ಅಬ್ಬಾ! ಯಾರ ಅದೃಷ್ಟ ಹೇಗಿದೆ ಊಹಿಸುವುದು ಅಸಾಧ್ಯ: ಭಿಕ್ಷುಕನಿಗೆ ದಾನವಾಗಿ ಸಿಕ್ಕ ಹಾಸಿಗೆಯಲ್ಲಿತ್ತು ಲಕ್ಷ ಲಕ್ಷ ಹಣ!
ಇಂದಿನ ಆಧುನಿಕ ಜೀವನ ಬಹಳ ದುಬಾರಿಯಾಗುತ್ತಿದ್ದು, ಪ್ರತಿ ರೂಪಾಯಿಯನ್ನು ಗಳಿಸಲು ಕೂಡಾ ಸಾಕಷ್ಟು ಸಾಹಸವನ್ನು ಮಾಡಬೇಕಾದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಅದರಲ್ಲೂ ಮಾರ್ಚ್ ತಿಂಗಳ ನಂತರ ದೇಶದಲ್ಲಿ ಕೊರೊನಾ ಲಾಕ್ ಡೌನ್ ಘೋಷಣೆ ಆದ ಮೇಲೆ ಅನ್ಲಾಕ್ ಆಗುವವರೆಗಿನ ಅವಧಿಯಲ್ಲಿ ಹಣದ ನಿಜವಾದ ಮೌಲ್ಯ ಏನು ಎಂಬುದು ಅನೇಕರಿಗೆ ಅರ್ಥವಾಗಿದೆ. ಕೆಲಸದ ಮಹತ್ವ, ಅನಾವಶ್ಯಕ ಖರ್ಚುಗಳ ಮೇಲೆ ಲಗಾಮು, ಅವಶ್ಯಕತೆ ಇದ್ದವರಿಗೆ ನೆರವು, ಕುಟುಂಬದ ಮಹತ್ವ ಹೀಗೆ ಹತ್ತು ಹಲವು ವಿಷಯಗಳ ಮಹತ್ವವನ್ನು ಕೊರೊನಾ ತಿಳಿಸಿಕೊಟ್ಟಿದೆ. ಯಾರು ಉಳಿತಾಯ ಮಾಡಿದ್ದರೋ ಅವರಿಗೆ ಜೀವನ ಕಷ್ಟ ಎನಿಸಲಿಲ್ಲ. ಆದರೆ ಜೇಬಲ್ಲಿ ರೂಪಾಯಿ ಇಲ್ಲದವರ ಬಾಳು ಗೋಳಾಗಿದ್ದು ಸುಳ್ಳಲ್ಲ.
ನಾವು ಇಂದು ಹೇಳಲು ಹೊರಟಿರುವುದು ಮಾತ್ರ ಒಂದು ಅದೃಷ್ಟ ಒಲಿದು ಬಂದ ಕಥೆ. ಹೌದು ಅದೃಷ್ಟ ಒಲಿದರೆ ಕಸದಲ್ಲಿ ಕೂಡಾ ವಜ್ರ ಹೊಡೆಯಬಹುದು. ಈ ಘಟನೆ ನಡೆದಿದ್ದು 2017 ರಲ್ಲಿ. ಉತ್ತರಾಖಂಡ್ ನ ಹರಿದ್ವಾರದ ರಾಣಿಪುರ ಕೊತ್ವಾಲಿಯ ನಿವಾಸಿಯಾದ ಯುವಕನೊಬ್ಬನಿಗೆ ತನ್ನ ಮನೆಯಲ್ಲಿ ಇದ್ದ ಒಂದು ಹಳೆಯ ಹಾಸಿಗೆ ನೋಡಿದಾಗ ಅದು ಕೆಲಸಕ್ಕೆ ಬಾರದ್ದು ಅನಿಸಿತು. ಅದಕ್ಕೆ ಆತ ಆ ಹಾಸಿಗೆಯನ್ನು ಎತ್ತಿಕೊಂಡು ಹೋಗಿ ಕನ್ಖಲ್ ನ ದರಿದ್ರ್ ಭಂಜನ್ ದೇವಾಲಯದಲ್ಲಿ ಇದ್ದ ಒಬ್ಬ ಭಿಕ್ಷುಕನಿಗೆ ಆ ಹಾಸಿಗೆಯನ್ನು ದಾನವಾಗಿ ನೀಡಲು ಹೋದಾಗ ಭಿಕ್ಷುಲ ಮೊದಲು ಬೇಡ ಎಂದರೂ ಈತ ಬಿಡದೆ ಅವನಿಗೆ ಬಲವಂತ ಮಾಡಿ ಆ ಹಾಸಿಗೆ ನೀಡಿ ಬಂದು ಬಿಟ್ಟ.
ಸಂಜೆ ಯುವಕನ ತಂದೆ ಮನೆಗೆ ಬಂದಿದ್ದಾರೆ. ಅವರು ಕೋಣೆಯಲ್ಲಿ ಹಾಸಿಗೆ ಇಲ್ಲದಿರುವುದನ್ನು ನೋಡಿ ಕಂಗಲಾಗಿದ್ದಾರೆ. ಅವರು ಮಗನನ್ನು ಕರೆದು ಹಾಸಿಗೆ ಎಲ್ಲಿ ಎಂದು ವಿಚಾರಿಸಲು ಆತ ಕೆಲಸಕ್ಕೆ ಬಾರದ ಹಾಸಿಗೆಯನ್ನು ಭಿಕ್ಷುಕನಿಗೆ ಕೊಟ್ಟು ಬಂದೆ ಎಂದಿದ್ದಾನೆ. ಆ ಮಾತು ಕೇಳಿ ಯುವಕನ ತಂದೆ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಅವರು ಯುವಕನ ಮೇಲೆ ಕೋ ಪ ಮಾಡಿಕೊಂಡು ಚೆನ್ನಾಗಿ ಬೈದು, ಆ ಹಾಸಿಗೆಯಲ್ಲಿ ತಾನು 40 ಲಕ್ಷ ರೂಪಾಯಿಗಳನ್ನು ಇಟ್ಟಿದ್ದಾಗಿ ಹೇಳಿದ್ದಾರೆ. ಆ ಮಾತು ಕೇಳಿ ಯುವಕ ಕೂಡಾ ಅಯ್ಯೋ ಎಂತ ಕೆಲಸ ಮಾಡಿದೆ ಎಂದು ಚಡಪಡಿಸಿದ್ದಾನೆ.
ನಂತರ ತಂದೆ ಮಗ ಇಬ್ಬರೂ ತಡ ಮಾಡದೆ ಹಾಸಿಗೆ ದಾನ ನೀಡಿದ ಭಿಕ್ಷುಕನ ಬಳಿ ಹೋಗಿದ್ದಾರೆ. ಅವರಿಗೆ ಭಿಕ್ಷುಕ ಸಿಕ್ಕಿದರೂ ಹಾಸಿಗೆ ಅಲ್ಲಿ ಇರಲಿಲ್ಲ. ಆ ಭಿಕ್ಷುಕ ತನಗೆ ಆ ಹಾಸಿಗೆ ಬೇಕಿರಲಿಲ್ಲ ಅದಕ್ಕೆ ಬೇರೆ ಇನ್ನೊಬ್ಬ ಭಿಕ್ಷುಕನಿಗೆ ಅದನ್ನು ಕೊಟ್ಟು ಬಿಟ್ಟೆ ಎಂದು ತಿಳಿಸಿದ್ದಾನೆ. ಆಗ ತಂದೆ ಮಗ ಮತ್ತೊಮ್ಮೆ ಕಂಗಾಲಾಗುವ ಪರಿಸ್ಥಿತಿ. ಅವರು ಭಿಕ್ಷುಕನಿಗೆ ನಿಜವಾದ ವಿಷಯ ತಿಳಿಸಿದ ಕೂಡಲೇ ಮೂವರು ಸೇರಿ ಹಾಸಿಗೆ ಪಡೆದ ಇನ್ನೊಬ್ಬ ಭಿಕ್ಷುಕನ ಹುಡುಕಾಟಕ್ಕೆ ಹೋಗಿದ್ದಾರೆ ಆದರೆ ಎಷ್ಟು ಹುಡುಕಾಟ ಮಾಡಿದರೂ ಕೂಡಾ ಅವರಿಗೆ ಆತ ಸಿಗದ ಕಾರಣ ಅವರ ಶ್ರಮ ವ್ಯರ್ಥವಾಗಿದೆ.
ನಿಜಕ್ಕೂ ಇಲ್ಲಿ ಒಂದು ವಿಷಯ ಆಲೋಚನೆ ಮಾಡಿ, ಅದೃಷ್ಟ ಯಾರದ್ದು ಬಲ ವಾಗಿತ್ತು ಎಂದು. ಏಕೆಂದರೆ ಯುವಕ, ಆತನ ತಂದೆ ಅಥವಾ 40 ಲಕ್ಷ ಹಣವಿರುವ ಹಾಸಿಗೆ ಸಿಕ್ಕ ಆ ಭಿಕ್ಷುಕ ಈ ಮೂವರಲ್ಲಿ ಯಾರಿಗೂ ಕೂಡಾ ಆ ಹಣ ಸಿಗಲಿಲ್ಲ. ಆದರೆ ಅಜ್ಞಾತ ನಾದ ನಾಲ್ಕನೆಯ ವ್ಯಕ್ತಿ ಅಂದರೆ ಬಲವಂತವಾಗಿ ಒಬ್ಬ ಭಿಕ್ಷುಕನಿಂದ ಹಾಸಿಗೆ ಪಡೆದ ಮತ್ತೊಬ್ಬ ಭಿಕ್ಷುಕನ ಅದೃಷ್ಟ ಬಹಳ ಗಟ್ಟಿಯಾಗಿತ್ತೆನ್ನಬಹುದು. ನಲ್ವತ್ತು ಲಕ್ಷ ದೊರೆತ ಆ ಭಿಕ್ಷಕ ಏನಾದನೋ ತಿಳಿಯದಾದರೂ ಅವನಿಗೆ ಆ ಹಣ ತಲುಪಿಸುವಲ್ಲಿ ಮೂರು ಜನ ಮಧ್ಯ ವರ್ತಿಗಳಾಗಿ ಉಳಿದರು ಎನ್ನಬಹುದು.