ಅಯ್ಯೋ ಪಾಪ! ಪೈಪ್ ಸುತ್ತುವಾಗ ಈತನ ಜೊತೆ ನಡೆದ ಪ್ರಸಂಗ ನಿಜಕ್ಕೂ ಘೋರವೇ ಎನ್ನಬಹುದು! ಏನಾಗಿದೆ ನೋಡಿ ಈ ವಿಡಿಯೋದಲ್ಲಿ.
ಅದೃಷ್ಟ ಚೆನ್ನಾಗಿರದಿದ್ದರೆ ಕೈಯಲ್ಲಿಯ ಹಗ್ಗವೂ ಸಹ ಹಾವಾಗಿ ಕಾಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಸ್ವಲ್ಪ ಮಟ್ಟಿಗೆ ಇಲ್ಲಿ ನೋಡುವ ವಿಡಿಯೋದಲ್ಲಿಯ ವ್ಯಕ್ತಿಯ ಜೊತೆಗೂ ಹಾಗೆ ಆಗಿದೆ ಎನ್ನಬಹುದು.
ಇನ್ಸ್ಟಾಗ್ರಾಮ್ ನಲ್ಲಿ hepgul5 ಹೆಸರಿನ ಅಕೌಂಟ್ ನಿಂದ ಶೇರ್ ಆದ ಈ ವಿಡಿಯೋದಲ್ಲಿ ತುಂಬಾ ತಮಾಷೆಯ ದೃಶ್ಯ ಒಂದು ಅಡಗಿದೆ. ವಿಡಿಯೋದಲ್ಲಿ ಕಾಣುವ ಹಾಗೆ ವ್ಯಕ್ತಿಯು ತನ್ನಷ್ಟಕ್ಕೆ ತಾನು ಕೆಲಸದಲ್ಲಿ ಮಗ್ನನಾಗಿ ನೀರಿನ ಪೈಪ್ ಸರಿಯಾಗಿ ಸುರುಳಿ ಮಾಡುತ್ತಿದ್ದಾನೆ. ಇದೇ ಸಂದರ್ಭದಲ್ಲಿ ಆತನ ಜೊತೆಗೆ ಒಂದು ಇನ್ಸಿಡೆಂಟ್ ನಡೆಯುತ್ತದೆ. ಆಗ ಪ್ರಸ್ತುತ ವ್ಯಕ್ತಿಗೆ ಏನೋ ಭಾಸವಾದಂತೆ ಆಗಿ ಇದ್ದಕ್ಕಿಂದ್ದಂತೆ ಗಾಬರಿಯಾಗುತ್ತಾನೆ. ಮತ್ತು ತನ್ನಷ್ಟಕ್ಕೆ ತಾನೇ ಒಮ್ಮೆಲೆ ತಿರುಗಿ ನೆಲದ ಮೇಲೆ ಕುಕ್ಕರಿಸಿ ಬೀಳುತ್ತಾನೆ. ತಕ್ಷಣವೇ ತನ್ನಷ್ಟಕ್ಕೆ ತಾನೇ ಮತ್ತೆ ನಗಲು ಶುರು ಮಾಡುತ್ತಾನೆ.
ಆತನು ನೀರಿನ ಪೈಪ್ ಸುತ್ತುವಾಗ ಅದರ ಒಂದು ತುದಿ ಆತನ ಹಿಂದಿನಿಂದ ಬೆನ್ನಿನ ಮೇಲೆ ಏರುತ್ತಿರುವಾಗ ವ್ಯಕ್ತಿಗೆ ಅದು ಬಹುಶಃ ಹಾವೊಂದು ತನ್ನ ಮೈಮೇಲೆ ಏರುತ್ತಿದೆಯೇನೋ ಎಂಬಂತೆ ಭಾಸವಾಗಿ ಅದಕ್ಕೆ ಹೊಡೆಯಲು ಮುಂದಾಗುತ್ತಾನೆ. ಆಗ ಆತನ ಬ್ಯಾಲೆನ್ಸ್ ತಪ್ಪಿ ನೆಲದ ಮೇಲೆ ದಪ್ಪನೆ ಬೀಳುತ್ತಾನೆ. ನಂತರ ತನ್ನ ಅವಾಂತರವನ್ನು ತಾನೇ ನೋಡಿ ತಿಳಿದು ನಗುತ್ತಾನೆ.
ನೋಡಿ ಈ ತಮಾಷೆಯ ವೈರಲ್ ವಿಡಿಯೋ…
View this post on Instagram