ಅಬ್ಬಾ! ಭಾರತಕ್ಕಾಗಿ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?? ಅಚ್ಚರಿ ಪಡುವುದು ಖಚಿತ!

ನೀರಜ್ ಚೋಪ್ರಾ, ಸದ್ಯಕ್ಕೆ ಇಡೀ ದೇಶದಲ್ಲಿ ಎಲ್ಲೆಲ್ಲೂ ಸಹಾ ಈ ಚಿನ್ನದ ಹುಡುಗನ ಬಗ್ಗೆಯೇ ಸುದ್ದಿಗಳು. ಏಕೆಂದರೆ ಬಹು ವರ್ಷಗಳ ನಂತರ ಒಲಂಪಿಕ್ಸ್ ನಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ಬರೆದು, ಇಡೀ ದೇಶ ಹೆಮ್ಮೆ ಪಡುವ ಹಾಗೆ ಮಾಡಿದ್ದಾರೆ. ನೀರಜ್ ಚೋಪ್ರಾ ಅವರು ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದು, ಅವರು ಜಾವಲಿನ್ ಥ್ರೋ ನಲ್ಲಿ ಸ್ಪರ್ಧಿಸುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ನೀರಜ್ ಅವರು ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿದ್ದು, ಇದೀಗ ಒಲಂಪಿಕ್ಸ್ ನಲ್ಲೂ ತನ್ನ ಸಾಧನೆಯನ್ನು ಮೆರೆದಿದ್ದಾರೆ. 2018ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ನೀರಜ್ ಚೋಪ್ರಾ ಅವರನ್ನು ಆಯ್ಕೆ ಮಾಡಲಾಗಿತ್ತು.

ಏಷ್ಯನ್ ಕ್ರೀಡಾಕೂಟದ ಉದ್ಘಾಟನೆಯ ಸಮಾರಂಭದಲ್ಲಿ ಭಾರತದ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಸಹಾ ಅವರಿಗೆ ನೀಡಲಾಗಿತ್ತು. ಜಾವ್ಲಿನ್ ಥ್ರೋ ಅಥವಾ ಭರ್ಜಿ ಎಸೆತದಲ್ಲಿ ಪ್ರಸ್ತುತ ರಾಷ್ಟ್ರೀಯ ದಾಖಲೆಯು ಅವರ ಹೆಸರಿನಲ್ಲೇ ಇದೆ. ಅವರು 88.07 ಮೀಟರ್ ಜಾವ್ಲಿನ್ ಎಸೆಯುವ ಮೂಲಕ ಈ ದಾಖಲೆಯನ್ನು ಮಾಡಿದ್ದಾರೆ. ನೀರಜ್ ಅವರು ತಮ್ಮ ತರಬೇತಿಯ ಅವಧಿಯಲ್ಲಿ ಬಹಳಷ್ಟು ಸುಧಾರಿಸುತ್ತಾ ಒಬ್ಬ ಉತ್ತಮ ಜಾವ್ಲಿನ್ ಥ್ರೋ ಮಾಡುವ ಅಥ್ಲೀಟ್ ಹಾಗೆ ಹೊರಹೊಮ್ಮುತ್ತಾ ಬಂದಿದ್ದಾರೆ.

ಅವರು ಒಲಿಂಪಿಕ್ಸ್ ಗೆ ಹೋಗುವ ಮೊದಲೇ, 2020ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಖಂಡಿತ ಅವರು ಪದಕವನ್ನು ಗೆಲ್ಲುತ್ತಾರೆ ಎನ್ನುವ ನಿರೀಕ್ಷೆಯೊಂದು ಅನೇಕರಲ್ಲಿ ಇತ್ತು. ಭಾರತ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದು 1900 ರಲ್ಲಿ, ಅದಾದ ನಂತರ 121 ವರ್ಷಗಳ ನಂತರ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ನೀರಜ್ ಸತ್ಯ ಮಾಡುವರಾ? ಎನ್ನುವ ಕಾತರತೆ ಅನೇಕರಲ್ಲಿ ಇತ್ತು. ಆ ಎಲ್ಲಾ ಕಾತುರತೆ ಹಾಗೂ ನಿರೀಕ್ಷೆಯನ್ನು ನೀರಜ್ ಚೋಪ್ರಾ ಅವರು ಅಕ್ಷರಶಃ ಸತ್ಯ ಮಾಡಿದ್ದಾರೆ. ಅವರು ಬಂಗಾರದ ಪದಕವನ್ನು ಗೆಲ್ಲುವ ಮೂಲಕ ತನ್ನ ಮೇಲೆ ನಿರೀಕ್ಷೆಗಳನ್ನು ಇಟ್ಟಿದ್ದವರ ಕನಸನ್ನು ನಿಜ ಮಾಡಿ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ.

ನೀರಜ್ ಚೋಪ್ರಾ ಅವರ ಆಸ್ತಿಯ ಮೌಲ್ಯದ ಕುರಿತಾಗಿ ಮಾತನಾಡುವುದಾದರೆ, ಅವರ ಆಸ್ತಿಯ ಒಟ್ಟು ಮೌಲ್ಯ ಸುಮಾರು ಒಂದರಿಂದ ಮೂರು ಮಿಲಿಯನ್ ಡಾಲರ್ ಗಳು ಎನ್ನಲಾಗಿದೆ. ಜಾವ್ಲಿನ್ ಥ್ರೋ ನ ಯಶಸ್ವಿ ಕ್ರೀಡಾಪಟುವಾಗಿ ಯಶಸ್ಸನ್ನು ಪಡೆದುಕೊಂಡಿರುವ ಅವರ ಆದಾಯದ ಮೂಲ ಅವರ ವೃತ್ತಿಜೀವನವೇ ಆಗಿದೆ. ಇದರ ಹೊರತಾಗಿ, ಅವರು ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಯಿಂದ ಸಾಕಷ್ಟು ಬೆಂಬಲವನ್ನು ಪಡೆಯುತ್ತಿದ್ದಾರೆ. ಇದು ಅವರ ಉಜ್ವಲ ಭವಿಷ್ಯ ನಿರ್ಮಾಣದಲ್ಲಿ ಅವರಿಗೆ ಬಹಳಷ್ಟು ನೆರವನ್ನು ನೀಡಿದೆ. 31 ಮಾರ್ಚ್ 2020 ರಂದು, ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ವಿ ರು ದ್ಧ ದ ಹೋರಾಟಕ್ಕೆ ಪಿಎಂ ಕೇರ್ಸ್ ಗೆ 2 ಲಕ್ಷ ರೂ. ದೇಣಿಗೆಯನ್ನು ಸಹಾ ನೀಡಿದ್ದರು.

ನೀರಜ್ ಅವರು ಕೇವಲ ಸೀನಿಯರ್ ಮಟ್ಟದಲ್ಲಿ ಮಾತ್ರವೇ ಕಾಮನ್ ವೆಲ್ತ್ ಮತ್ತು ಏಷಿಯನ್ ಕ್ರೀಡಾಕೂಟಗಳಲ್ಲಿ ಸಾಧನೆಯನ್ನು ಮಾಡಿದವರಲ್ಲ, ಬದಲಾಗಿ ಅವರು ಜೂನಿಯರ್ ಸರ್ಕ್ಯೂಟ್ ನಲ್ಲಿಯೂ ಹೆಸರು ಮಾಡಿದ್ದಾರೆ. ಅವರು 2016 ವಿಶ್ವ U 20 ಚಾಂಪಿಯನ್ ಆಗಿದ್ದರು ಮತ್ತು 86.4 ಮೀಟರ್ ಜಾವ್ಲಿನ್ ಎಸೆಯುವ ಮೂಲಕ 20 ವರ್ಷದೊಳಗಿನವರ ವಿಶ್ವದಾಖಲೆಯನ್ನು ಮಾಡಿದರು. ಆ ದಾಖಲೆ ಇನ್ನೂ ಅವರ ಹೆಸರಿನಲ್ಲೇ ಇದೆ. ಇದರ ಜೊತೆಯಲ್ಲಿ, ಟ್ರ್ಯಾಕ್ ಅಂಡ್ ಫೀಲ್ಡ್ ನಲ್ಲಿ ಅಂಡರ್ -20 ವಿಭಾಗದಲ್ಲಿ ವಿಶ್ವ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ನೀರಜ್ ಚೋಪ್ರಾ ರೋರ್ (ಕ್ಷತ್ರಿಯ) ಎನ್ನುವ ಸಮುದಾಯಕ್ಕೆ ಸೇರಿದವರಾಗಿದ್ದರು, ಹರಿಯಾಣದ ಪಾಣಿಪತ್ ಜಿಲ್ಲೆಯ ಖಂಡರಾ ಗ್ರಾಮ ಇವರ ಮೂಲ ಸ್ಥಾನವಾಗಿದೆ. ಅವರು ತಮ್ಮ ಶಿಕ್ಷಣವನ್ನು ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಮಾಡಿದ್ದಾರೆ. 2016 ರಲ್ಲಿ, ಅವರು ಭಾರತೀಯ ಸೇನೆಯಲ್ಲಿ ಕಿರಿಯ ನಿಯೋಜಿತ ಅಧಿಕಾರಿಯಾಗಿ ನೇಮಬ್ ನ ಸುಬೇದಾರ್ ಹುದ್ದೆಗೆ ನೇಮಕವಾಗಿದ್ದರು. ಒಂದು ನೀರಜ್ ಚೋಪ್ರಾ ಇಡೀ ದೇಶದ ಮಾತಾಗಿದ್ದಾರೆ. ಅವರ ಸಾಧನೆ ಇಂದು ಮಾತಾಡುತ್ತಿದೆ. ಭಾರತದ ಚಿನ್ನದ ಹುಡುಗ ಎಂದೇ ಅವರನ್ನು ಕರೆಯಲಾಗುತ್ತಿದೆ.