ಅಮೆರಿಕೆಯಲ್ಲಿ ‘ಅವನು’ ಸೈಂಟಿಸ್ಟ್ ಎಂದ ಕ್ಷಣವೇ ಮನಸು ಕೊಟ್ಟು ಕುಳಿತಳು! ಮದುವೆಯ ನಂತರ ಆತನ ಮೊಬೈಲ್ ತೆರೆದು ನೋಡುತ್ತಲೇ…
ದಿನಬೆಳಗಾದರೆ ಮದುವೆ ವಿಷಯದಲ್ಲಿ ಮೋಸ ಮಾಡಿದವರ ಬಗ್ಗೆ ಮತ್ತು ಮೋಸ ಹೋದವರ ಬಗ್ಗೆ ಅನೇಕ ಸುದ್ದಿಗಳು ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ.
ಇತ್ತೀಚಿಗಂತೂ ವಧು-ವರರನ್ನು ಶೋಧಿಸುವ ಕೆಲಸ ಮೊಬೈಲ್ ಆಪ್ ಗಳಿಂದಲೇ ಪ್ರಾರಂಭವಾಗಿ ಬಿಟ್ಟಿದೆ. ಮೊದಲು ನಾಲ್ಕು ಜನ ಹಿರಿಯರು ಕೂಡಿ ಕೂಲಂಕಶವಾಗಿ ವಿಚಾರಮಾಡಿ ಮದುವೆಯ ಹುಡುಗ-ಹುಡುಗಿಯನ್ನು ಶೋಧಿಸುತ್ತಿದ್ದರು. ಆದರೆ ಈಗ ಶಿಕ್ಷಣದ ಜೊತೆಗೆ ತಂತ್ರಜ್ಞಾನ ಹೆಚ್ಚಾದಂತೆ ಈಗಿನ ಹುಡುಗ ಹುಡುಗಿಯರು ತಮ್ಮ ಬಾಳ ಸಂಗಾತಿಯನ್ನು ತಾವೇ ಹುಡುಕಿ ಕೊಳ್ಳುತ್ತಿದ್ದಾರೆ. ಹೀಗೆ ಮಾಡಲು ಹೋಗಿ ಅನೇಕ ಹುಡುಗ ಹುಡುಗಿಯರು ಮೋಸ ಹೋಗಿರುವ ಬಗ್ಗೆ ಸಾಕಷ್ಟು ಕೇಳಿದ್ದೇವೆ.
ಇಲ್ಲಿ ಉಲ್ಲೇಖಿಸಲಾಗಿರುವ ಘಟನೆಯು ಸಹಿತ ಇದೇ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಪೊಲೀಸರು ನೀಡಿದ ವರದಿಯ ಪ್ರಕಾರ ಹೈದರಾಬಾದಿನ ಆರೋಪಿ ಶೇಖ್ ಶುಭಾನ್ ಶೇಖ್ ಷರೀಫ್ ಅಲಿಯಾಸ್ ಶೇಖ್ ಶಹೆಂಶಹಾ ಈತ ಜೀವನಸಾಥಿ ಸೈಟ್ ನಲ್ಲಿ ಹುಡುಗಿಯೊಬ್ಬಳ ಪರಿಚಯವನ್ನು ಮಾಡಿಕೊಂಡು ಆಕೆಗೆ ತಾನು ಅವಿವಾಹಿತನಾಗಿದ್ದೇನೆಂದು ಹೇಳಿದ್ದಾನೆ. ಶಿಕ್ಷಣ ಬಿ ಟೆಕ್ ಮಾಡಿ ಅಮೆರಿಕೆಯಲ್ಲಿ ಶಾಸ್ತ್ರಜ್ಞನಾಗಿ ಕೆಲಸ ಮಾಡಿದ್ದೇನೆ ಎಂದು ನಂಬಿಸಿ ಮದುವೆಯಾಗಿದ್ದಾನೆ. ದುರ್ಭಾಗ್ಯವೆಂದರೆ ಹುಡುಗಿ ಮತ್ತು ಹುಡುಗಿಯ ಮನೆಯವರು ಆತ ಹೇಳಿದ ಮಾತುಗಳನ್ನು ಸಂಪೂರ್ಣವಾಗಿ ನಂಬಿ ಮದುವೆ ಮಾಡಿಕೊಟ್ಟಿದ್ದಾರೆ.
ಮದುವೆಯಾದ ನಂತರ ಆತನ ನಡೆದುಕೊಳ್ಳುವ ರೀತಿಯಲ್ಲಿ ಕಂಡು ಬಂದ ಬದಲಾವಣೆಯಿಂದ ಹೆಂಡತಿಗೆ ಗಂಡನ ಮೇಲೆ ಸಂಶಯ ಮೂಡಲಾರಂಭಿಸಿತು. ಹೀಗಿರುವಾಗ ಒಂದು ದಿನ ಆತನ ಮೊಬೈಲ್ ಕೈಗೆ ಸಿಕ್ಕಾಗ ಅದರಲ್ಲಿರುವ ಆಕ್ಷೇಪಾರ್ಹ ಹುಡುಗಿಯರ ಫೋಟೋಗಳನ್ನು ನೋಡಿ ಕಾಲ್ಕೆಳಗಿನ ಭೂಮಿಯೇ ಸರಿದಂತಾಯಿತು. ತನ್ನ ಗಂಡನ ಇತರ ತರುಣಿಯರ ಜೊತೆಗೆ ರಾಸಲೀಲೆಯ ವಿಡಿಯೋಗಳನ್ನು ನೋಡಿ ಬೆಚ್ಚಿ ಬಿದ್ದಳು ಹೆಂಡತಿ. ಇದೆಲ್ಲದರ ಬಗ್ಗೆ ಗಂಡನನ್ನು ವಿಚಾರಿಸಲಾಗಿ ಆತ ಉದ್ಧಟತನದ ಉತ್ತರಗಳನ್ನು ನೀಡಿದ್ದಾನೆ. ಆಮೇಲೆ ಇಬ್ಬರಲ್ಲಿ ಜಗಳವಾಗಿ ಹೆಂಡತಿ ತವರೂರಾದ ಅಮರಾವತಿಗೆ ಬಂದಿದ್ದಾಳೆ.
ಅಮರಾವತಿಗೆ ಬಂದ ಹೆಂಡತಿ ಸುಮ್ಮನೆ ಕೊಡದೆ ಗಂಡನ ವಿರುದ್ಧ ಪೊಲೀಸ್ ಸ್ಟೇಷನ್ ನಲ್ಲಿ ತಕರಾರನ್ನು ದಾಖಲಿಸಿದ್ದಾರೆ. ಈ ಕೇಸಿನ ತನಿಖೆ ನಡೆಸಿದ ಪೊಲೀಸರಿಗೆ ಶೇಖ್ ಶುಭಾನ್ ಬಗ್ಗೆ ಅನೇಕ ಮಹತ್ವದ ಮೋಸದಾಟಗಳ ಕಂತೆಯೇ ಹೊರಬಿದ್ದಿದೆ. ಈತ ಇದಕ್ಕೂ ಮೊದಲು ಬೆಂಗಳೂರು, ಹೈದರಾಬಾದ್, ತಮಿಳುನಾಡು, ಕೊಲ್ಕತ್ತಾ ಹಾಗೂ ಅಲಿಗಢ್ ದಲ್ಲಿಯ ಒಟ್ಟು 7 ಜನ ಹುಡುಗಿಯರನ್ನು ಮೋಸ ಮಾಡಿ ತನ್ನ ಬಲೆಗೆ ಹಾಕಿಕೊಂಡಿದ್ದಾನೆ. ಇದರ ಹೊರತಾಗಿ ಈತನ ವಿರುದ್ಧ ಹೈದರಾಬಾದಿನಲ್ಲಿ ಮೊಬೈಲ್ ಚೀಟಿಂಗ್ ಕಾರಣದ ಮೇಲೆ 7 ಕೇಸುಗಳು ದಾಖಲಾಗಿವೆ.

ಉನ್ನತ ವರ್ಗದ ಯುವತಿಗೆ ವಂಚಿಸಿ ಮದುವೆಯಾಗಿ ಆನಂತರ ಆಕೆಯ ಲೈಂಗಿಕ ಶೋಷಣೆ ಮಾಡಿದ ಕಾರಣದ ಮೇಲೆ ಈತನ ವಿರುದ್ಧ ಕೇಸು ದಾಖಲಿಸಿದ ಆತನನ್ನು ಅರೆಸ್ಟ್ ಸಹ ಮಾಡಲಾಗಿದೆ.
ಸದ್ಯ ಆತನಿಗೆ ಪೊಲೀಸ್ ಕೊಠಡಿಗೆ ಒಪ್ಪಿಸಲಾಗಿದೆ, ಎಂದು ಪೊಲೀಸ್ ನಿರೀಕ್ಷಕರಾದ ಮನೀಶ್ ಠಾಕರೆಯವರು ಹೇಳಿದ್ದಾರೆ.