ಅಮೆರಿಕೆಯ ಮಿನಿಸೋಟಾ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ & ಸಂಶೋಧನೆಯ ದಂಗು ಗೊಳಿಸುವ ಸಮೀಕ್ಷೆ ಬಹಿರಂಗ;
Coronavirus: ಒಂದು ತೀರ ಹೊಸ ರಿಸರ್ಚ್ ಪ್ರಕಾರ ಕೊರೊನಾ ಇಷ್ಟು ಬೇಗನೆ ಜಗತ್ತಿನಿಂದ ತೊಲಗುವ ಲಕ್ಷಣಗಳು ಇಲ್ಲವಂತೆ. ಇನ್ನು ಎರಡು ವರ್ಷಗಳವರೆಗೆ ಜನರ ಜೀವ ಹಿಂಡುತ್ತದೆಯಂತೆ.
ದಿವ್ಯ ಅಗರವಾಲ್ ದೆಹಲಿ: ಕೊರೊನಾದ ಜೊತೆ ಹೋರಾಡುತ್ತ ನಾಲ್ಕು ತಿಂಗಳುಗಳು ಕಳೆದವು. ಎಲ್ಲಿ ಕೊರೊನಾ ಹುಟ್ಟಿತು ಅಲ್ಲಿ ಅಂದ್ರೆ ಚಾಯನಾದಲ್ಲಿ ಜೀವನ ಮತ್ತೆ ಪೂರ್ವ ಸ್ಥಿತಿಗೆ ಮರುಕಳಿಸಲಾರಂಭಿಸಿದೆ. ಆದರೆ ಜಗತ್ತಿನ ಬೇರೆ ಕಡೆಗಳಲ್ಲಿ ಕೊರೊನಾ ತನ್ನ ಮೃತ್ಯುತಾಂಡವ ನಡೆಸಿದೆ. ಜಗತ್ತಿನಲ್ಲಿ ಇಲ್ಲಿಯವರೆಗೆ ಕೊರೊನಾ ಸಂಕ್ರಮಿತರ ಸಂಖ್ಯೆ 35 ಲಕ್ಷದವರೆಗೆ ಸಮೀಪಿಸಿದೆ, ಹಾಗೂ ಸಾವು 2 ಲಕ್ಷ 33 ಸಾವಿರ ಸಂಭವಿಸಿವೆ. ಹೊಸ ಸಮೀಕ್ಷೆಯ ಪ್ರಕಾರ ಕೊರೊನಾ ಜಗತ್ತಿನಿಂದ ನಾಶವಾಗಲು ಇನ್ನು ಎರಡು ವರ್ಷಗಳಾದರೂ ಬೇಕು ಎನ್ನುವ ವಿಷಯ ಹೊರಬಿದ್ದಿದೆ. ಅಲ್ಲಿಯವರೆಗೆ ಸಾವುನೋವಿನ ಸಂಖ್ಯೆಯೂ ಏರುತ್ತಲೇ ಇರುತ್ತದೆ.

ಮಿನಿಸೋಟಾ ವಿಶ್ವವಿದ್ಯಾಲದಲ್ಲಿಯ ಸಾಂಕ್ರಾಮಿಕ ರೋಗ ಸಂಶೋಧನೆ ಕೇಂದ್ರದ ನಿರ್ದೇಶಕರಾದ ಮೈಕಲ್ ಓಸ್ಟರ್ ಹೋಮ್ ಹೇಳುವ ಪ್ರಕಾರ ಜಗತ್ತಿನ 60 ರಿಂದ 70 ಪ್ರತಿಶತ ಜನರಿಗೆ ಸೋಂಕು ತಗಲುವವರೆಗೆ ಇದರ ಆತಂಕ ಬೆಳೆಯುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.
ಈ ಸೋಂಕು ಚಾಯನಾ ಅಮೆರಿಕೆ ಸಹಿತ ಜಗತ್ತಿನ ಅನೇಕ ದೇಶಗಳಲ್ಲಿ ತನ್ನ ವಿದ್ವಂಸದ ಆಟ ಮುಂದೆ ನಡೆಸಿದೆ. ಇದು ಯಾವ ಹವಾಮಾನದಲ್ಲಿಯೂ ಜೀವಂತ ಇರುತ್ತದೆ. ಬಿಸಿಲಿನ ಬೇಗೆ ಅಥವಾ ಚಳಿ ಇದಕ್ಕೆ ಯಾವ ಪರಿಣಾಮ ಮಾಡದು. ಈ ಸಮೀಕ್ಷೆ ಮಾಡಿದ ವಿದ್ಯಾಲಯ ಯಾವುದೇ ಕಾಂಜಿ ಪಿಂಜಿ ವಿಶ್ವ ವಿದ್ಯಾಲಯವಲ್ಲ. ಇದು ಅಮೆರಿಕೆಯ ಮಿನಿಸೋಟಾ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ಸಂಶೋಧನೆ ಕೇಂದ್ರದವರು ಹೇಳಿದ್ದಾರೆ.

ಈ ಕೋವಿಡ್-19 ವೈರಸ್ ಹೊಸದಾದ ವೈರಸ್ ಇದ್ದು ಇದರೊಂದಿಗೆ ಹೋರಾಡುವ ರೋಗ ಪ್ರತಿಕಾರಕ ಶಕ್ತಿ ಮಾನವನಲ್ಲಿಲ್ಲ. ಇದೆ ಕಾರಣದಿಂದ ಸಂಪೂರ್ಣ ಜಗತ್ತಿಗೆ ಅಲರ್ಟ್ ಮಾಡಲಾಗಿದೆ. ಭವಿಷ್ಯದಲ್ಲಿ ಜನ ತಮ್ಮ ಕಾಳಜಿಯ ಜೊತೆಜೊತೆಗೆ ರೋಗ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ.