಾಗೂ ಅಜಯ್ ಇಬ್ಬರು ಒಗೆದ ಮೃತ ದೇಹ ಸಿಕ್ಕಿತ್ತು. ಪೊಲೀಸರಿಗೆ ಇವಳೇ ಪಾಯಲ್ ಇರಬಹುದೆಂದು ಆಕೆಯ ಕುಟುಂಬದವರಿಗೆ ದೇಹವನ್ನು ಗುರುತಿಸಲು ಕರೆಯಲಾಯಿತು.
ಎಸಿಡ್ ನಿಂದಾಗಿ ಮೃತದೇಹದ ಮುಖದ ಗುರುತು ಸರಿಯಾಗಿ ಸಿಗುತ್ತಿರಲಿಲ್ಲ. ಆದರೆ ಮೃತ ದೇಹದ ಮೇಲಿನ ಬಟ್ಟೆಗಳನ್ನು ನೋಡಿ ಇವಳೇ ಪಾಯಲ್ ಇದ್ದಾಳೆಂದು ಕುಟುಂಬದವರು ಹೇಳಿದರು. ತದನಂತರ ಕುಟುಂಬದವರು ಬಾಡಿಯನ್ನು ವಶಕ್ಕೆ ತೆಗೆದುಕೊಂಡು ಅಂತ್ಯ ಸಂಸ್ಕಾರವನ್ನೂ ಸಹ ಮಾಡಿದರು.
ಇತ್ತ ಕೊಲೆಯಾದ ಹುಡುಗಿಯ ಪೋಷಕರು ಸಹ ತಮ್ಮ ಮಗಳು ಕಾಣೆಯಾಗಿದ್ದಾಳೆಂದು ಪೊಲೀಸರ ಹತ್ತಿರ ತಕರಾರು ದಾಖಲಿಸಿದರು. ಇಲ್ಲಿಂದ ಪೊಲೀಸರ ಸಂಶಯ ಶುರುವಾಯಿತು. ಹಾಗೂ ಈ ಕೇಸಿನ ಸಂದರ್ಭವಾಗಿ ತುಂಬಾ ಜಾಣ್ಮೆಯಿಂದ ಎಳೆಯನ್ನು ಹುಡುಕಾಡಲು ಪ್ರಯತ್ನಿಸಿದಾಗ ಅವರಿಗೆ ಪಾಯಲ್ ಳ ಶೋಧ ಹತ್ತಿತು. ಮತ್ತು ಆಕೆಯನ್ನು ಅರೆಸ್ಟ್ ಸಹ ಮಾಡಿದರು.
ತನಿಖೆಯಲ್ಲಿ ಪಾಯಲ್ ತನ್ನ ಪ್ಲಾನ್ ಪೊಲೀಸರ ಮುಂದೆ ಉಸಿರಿದಳು ಹಾಗೂ ತಪ್ಪನ್ನು ಒಪ್ಪಿಕೊಂಡಳು. ತಂದೆಯ ನಂತರ ಅಜಯ್ ತನ್ನನ್ನೂ ಸಹ ಕೊಲೆ ಮಾಡಿದನು ಎಂದು ಪೊಲೀಸರಿಗೆ ತೋರಿಸುವದಿತ್ತು. ಇದೇ ಕಾರಣಕ್ಕಾಗಿ ಆಕೆ ಅಜಯ್ ಜೊತೆಗೆ ಕೂಡಿ ಬೇರೊಂದು ಹುಡುಗಿಯ ಹತ್ಯೆಯನ್ನು ಮಾಡಲು ಮುಂದಾದಳು.
ಫೇಸ್ಬುಕ್ ನಲ್ಲಿಯ ಚಾಟಿಂಗ್ ನಿಂದ ಪೊಲೀಸರು ಪುರಾವೆಗಳನ್ನು ಕಲೆ ಹಾಕಿದರು. ಸದ್ಯ ಪೊಲೀಸರು ಅಜಯ್ ಮತ್ತು ಪಾಯಲ್ ಜೊತೆ ಇವರಿಗೆ ಸಹಾಯ ಮಾಡಿದ ಇನ್ನು ನಾಲ್ಕು ಜನರನ್ನು ಅರೆಸ್ಟ್ ಮಾಡಿದ್ದಾರೆ.