ಅಮ್ಮ ಫೈರಿಂಗ್ ಶುರು ಆಗಿದೆ! ಫೋನ್ ಇಡ್ತೀನಿ, ಮತ್ತೆ ಕಾಲ್ ಮಾಡ್ತೀನಿ! ನಿನ್ನೆ ಕಾಶ್ಮೀರದಲ್ಲಿ ಹುತಾತ್ಮರಾದ ಶಂಕರ್ ಅವರ ಕೊನೆಯ ಮಾತುಗಳು

ಅಮ್ಮ ಫೈರಿಂಗ್ ಶುರು ಆಗಿದೆ! ಫೋನ್ ಇಡ್ತೀನಿ, ಮತ್ತೆ ಕಾಲ್ ಮಾಡ್ತೀನಿ! ನಿನ್ನೆ ಕಾಶ್ಮೀರದಲ್ಲಿ ಹುತಾತ್ಮರಾದ ಶಂಕರ್ ಅವರ ಕೊನೆಯ ಮಾತುಗಳು. ದೇಶದ ರಕ್ಷಣೆಗಾಗಿ ತನ್ನ ಪ್ರಾಣವೇ ಪಣಕ್ಕಿಟ್ಟ ಯೋಧ ಶಂಕರ್ ಸಿಂಹ ಮೆಹ್ರಾ ಅವರ ತಮ್ಮ ತಾಯಿಯೊಂದಿಗಿನ ಕೊನೆಯ ಮಾತುಗಳಾಗಿವೆ.

ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನದ ಗೋಲಿಬಾರ್ ನಲ್ಲಿ ಗಂಗೋಲಿಹಾಟ್ ನಾಲಿ ಗ್ರಾಮದ ನಾಯಕ ಶಂಕರ್ ಸಿಂಹ ಮಹಾರಾ ಅವರ ವೀರ ಮರಣದ ನಂತರ ಆ ಕ್ಷೇತ್ರ ದುಃಖದಲ್ಲಿ ಮುಳುಗಿದೆ. ವೀರ್ ಮರಣದ ಸುದ್ಧಿಯನ್ನು ಕೇಳಿದ ಕೂಡಲೇ ತಾಯಿ ಮತ್ತು ಅವರ ಪತ್ನಿ ಸ್ಥಳದಲ್ಲಿಯೇ ಮೂರ್ಛೆ ಹೋದರು. ಸೈನಿಕನ ತಂದೆ ಸಹ ಮಗನ ದುಃಖಿನಲ್ಲಿ ಕಳೆದುಹೋಗಿದ್ದಾರೆ, ಅಲ್ಲದೆ ಏನು ಅರಿಯದ ಐದು ವರ್ಷದ ಮಗು ತಂದೆಯ ನೆನಪಿನಲ್ಲಿ ಅಳುತ್ತಲಿದೆ ತಂದೆಯಗೋಸ್ಕರ ದಾರಿ ಕಾಯ್ತಾ ಇದೆ ಪಾಪ ಮಗುವಿಗೇನು ಗೊತ್ತು ತನ್ನ ತಂದೆ ದೇಶದ ರಕ್ಷಣೆಯ ಕಾರ್ಯದಲ್ಲಿ ತಮ್ಮ ಜೀವನ ದೇಶಕ್ಕೆ ಅರ್ಪಿಸಿದ್ದಾರೆ ಎಂಬುದು. ನಿಜವಾಗಿಯೂ ನಾವು ಇಂದು ನಮ್ಮ ಮನೆಯಲ್ಲಿ ಸುರಕ್ಷಿತವಾಗಿರಲು ಕಾರಣ ನಮ್ಮ ದೇಶದ ಹೆಮ್ಮೆಯ ಸೈನಿಕರೆ. ವೀರಯೋಧನ ಕುಟುಂಬ ದುಃಖದಿಂದ ಹೊರಬರಲು ದೇವರು ಅವರಿಗೆ ಶಕ್ತಿ ನೀಡಲಿ ಎಂದು ಹಾರೈಸೋಣ.