ಅಬ್ಬಾ! 10.6 ಫೀಟ್ ಎತ್ತರದ ಸೈಕಲ್ ತಯಾರಿಸಿದ ಯುವಕ; ಸೈಕಲ್ ನೋಡಿ ಇದೇನು ಸೈಕಲ್ಲೋ ಬುರ್ಜ್ ಖಲೀಫಾನೋ ಎಂದ ಜನ! ನೋಡಿ ಈ Video!
ಪರಿಸರ ಮಾಲಿನ್ಯ ಎನ್ನುವುದು ಇಂದಿನ ದಿನಗಳಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ. ಅದರಲ್ಲಿ ಮಾಲಿನ್ಯದ ಕುರಿತಾಗಿ ಎಷ್ಟೆಲ್ಲಾ ವಿಚಾರಗಳನ್ನು ತಿಳಿಸಿದರೂ, ಜಾಗೃತಿಯನ್ನು ಮೂಡಿಸಿದರೂ ಇದರ ಹೊರತಾಗಿ ಜನರು ಸಾಮಾಜಿಕ ಕಳಕಳಿ, ಪರಿಸರ ಕಾಳಜಿ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಸಣ್ಣ ಪುಟ್ಟ ದೂರವನ್ನು ಕ್ರಮಿಸಲು ಕೂಡಾ ತಮ್ಮ ವಾಹನಗಳನ್ನು ಬಳಸುತ್ತಾರೆ. ಇದರಿಂದ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ವಾಹನಗಳು ಹೊರಗೆ ಹೊಮ್ಮಿಸುವ ವಿಷಾನಿಲಗಳ ನಮ್ಮ ಸುಂದರವಾದ ಪ್ರಕೃತಿಯಲ್ಲಿನ ಶುದ್ಧವಾದ ವಾಯುವನ್ನು ಕಲುಷಿತಗೊಳಿಸಿದ್ದು, ಉಸಿರಾಟಕ್ಕೆ ಶುದ್ಧ ಗಾಳಿ ದೊರೆಯುವುದು ಕೂಡಾ ಕಷ್ಟವಾಗಿದ್ದು, ಜನರು ಉಸಿರಾಟಕ್ಕೆ ಸಂಭಂದಿಸಿದ ಸಮಸ್ಯೆಗಳನ್ನು ಕೂಡಾ ಎದುರಿಸುವಂತೆ ಆಗಿದೆ.
ಅಲ್ಪ ದೂರವನ್ನು ಕ್ರಮಿಸಲು ಬಳಸಬಹುದಾದ ಸೈಕಲ್ ಗಳು ಬಡವರ ವಾಹನವಾಗಿ ಮಾರ್ಪಾಟಾಗಿದೆ. ಅದನ್ನು ಬಳಸುವುದರಿಂದ ಮಾಲಿನ್ಯ ತಡೆ, ದೇಹಾರೋಗ್ಯಕ್ಕೆ ಕೂಡಾ ಉತ್ತಮ ಎಂಬ ಅರಿವಿಲ್ಲದೇ ಅನೇಕರು ಸೈಕಲ್ ತುಳಿಯುವುದನ್ನು ಅವಮಾನ ಎಂದು ಭಾವಿಸುವ ದಿನಗಳು ಇಂದು ನಮ್ಮ ಮುಂದಿವೆ. ಜನರನ್ನು ಇಂತಹ ಭ್ರಮೆಯಿಂದ ಹೊರಗೆ ತಂದು, ಪರಿಸರವನ್ನು ಸ್ವಚ್ಛವಾಗಿ ಇಡುವಲ್ಲಿ ನಮ್ಮ ಪಾತ್ರವೂ ಇದೆಯೆಂದೂ ತಿಳಿಸಲು, ಜಾಗೃತಿ ಮೂಡಿಸಲು ಅನೇಕ ಜನ ಜಾಗೃತಿ ಜಾಥಾಗಳು ನಡೆಯುತ್ತಲೇ ಇರುತ್ತವೆ. ಅಂತಹ ಒಂದು ಅಭಿಯಾನವನ್ನು ದೆಹಲಿಯ ಗೋ ಗ್ರೀನ್ ಸೈಕ್ಲಿಂಗ್ ಅಂಡ್ ಎನ್ವೈಯಾರ್ನಮೆಂಟ್ ಕ್ಲಬ್ ಕೂಡಾ ಆಯೋಜಿಸಿದೆ.

ಈ ಅಭಿಯಾನದಲ್ಲಿ ಈ ಕ್ಲಬ್ ಸದಸ್ಯರು ಸೈಕಲ್ ನ ಮಹತ್ವ ತಿಳಿಸಲು ಚಂಡೀಘಡದಿಂದ ದೆಹಲಿಯ ವರೆಗೆ ಸೈಕಲ್ ನಲ್ಲಿ ಪ್ರಯಾಣ ಮಾಡುವ ಅಭಿಯಾನ ಆಯೋಜನೆ ಮಾಡಿದ್ದಾರೆ. ಆದರೆ ಈ ಅಭಿಯಾನದಲ್ಲಿ ಜನರ ಗಮನವನ್ನು ಸೆಳೆದಿರುವುದು ಒಬ್ಬ ವ್ಯಕ್ತಿ ಅವರ ಹೆಸರು ರಾಜೀವ್ ಕುಮಾರ್, ಇವರ ಸೈಕ್ಲಿಂಗ್ ನ ಸಾಧನೆಯಿಂದಾಗಿ ಇವರು ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಇತ್ಯಾದಿಗಳಲ್ಲಿ ನಮೂದಾಗಿದೆ. ಈ ಬಾರಿ ನಡೆಸಿರುವ ಚಂಡೀಗಡ ದಿಂದ ದೆಹಲಿ ಅಭಿಯಾನದಲ್ಲಿ ಪ್ರಮುಖ ಆಕರ್ಷಣೆ ಆಗಿರುವುದು ರಾಜೀವ್ ಕುಮಾರ್ ಅವರ ಸೈಕಲ್.
ರಾಜೀವ್ ಕುಮಾರ್ ಅವರ ಸೈಕಲ್ ಸಾಮಾನ್ಯ ಸೈಕಲ್ ಗಳ ಮಾದರಿಯಲ್ಲಿ ಇಲ್ಲ. ಅದನ್ನು ಅವರೇ ಸ್ವತಃ ಡಿಸೈನ್ ಮಾಡಿದ್ದು, ಒಂದು ವಿಭಿನ್ನವಾದ ಮಾದರಿಯಲ್ಲಿ, ಹೆಚ್ಚು ಎತ್ತರದಲ್ಲಿ ಕುಳಿತು ತುಳಿಯುವಂತೆ ಅವರು ವಿನ್ಯಾಸವನ್ನು ಮಾಡಿದ್ದಾರೆ. ಅಲ್ಲದೇ ಆ ಸೈಕಲ್ ನ ಎತ್ತರವನ್ನು ಇನ್ನಷ್ಟು ಹೆಚ್ಚಿಸಲು ಕೂಡಾ ಅವಕಾಶ ಇದೆ ಎಂದು ರಾಜೀವ್ ಹೇಳಿದ್ದಾರೆ. ರಸ್ತೆಯಲ್ಲಿ ಅಷ್ಟು ಎತ್ತರದ ಸೈಕಲ್ ಮೇಲೆ ಅವರು ಹೋಗುತ್ತಿದ್ದರೆ ಸಹಜವಾಗಿಯೇ ಅದು ಎಲ್ಲರ ಗಮನವನ್ನು ಸೆಳೆಯುತ್ತಿದೆ, ಪ್ರಮುಖ ಆಕರ್ಷಣೆಯಾಗಿದೆ. ರಸ್ತೆಯಲ್ಲಿ ಅನೇಕರು ರಾಜೀವ್ ಅವರು ಸೈಕಲ್ ತುಳಿಯುತ್ತಿರುವುದನ್ನು ವೀಡಿಯೋ ಹಾಗೂ ಫೋಟೋಗಳಲ್ಲಿ ಸೆರೆ ಹಿಡಿದಿದ್ದಾರೆ ಕೂಡಾ.
ವಿಡಿಯೋ ನೋಡಿ
ರಾಜೀವ್ ಕುಮಾರ್ ಅವರ ಈ ಸೈಕಲ್ 10.6 ಮೀ. ಎತ್ತರ, 9.6 ಮೀ. ಉದ್ದವಿದೆ. ರಾಜೀವ್ ಜಾನಿ ಎನ್ನುವ ಹೆಸರಿನಿಂದ ಜನಪ್ರಿಯರಾಗಿದ್ದು ಇವರು ತಮ್ಮ ಸೈಕಲ್ ಗಾಗಿ ಒಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಇದನ್ನು ಸಿದ್ಧಪಡಿಸಲು ಎರಡು ವರ್ಷ ಸಮಯ ಬೇಕಾಯಿತಂತೆ. 1995 ರಲ್ಲಿ ಅವರ ಕನಸು ನನಸಾಗಿ ದೊಡ್ಡ ಸೈಕಲ್ ಮೇಲೆ ಸವಾರಿ ಮಾಡಿದರು,ದಾಖಲೆಯನ್ನು ಬರೆದರು. ಅವರು ಮುಂಬಯಿಗೂ ಕೂಡಾ ಸೈಕಲ್ ಮೇಲೆ ಸವಾರಿ ಮಾಡುತ್ತಾ ಬರುವ ಆಲೋಚನೆಯಲ್ಲಿ ಕೂಡಾ ಇದ್ದಾರೆ ಎನ್ನಲಾಗಿದೆ.