ಅಬ್ಬಾ… 2700 ನಾಗರಿಕರಿಗೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ನಿಷ್ಕ್ರೀಯಗೊಳಿಸಿದರು 500 ಕಿಲೋ ತೂಕದ ಬಾಂಬ್!

ಜರ್ಮನಿ ದೇಶದ ಆರ್ಥಿಕ ರಾಜಧಾನಿಯಾದ ಫ್ರ್ಯಾಂಕ್ ಫರ್ಟ್ ಪಟ್ಟಣದಲ್ಲಿಯ ಕನ್ವೆನ್ಷನ್ ಸೆಂಟರ್ ಹತ್ತಿರ ದೊರೆತ ಎರಡನೆಯ ಮಹಾಯುದ್ಧದ ಸಮಯದಲ್ಲಿಯ 500 ಕಿಲೋ ತೂಕದ ಬಾಂಬ್ ಶುಕ್ರವಾರದಂಡು ನಿಷ್ಕ್ರಿಯಗೊಳಿಸಿದರು. ಇಲ್ಲಿಯ ಅಗ್ನಿಶಾಮಕ ದಳದವರು ಈ ಬಾಂಬ್ ಅನ್ನು ನಿಷ್ಕ್ರಿಯ ಗೊಳಿಸುವ ಮುನ್ನ ಪಟ್ಟಣದಲ್ಲಿಯ 2700 ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ಹೋಗುವ ಬಗ್ಗೆ ಒಂದು ನಿರ್ದೇಶವನ್ನು ಜಾರಿಗೊಳಿಸಿದರು. ಈ ಬಗ್ಗೆ ಅಸೋಸಿಯೇಟ್ ಪ್ರೆಸ್ ವರದಿ ಮಾಡಿದೆ.

ಮಗಳವಾರ ಫ್ರ್ಯಾಂಕ್ ಫರ್ಟ್ ಕನ್ವೆನ್ಷನ್ ಸೆಂಟರ್ ಹತ್ತಿರ ಅಗೆಯುವ ಕಾರ್ಯ ನಡೆದಾಗ 500 ಕಿಲೋ ತೂಕದ ಬಾಂಬ್ ಪತ್ತೆಯಾಯಿತು. ಇಆದರ ಬಗ್ಗೆ ಪೊಲೀಸರಿಗೆ ರಿಪೋರ್ಟ್ ಸಲ್ಲಿಸಿದ ನಂತರ ಪೊಲೀಸರು ತಕ್ಷಣ ಘಟನೆಯ ಸ್ಥಳಕ್ಕೆ ಆಗಮಿಸಿ ಬಾಂಬ್ ಸಿಕ್ಕ ಪರಿಸರವನ್ನು ಖಾಲಿ ಮಾಡಿ ಅದನ್ನು ಪ್ರತಿಬಂಧಿತ ಕ್ಷೇತ್ರವೆಂದು ಘೋಷಿಸಿದರು. ಹಾಗೆಯೇ ಶುಕ್ರವಾರ ಇಲ್ಲಿಯ ಸಾರಿಗೆ ವ್ಯವಸ್ಥೆಯನ್ನು ಸಹಿತ ಬಂದ್ ಮಾಡಲಾಯಿತು. ಇವುಗಳಲ್ಲಿ ಪ್ರಮುಖವಾಗಿ ಬಸ್ ಮತ್ತು ಟ್ರೇನ್ ಗಳ ಸಮಾವೇಶವಾಗಿತ್ತು. ಅಲ್ಲಿಯ ಪ್ರಾಣಿ ಸಂಗ್ರಹಾಲಯವನ್ನು ಸಹ ಬಂದ್ ಮಾಡಲಾಯಿತು. ಈ ಸ್ಥಳದಲ್ಲಿಯೇ ಕೆಲವೊಂದು ರೋಗಿಗಳಿಗೂ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಹೀಗೆ ಬಾಂಬ್ ಪತ್ತೆಯಾದ ಪರಿಸರದಲ್ಲಿಯ 2700 ಜನರನ್ನು ಬೇರೆ ಬೇರೆ ಜಾಗಕ್ಕೆ ಸ್ಥಳಾಂತರಿಸಲಾಯಿತು. ಆನಂತರ ಈ ಮೇಡ್ ಇನ್ ಅಮೆರಿಕ ಬಾಂಬ್ ನ್ನು ನಿಷ್ಕ್ರಿಯಗೊಳಿಸಲಾಯಿತು. ಬಾಂಬ್ ನ್ನು ನಿಯೋಜನೆಯ ಪ್ರಕಾರವೇ ನಿಷ್ಕ್ರಿಯಗೊಳಿಸಲಾಯಿತೆಂದು ಸರಕಾರಿ ಪ್ರತಿನಿಧಿ ಹೇಳಿದರು.

ಜರ್ಮನಿಯಲ್ಲಿ ಈ ರೀತಿ ಜಮೀನು ಅಗೆಯುವಾಗ ಬಾಂಬ್ ಪತ್ತೆಯಾಗುವದು ಅಷ್ಟೊಂದು ವಿಶೇಷವೇನಲ್ಲ. ಎರಡನೆಯ ಮಹಾಯುದ್ಧ ಮುಗಿದು 75 ವರ್ಷಗಳೇ ಕಳೆದರೂ ಜರ್ಮನಿಯಲ್ಲಿ ಬಾಂಬ್ ಗಳು ದೊರೆಯುತ್ತಲೇ ಇವೆ. ಮೊದಲೊಮ್ಮೆ ಸೆಪ್ಟೆಂಬರ್ 2017 ರಲ್ಲಿ 1600 ಕಿಲೋ ತೂಕದ ಬಾಂಬ್ ಪತ್ತೆಯಾಗಿತ್ತು. ಆಗ ಬಾಂಬ್ ನಿಷ್ಕ್ರಿಯಗೊಳಿಸಲು ಸುರಕ್ಷೆಯ ಕಾರಣದಿಂದ 65 ಸಾವಿರ ನಾಗರಿಕರಿಗೆ ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದರು.