ಅಬ್ಬಾ! ಶ್ರೀಲಂಕನ್ ಬ್ಯಾಟ್ಸ್ಮನ್ ನಿಂದ ಬಾಂಗ್ಲಾದೇಶ ವಿಕೆಟ್ ಕೀಪರ್ ತಲೆಗೆ ಬಿತ್ತು ಬ್ಯಾಟ್ ನಿಂದ ಭಾರೀ ಪೆಟ್ಟು; ನೋಡಿ ಈ ವಿಡಿಯೋ…
ಶ್ರೀಲಂಕಾ ಕ್ರಿಕೆಟ್ ತಂಡ ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಉಭಯ ತಂಡಗಳಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಮೇ 15 ರಂದು ಪ್ರಾರಂಭವಾಯಿತು. ಮೊದಲ ಟೆಸ್ಟ್ ಪಂದ್ಯ ಚಟ್ಟೋಗ್ರಾಮ್ ನಲ್ಲಿ ಆಡಲಾಗುತ್ತಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕಾಗಿ ಎಂಜಲೋ ಮ್ಯಾಥ್ಯೂಸ್, ಕುಸಲ್ ಮೆಂಡಿಸ್ ಮತ್ತು ದಿನೇಶ್ ಚಂಡಿಮಲ್ ಅವರು ಒಳ್ಳೆಯ ಪ್ರದರ್ಶನ ನೀಡಿದರು. ಏತನ್ಮದ್ಯೆ ಶ್ರೀಲಂಕಾ ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲಿ ದುರ್ಘಟನೆಯೊಂದು ನಡೆಯಿತು. ಅದೃಷ್ಟವಶಾತ್ ಬಾಂಗ್ಲಾದೇಶ ಆಟಗಾರನಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ.
ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ ನ 24 ನೆಯ ಓವರ್ನಲ್ಲಿ ಕುಸಲ್ ಮೆಂಡಿಸ್ ಬ್ಯಾಟ್ ಮಾಡುತ್ತಿದ್ದರು. ಆಗ ನಯಿಮ್ ಅವರ ಬಾಲಿಗೆ ಮೆಂಡಿಸ್ ಪುಲ್ ಶಾಟ್ ಹೊಡೆಯಲು ಜೋರಾಗಿ ಬ್ಯಾಟ್ ಬೀಸಿದರು. ಬಾಲರ್ ಸ್ಪಿನ್ನರ್ ಇರುವ ಕಾರಣದಿಂದಾಗಿ ವಿಕೆಟ್ ಕೀಪರ್ ತೀರ ಸ್ಟಂಪಿನ ಹತ್ತಿರವೇ ಕೀಪಿಂಗ್ ಮಾಡಲು ನಿಂತಿದ್ದರು. ಆಗ ಮೆಂಡಿಸ್ ತಿರುಗಿಸಿದ್ದ ಬ್ಯಾಟ್ ನೇರ ವಿಕೆಟ್ ಕೀಪರ್ ತಲೆಗೆ ಜೋರಾಗಿ ಬಿದ್ದಿದೆ. ಇದು ಹೇಗಾಯಿತು ಎಂಬುದು ಮೆಂಡಿಸ್ ಅವರಿಗೂ ಗೊತ್ತಾಗಿಲ್ಲ. ವಿಕೆಟ್ ಕೀಪರ್ ಲಿಟನ್ ದಾಸ್ ಹೆಲ್ಮೆಟ್ ಧರಿಸಿದ ಕಾರಣದಿಂದಾಗಿ ಅದೃಷ್ಟವಶಾತ್ ಅವರಿಗೆ ಯಾವ ರೀತಿಯ ಗಾಯವಾಗಿಲ್ಲ. ಎಷ್ಟೋ ಸಲ ವಿಕೆಟ್ ಕೀಪರ್ ಗಳು ಹೆಲ್ಮೆಟ್ ಧರಿಸದೆ ಹಾಗೆಯೇ ಕೀಪಿಂಗ್ ಮಾಡಲು ನಿಲ್ಲುತ್ತಾರೆ. ಆದರೆ ದಾಸ್ ಅವರು ಹೆಲ್ಮೆಟ್ ಧರಿಸಿದ ಕಾರಣ ಯಾವುದೇ ಅನಾಹುತಕ್ಕೆ ಆಸ್ಪದ ನೀಡಿಲ್ಲ. ಮೆಂಡಿಸ್ ಅವರ ಬ್ಯಾಟಿನಿಂದ ಜೋರಾದ ಹೊಡೆತ ಬಿದ್ದರೂ ದಾಸ್ ಅವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ. ಮೈದಾನದಲ್ಲಿ ಸ್ವಲ್ಪಹೊತ್ತು ಮಲಗಿದರು ನಿಜ, ಆದರೆ ಕಾಳಜಿ ಮಾಡುವಂಥ ಕಾರಣವಿಲ್ಲ. ಸ್ವಲ್ಪ ಹೊತ್ತು ಆಟ ನಿಲ್ಲಿಸಿ ಅವಶ್ಯಕವಾಗಿರುವ ತಪಾಸಣೆಯನ್ನು ಮಾಡಿ ಮತ್ತೆ ಆಟಕ್ಕೆ ಶುರುಮಾಡಿದರು. ಈ ಪಂದ್ಯದಲ್ಲಿ ಶ್ರೀಲಂಕಾ ಮೊದಲ ಇನ್ನಿಂಗ್ಸ್ ನಲ್ಲಿ ತನ್ನ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 397 ರನ್ಗಳನ್ನು ಸೇರಿಸಿತು. ಎರಡನೆಯ ದಿನದಾಟ ಮುಗಿಯುವ ಹೊತ್ತಿಗೆ ಬಾಂಗ್ಲಾದೇಶ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 76 ರನ್ ಗಳನ್ನು ಗಳಿಸಿತ್ತು.
ವಿಡಿಯೋ ನೋಡಿ
— cric fun (@cric12222) May 15, 2022