ಅಬ್ಬಾ! ಬಾಲಿವುಡ್ ನಟಿ ತಾಪಸಿ ಪನ್ನು ‘ಇಷ್ಟೊಂದು’ ಕೋಟಿ ರೂಪಾಯಿಗಳ ಒಡತಿ; ಅನುರಾಗ್ ಕಶ್ಯಪ್ ಕಡೆಯಂತೂ..
ಬಾಲಿವುಡ್ ಕಲಾಕಾರ ಮತ್ತು ದಿಗ್ದರ್ಶಕರ ಮನೆಯ ಮೇಲೆ ತೆರಿಗೆ ವಿಭಾಗ ರೇಡ್ ಹಾಕಿದರು. ಆದಾಯ ತೆರಿಗೆ ವಂಚನೆ ಪ್ರಕರಣದಲ್ಲಿ ಈ ಅಭಿಯಾನವನ್ನು ತೆಗೆದುಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ದೊರೆತ ಸಂಪತ್ತಿನ ಮಾಹಿತಿ ಇಲ್ಲಿ ನೋಡಿ…
ತೆರಿಗೆ ಇಲಾಖೆಯು ಬಾಲಿವುಡ್ ನಲ್ಲಿಯ ಕೆಲವು ದೊಡ್ಡ ಮೀನುಗಳ ಮೇಲೆ ಬಲೆ ಬೀಸಿದೆ. ಅವರ ಮನೆ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ರೇಡ್ ಹಾಕಲಾಗಿದೆ. ಈ ಸಂದರ್ಭದಲ್ಲಿ ಮುಂಬೈ ಮತ್ತು ಪುಣೆ ಜೊತೆಗೆ ನಾಲ್ಕು ಕಲಾಕಾರರ ಮನೆಯ ಮೇಲೆ ತೆರಿಗೆ ವಿಭಾಗ ರೇಡ್ ಹಾಕಿದೆ. ಇದರಲ್ಲಿ ಮುಖ್ಯವಾಗಿ ಅನುರಾಗ್ ಕಶ್ಯಪ್, ತಾಪ್ಸೀ ಪನ್ನು, ವಿಕಾಸ್ ಬಹೆಲ್ ಮತ್ತು ಮಧು ಮಂಟೆನಾ ಇವರು ಶಾಮೀಲಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅನುರಾಗ್ ಕಶ್ಯಪ್ ಮತ್ತು ತಾಪ್ಸೀ ಪನ್ನು ಇವರ ಹತ್ತಿರ ಆದಾಯಕ್ಕಿಂತ ಹೆಚ್ಚು ಹಣ ಕಂಡುಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಈ ಪ್ರಕರಣಗಳ ಬಗ್ಗೆ ತುಂಬಾ ಜೋರಾಗಿ ಚರ್ಚೆ ನಡೆದಿದೆ.
ಅನುರಾಗ್ ಕಶ್ಯಪ್ ಅವರ ಕಡೆಗೆ ಹೆಚ್ಚು ಸಂಪತ್ತು ಸಿಕ್ಕಿರುವ ಬಗ್ಗೆ ಚರ್ಚೆಯಾಗುತ್ತಿದೆ. ಅನುರಾಗ್ ಅವರ ಕಡೆಗೆ ಒಟ್ಟು 806 ಕೋಟಿ ರೂಪಾಯಿಗಳ ಸಂಪತ್ತು ಸಿಕ್ಕಿದೆ. ಮತ್ತು ತಾಪ್ಸೀ ಪನ್ನು ಅವರ ಕಡೆಗೆ ಹೆಚ್ಚುವರಿ 44 ಕೋಟಿ ರೂಪಾಯಿಗಳ ಸಂಪತ್ತು ದೊರಕಿದೆ. ಒಂದು ವೆಬ್ಸೈಟ್ ನೀಡಿದ ಮಾಹಿತಿಯ ಪ್ರಕಾರ, ತಾಪ್ಸೀ ಪನ್ನು ತಮ್ಮ ಅಭಿನಯದ ಮುಖಾಂತರ ಪ್ರತಿವರ್ಷ ನಾಲ್ಕು ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ.

2019-20 ವರೆಗೆ ತಾಪ್ಸಿ ಅವರು ಒಂದು ಚಿತ್ರಕ್ಕಾಗಿ ಒಂದರಿಂದ ಎರಡು ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ಒಂದು ಚಿತ್ರಕ್ಕಾಗಿ ತಾಪ್ಸೀ ಪನ್ನು ಅವರು 8 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ. ಇವರು ಮೊದಲು ತಮ್ಮ ಪ್ರವಾಸ ತೆಲುಗು ಚಿತ್ರಗಳಿಂದ ಆರಂಭಿಸಿದ್ದರು. ನಂತರ ‘ಚಷ್ಮೆ ಬಹದ್ದೂರ್’ ಚಿತ್ರದ ಮುಖಾಂತರ ಬಾಲಿವುಡ್ ನಲ್ಲಿ ಪ್ರವೇಶಿಸಿದರು. ಇವರ ಹೆಸರಿಗೆ ಅನೇಕ ಹಿಟ್ ಚಿತ್ರಗಳು ಸೇರ್ಪಡೆಯಾಗಿವೆ.
ಅನುರಾಗ್ ಕಶ್ಯಪ್ ಅವರ ಸಂಪತ್ತಿನ ಬಗ್ಗೆ ಹೇಳುವುದಾದರೆ, ಇವರು ಒಂದು ಚಿತ್ರಕ್ಕಾಗಿ ಸುಮಾರು 11 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ. ಒಂದು ವರ್ಷದಲ್ಲಿ ಅವರು ಸುಮಾರು 60 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಹಣ ಗಳಿಸುತ್ತಾರೆ. ಆ ಪ್ರಕಾರ ಅವರು ತಿಂಗಳಿಗೆ ಆರು ಕೋಟಿ ಗಳಿಗಿಂತ ಹೆಚ್ಚು ಹಣ ಗಳಿಸುತ್ತಾರೆ. ಇವರ ಹತ್ತಿರ ನಾಲ್ಕು ಕೋಟಿ ರೂಪಾಯಿಗಳ ಒಂದು ವಾಹನವಿದೆ. ಈ ಆದಾಯದ ಮೇಲೆ ಪ್ರತಿವರ್ಷ ಅವರು 9.8 ಕೋಟಿ ರೂಪಾಯಿಗಳ ಟ್ಯಾಕ್ಸ್ ತುಂಬುತ್ತಾರೆ. ಇವರು ದಿಗ್ದರ್ಶನ ಮಾಡಿದ ಮಹತ್ವದ ಚಿತ್ರಗಳಲ್ಲಿ ಬ್ಲಾಕ್ ಫ್ರೈಡೆ, ಗುಲಾಲ್, ನೋ ಸ್ಮೋಕಿಂಗ್, ದೇವ್ ಡಿ, ಗ್ಯಾಂಗ್ ಆಫ್ ವಾಸೆಪುರ ಈ ಚಿತ್ರಗಳು ಶಾಮಿಲಾಗಿವೆ.