ಅಬ್ಬಾ! 6 ಜನ ಗರ್ಭಿಣಿಯರ ಜೊತೆ ಮದುವೆಗೆ ಬಂದ ಯುವಕ; ಹೆಮ್ಮೆಯಿಂದ “ಎಲ್ಲಾ ಮಕ್ಕಳ ತಂದೆ ತಾನೇ ಎಂದ!”

ಸಾಮಾನ್ಯವಾಗಿ ಮದುವೆ ಹಾಗೂ ಇತರ ಯಾವುದೇ ಶುಭ ಸಮಾರಂಭಗಳಿಗೆ ಆಹ್ವಾನವನ್ನು ನೀಡುವಾಗ ಕುಟುಂಬ ಸಮೇತರಾಗಿ ಬನ್ನಿ ಎಂದು ಕರೆಯುತ್ತಾರೆ. ಅದೂ ಅಲ್ಲದೇ ಸಂಬಂಧಿಕರ ಮದುವೆ ಅಥವಾ ಇನ್ನಾವುದೋ ಶುಭ ಕಾರ್ಯಕ್ರಮವಾದರೆ ನಾವು ಕೂಡಾ ಕುಟುಂಬ ಸಮೇತರಾಗಿ ಅಲ್ಲಿಗೆ ಹೋಗುವುದುಂಟು. ಆದರೆ ಈಗ ಒಂದು ವಿಚಿತ್ರ ಘಟನೆ ವರದಿಯಾಗಿದ್ದು, ವ್ಯಕ್ತಿಯೊಬ್ಬ ಕುಟುಂಬ ಸಮೇತ ಮದುವೆಗೆ ಬಂದಿದ್ದನ್ನು ನೋಡಿ ಪ್ರತಿಯೊಬ್ಬರು ಕೂಡಾ ಆಶ್ಚರ್ಯ ಪಟ್ಟಿದ್ದಾರೆ ಹಾಗೂ ಇದೆಂಥ ವಿಚಿತ್ರ ಎಂದು ಅನೇಕರು ಉದ್ಗಾರವನ್ನು ಕೂಡ ತೆಗೆದಿದ್ದಾರೆ. ಹಾಗಾದರೆ ಅಲ್ಲಿ ನಡೆದ ವಿಚಿತ್ರ ಘಟನೆ ಏನು ಅನ್ನುವುದನ್ನು ನಾವು ಕೂಡ ತಿಳಿಯೋಣ ಬನ್ನಿ.

ಮದುವೆ ಸಮಾರಂಭಕ್ಕೆ ವ್ಯಕ್ತಿಯೊಬ್ಬರು ಕುಟುಂಬ ಸಮೇತ ಆಗಮಿಸಿದ್ದಾರೆ, ಕುಟುಂಬ ಸಮೇತ ಆಗಮಿಸಿದರೆ ಅದರಲ್ಲೇನಿದೆ ಆಶ್ಚರ್ಯ ಅಂತೀರಾ? ನಿಜವಾಗಲೂ ವಿಷಯ ಅಲ್ಲೇ ಇದೆ, ಏಕೆಂದರೆ ಆ ವ್ಯಕ್ತಿ ಬಂದಿದ್ದು ತನ್ನ ಜನ ಗೆಳತಿಯರ ಜೊತೆಗೆ. ಇಲ್ಲಿ ಮತ್ತೊಂದು ವಿಶೇಷ ಏನೆಂದರೆ ಈ ಆರು ಜನ ಗೆಳತಿಯರು ಕೂಡಾ ತುಂಬು ಗರ್ಭಿಣಿಯರು. ಈತ ಬಹಳ ಹೆಮ್ಮೆಯಿಂದ ಆರು ಜನ ಗೆಳತಿಯರ ಮಕ್ಕಳಿಗೆ ನಾನು ತಂದೆಯಾಗುತ್ತಿದ್ದೇನೆ ಎಂದು ಹೇಳಿಕೊಂಡು ಸಂತಸ ಪಟ್ಟಿದ್ದಾರೆ.‌ ಪ್ರೀಟಿ ಮೈಕ್ ಎನ್ನುವ ಈ ವ್ಯಕ್ತಿ ಹಾಗೂ ಆತನ ಪತ್ನಿಯರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ.

ಪ್ರೀಟಿ ಮೈಕ್ ನೈಜೀರಿಯಾದ ನಿವಾಸಿಯಾಗಿದ್ದು ಈತ ಪ್ಲೇಬಾಯ್ ಎಂಬುದಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾನೆ. ಈತ ಈ ಮೊದಲೂ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಯನ್ನು ಮಾಡಿದ್ದು, ಈ ಹಿಂದೆ ಆತ ಮಹಿಳೆಯರ ಅ ನು ಚಿತವಾದ ಫೋಟೋಗಳನ್ನು ಶೇರ್ ಮಾಡಿದ ಕಾರಣಕ್ಕೆ, ದೂ ರು ದಾಖಲಾಗಿ, ಈತನನ್ನು ಪೊಲೀಸರು ಬಂ ಧಿ ಸಿದ್ದರು ಎನ್ನಲಾಗಿದೆ.
ಪ್ರೀಟಿ ಮೈಕ್ ತನ್ನ ಸ್ನೇಹಿತ, ನಟ ವಿಲಿಯಮ್ಸ್ ಉಚೆಂಬ ಎನ್ನುವವರ ವಿವಾಹಕ್ಕೆ ತನ್ನ ಆರು ಜನ ಗರ್ಲ್ ಫ್ರೆಂಡ್ ಗಳ ಜೊತೆ ಹಾಜರಾಗಿದ್ದ. ಈತ ಮದುವೆಗೆ ಬಂದ ಮೇಲೆ ಅಲ್ಲಿ ಗಂಡು-ಹೆಣ್ಣಿಗಿಂತ ಈತನ ಬಗ್ಗೆ ಹೆಚ್ಚಿನ ಜನ ಮಾತನಾಡಿಕೊಂಡರು ಹಾಗೂ ಮದುವೆಯಲ್ಲಿ ಪ್ರಮುಖ ಆಕರ್ಷಣೆ ಕೂಡ ಈತ ಮತ್ತು ಈತನ ಗರ್ಲ್ ಫ್ರೆಂಡ್ ಗಳು ಎನ್ನಲಾಗಿದೆ.

ಮೈಕ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡು ನನ್ನ ಜೀವನದ ಬಹಳ ಸಂತೋಷದ ದಿನಗಳನ್ನು ಕಳೆಯುತ್ತಿದ್ದೇನೆ, ಇದು ಯಾವುದೇ ಆ್ಯಕ್ಟಿಂಗ್ ಟ್ರಿಕ್ ಅಲ್ಲ ಎಂದು ಬರೆದುಕೊಂಡಿದ್ದಾನೆ. ಇದನ್ನು ನೋಡಿದ ನೆಟ್ಟಿಗ ರಲ್ಲಿ ಅನೇಕರು ಈತ ಮದುವೆಗೆ ಹಾಜರಾಗಿ ಗಂಡು-ಹೆಣ್ಣಿನ ಸಂತೋಷವನ್ನು ಹಾಳು ಮಾಡಿಬಿಟ್ಟ. ಏಕೆಂದರೆ ಮದುವೆಯಲ್ಲಿ ಗಂಡು ಹೆಣ್ಣನ್ನು ಬಿಟ್ಟು ಈತನ ಬಗ್ಗೆ ಚರ್ಚೆ ಜೋರಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಈತನ ಫೋಟೋಗಳ ಕುರಿತಾಗಿ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಚ ರ್ಚೆಯೇ ನಡೆದಿದೆ ಕೂಡಾ.

ಪ್ಲೇಬಾಯ್ ಹೆಸರಿನಿಂದಲೇ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿರುವ ಮೈಕ್ ತನ್ನ ಐಶಾರಾಮಿ ಜೀವನದ, ತನ್ನ ಗ್ಲಾಮರಸ್ ಬದುಕಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿ ಕೊಳ್ಳುವುದು ಸಾಮಾನ್ಯ. ಇನ್ಸ್ಟಾಗ್ರಾಮ್ ಅಲ್ಲಿ ಈತನಿಗೆ ಬರೋಬ್ಬರಿ ಮೂರು ಲಕ್ಷ ಜನ ಹಿಂಬಾಲಕರಿದ್ದಾರೆ ಎಂದರೆ ಇದು ಮೈಕ್ ನ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಹೇಳಬಹುದು.
ಒಟ್ಟಿನಲ್ಲಿ ಮೈಕ್ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುವುದು ಕೂಡಾ ನಿಜ. ಈಗ ಪ್ರಸ್ತುತ ಆತನ ಆರು ಜನ ಗರ್ಭಿಣಿ ಗರ್ಲ್ ಫ್ರೆಂಡ್ ಗಳ ಜೊತೆಗಿನ ಫೋಟೋ ಎಲ್ಲರ ಗಮನ ಸೆಳೆದಿದೆ.