ಅಬ್ಬಾ! 82 ರ ಮುದುಕನಿಗೆ 50 ವರ್ಷಗಳ ನಂತರ ಮರಳಿ ದೊರೆಯಿತು ಆತನ ಮೊದಲ ಪ್ರೇಮ: ಅಪೂರ್ಣ ವಾಗಿದ್ದ ಪ್ರೇಮಕಥೆ ಈಗ ಪೂರ್ಣವಾಗಿದ್ದು ಹೇಗೆ?

ಜೀವನದಲ್ಲಿ ಮೊದಲ ಪ್ರೇಮವು ಯಶಸ್ವಿಯಾಗದೇ ಕಳೆದು ಹೋದರೆ ಮತ್ತೆ ಅದು ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ರಾಜಸ್ಥಾನದ ಬೂತಿಯಾ ಹಳ್ಳಿಯಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ 50 ವರ್ಷಗಳ ನಂತರ ಅವರ ಮೊದಲ ಪ್ರೇಮ ಅವರ ಜೀವನಕ್ಕೆ ಮರಳಿ ಬರುತ್ತಿದೆ. ಅದು ದೂರದ ಆಸ್ಟ್ರೇಲಿಯಾದಿಂದ ಎಂದರೆ ಆಶ್ಚರ್ಯ ಆಗಬಹುದು. ಎಪ್ಪತ್ತರ ದಶಕದಲ್ಲಿ ಆಸ್ಟ್ರೇಲಿಯಾದಿಂದ ಒಬ್ಬ ಯುವತಿ ರಾಜಸ್ಥಾನಕ್ಕೆ ಪ್ರವಾಸ ಬಂದ ಸಂದರ್ಭದಲ್ಲಿ ಇಲ್ಲಿ ಯುವಕನ ಜೊತೆ ಪ್ರೇಮದಲ್ಲಿ ಬಿದ್ದಿದ್ದಳು. ಆದರೆ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಅವರಿಬ್ಬರೂ ಪ್ರತ್ಯೇಕವಾಗಿದ್ದರು. ಈಗ ಐವತ್ತು ವರ್ಷಗಳ ನಂತರ ಅವರಿಬ್ಬರೂ ಮತ್ತೆ ಒಬ್ಬರನ್ನೊಬ್ಬರು ಭೇಟಿ ಮಾಡಲಿದ್ದಾರೆ. ಇದು ನಿಜಕ್ಕೂ ಒಂದು ಅಪರೂಪದ ಪ್ರೇಮದ ಕಥೆಯಾಗಿದೆ. ಇದು ಯಾವುದೇ ಸಿನಿಮಾದ ಕಥೆಗಿಂತ ಕಡಿಮೆಯೆನಿಸದ ವಾಸ್ತವದ ರೋಚಕ ಕಥೆಯಾಗಿದೆ.

ಆ ವ್ಯಕ್ತಿಗೆ ಈಗ 82 ವರ್ಷ ವಯಸ್ಸು. ಅವರಿಗೆ 30 ವರ್ಷ ವಯಸ್ಸಾಗಿದ್ದಾಗ ಮರಿನಾ ಎನ್ನುವ ಯುವತಿಯು ಆಸ್ಟ್ರೇಲಿಯಾದಿಂದ ಭಾರತಕ್ಕೆ ಪ್ರವಾಸ ಬಂದಾಗ ರಾಜಸ್ಥಾನದ ಜೈಸಲ್ಮೇರ್ ಗೆ ಭೇಟಿ ನೀಡಿದ್ದಳು. ಐದು ದಿನಗಳು ಆಕೆಯ ಪ್ರವಾಸದಲ್ಲಿ ಈ ವ್ಯಕ್ತಿಯು ಆಕೆಗೆ ಒಂಟೆ ಸವಾರಿ ಮಾಡುವುದನ್ನು ಕಲೊಸಿದರು. ಅಲ್ಲದೆ ಐದೇ ದಿನಗಳಲ್ಲಿ ಅವರ ಮಧ್ಯೆ ಒಂದು ಆತ್ಮೀಯತೆ ಬೆಳೆದಿದ್ದು, ಇಬ್ಬರ ಕಣ್ಣಲ್ಲಿ ಕೂಡ ಪ್ರೀತಿ ಕಂಡಿತ್ತು. ಕಣ್ಣಿಂದ ಕಣ್ಣಲ್ಲೇ ಅವರು ಸಂವಹನವನ್ನು ಮಾಡಿಕೊಳ್ಳುತ್ತಿದ್ದರು. ಹೀಗೆ ಐದು ದಿನಗಳು ಕಳೆದು ಮರಿನಾ ತನ್ನ ದೇಶಕ್ಕೆ ವಾಪಸ್ಸು ಹೋಗುವ ಮೊದಲು ಆತನಿಗೆ ಐ ಲವ್ ಯು ಎಂದು ಹೇಳಿ ಬಿಟ್ಟಳು. ಅದನ್ನು ಕೇಳಿದ ಆತ ಬಹಳ ನಾಚಿಕೆ ಪಟ್ಟಿದ್ದರು.

ಮರಿನಾ ತನ್ನ ದೇಶಕ್ಕೆ ಹೋದ ಮೇಲೆ ಕೂಡ ಈತನಿಗೆ ವಾರಕ್ಕೊಂದು ಪತ್ರವನ್ನು ಬರೆಯುತ್ತಿದ್ದಳು. ಇವರು ಕೂಡಾ ಆಕೆಯ ಪಾತ್ರೆಗಳಿಗೆ ಉತ್ತರವನ್ನು ನೀಡುತ್ತಿದ್ದರು ಹೀಗಿರುವಾಗ ಒಮ್ಮೆ ಆಕೆ ಅವರನ್ನು ಆಸ್ಟ್ರೇಲಿಯಾಕ್ಕೆ ಬರುವಂತೆ ಕೇಳಿದಳು. ಆಗ ಇವರು ಮನೆಯವರಿಗೆ ತಿಳಿಯದಂತೆ ಮೂವತ್ತು ಸಾವಿರ ರೂಪಾಯಿ ಸಾಲ ಪಡೆದು ಪಾಸ್ ಪೋರ್ಟ್, ವೀಸಾ ಎಲ್ಲಾ ಸಿದ್ಧಪಡಿಸಿಕೊಂಡು ಮೆಲ್ಬೋರ್ನ್ ನಗರಕ್ಕೆ ಹೊರಟೇ ಬಿಟ್ಟರು. ಅಲ್ಲಿಗೆ ಹೋದಾಗ ಚಂದ್ರನ ಮೇಲೆ ಹೋದಷ್ಟೇ ಸಂತೋಷ ಪಟ್ಟಿದ್ದರಂತೆ. ಮೂರು ತಿಂಗಳ ಕಾಲ ಇಬ್ಬರೂ ಜೊತೆಯಾಗಿ ಕಾಲವನ್ನು ಕಳೆದಿದ್ದಾರೆ. ಮರಿನಾ ಇವರಿಗೆ ಇಂಗ್ಲಿಷ್ ಕಲಿಸಿಕೊಟ್ಟರೆ ಇವರು ಅವರಿಗೆ ರಾಜಸ್ಥಾನಿ ನೃತ್ಯ ಹೇಳಿಕೊಟ್ಟಿದ್ದಾರೆ.

ಹೀಗೆ ಮೂರು ತಿಂಗಳು ಕಳೆದ ಮೇಲೆ ಮರಿನಾ ತಾವು ಮದುವೆಯಾಗಿ ಆಸ್ಟ್ರೇಲಿಯಾದಲ್ಲೇ ನೆಲಸೋಣ ಎಂದು ಹೇಳಿದಾಗ ಆ ವ್ಯಕ್ತಿಗೆ ಅದು ಇಷ್ಟವಾಗದೆ, ತಾನು ತನ್ನ ತಾಯ್ನಾಡು ಭಾರತಕ್ಕೆ ವಾಪಸ್ ಬರಬೇಕೆಂಬ ಮನಸ್ಸಿನಿಂದ ತನ್ನ ನಿರ್ಧಾರವನ್ನು ಮರಿನಾರಿಗೆ ಹೇಳಿದಾಗ, ಮದುವೆ ಇಲ್ಲದೆ ಹಾಗೆ ಜೀವಿಸುವುದು ಸರಿಯಲ್ಲವೆಂದು ಇಬ್ಬರೂ ನಿರ್ಧರಿಸಿ ಪ್ರತ್ಯೇಕವಾಗಿದ್ದಾರೆ. ಆತ ಭಾರತಕ್ಕೆ ಮರಳಿ ಬಂದರು. ಬಂದ ಮೇಲೂ ಇಬ್ಬರ ನಡುವೆ ಸಂಪರ್ಕ ಇತ್ತು. ಆದರೆ ದಿನಕಳೆದಂತೆ ಅದು ಕಡಿಮೆಯಾಗತೊಡಗಿತು. ಮನೆಯವರ ಬಲವಂತಕ್ಕೆ ಬಿದ್ದು ಈತನೂ ಮದುವೆಯಾಗಬೇಕಾಯಿತು. ಮದುವೆಯಾದ ನಂತರ ಸಂಸಾರ ಹಾಗೂ ಮಕ್ಕಳು ಹೀಗೆ ಜವಾಬ್ದಾರಿಗಳಲ್ಲಿ ಕಳೆದು ಮರಿನಾ ವಿಷಯವನ್ನು ಮರೆತೇ ಬಿಟ್ಟರು.

ಹೀಗೆ ಐದು ದಶಕಗಳು ಕಳೆದ ಮೇಲೆ ಒಂದು ದಿನ ಮರಿನಾ ಕಡೆಯಿಂದ ಇವರಿಗೆ ಸಂದೇಶವೊಂದು ಬಂದಿದೆ. ಹೇಗಿದ್ದೀಯಾ ಗೆಳೆಯ ಎಂದು ಅವರು ಸಂದೇಶವನ್ನು ಕಳುಹಿಸಿದ್ದರಂತೆ. ಇದನ್ನು ನೋಡಿ 82 ವರ್ಷ ವಯಸ್ಸಿನ ಈ ವ್ಯಕ್ತಿಗೆ ಆಶ್ಚರ್ಯವಾಗಿದೆ. ಆನಂತರ ಇಬ್ಬರೂ ಮಾತನಾಡಿದ್ದಾರೆ. ಇವರು ಮರಿನಾ ರನ್ನು ಮದುವೆಯಾಗಿದೆಯಾ? ಎಂದು ಕೇಳಿದಾಗ ಮತ್ತೊಂದು ಶಾ ಕ್ ಕಾದಿತ್ತು. ಅದೇನೆಂದರೆ ಮರಿನಾ ತನ್ನ ಜೀವನದಲ್ಲಿ ಬೇರೆ ಯಾರನ್ನೂ ಊಸಿಸಿಕೊಳ್ಳಲು ಸಾಧ್ಯವಿಲ್ಲದೇ ಮದುವೆಯಾಗದೆ ಹಾಗೆ ಉಳಿದಿದ್ದಾರೆ ಎಂದು ತಿಳಿದಿದೆ. ಅಲ್ಲದೆ ಆಕೆ ಆದಷ್ಟು ಶೀಘ್ರದಲ್ಲೇ ತನ್ನ ಮೊದಲ ಪ್ರೇಮವನ್ನು ಭೇಟಿಮಾಡಲು ಭಾರತಕ್ಕೆ ಬರುತ್ತಿರುವುದಾಗಿ ತಿಳಿಸಿದ್ದಾರೆ. 82 ವರ್ಷದ ಮುದುಕನ ಈ ಪ್ರೇಮ ಕಥೆಯು ಸೋಶಿಯಲ್ ಮೀಡಿಯಾ ಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.