ಅಯ್ಯೋ! ರೊಟ್ಟಿಯನ್ನು ಹೀಗೆ ತಯಾರಿಸುವುದೇ? ಹೋಟೆಲ್ ಗೆ ಹೋಗುವವರು ಜೋಕೆ! ನೋಡಿ ಈ ವೈರಲ್ ವಿಡಿಯೋ ದೃಶ್ಯ…

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ನೋಡಲು ಸಹ ಹೇಸಿಗೆ ಹುಟ್ಟುವ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಎಲ್ಲರೂ ಊಟ ಮಾಡುವ ಪದಾರ್ಥದೊಂದಿಗೆ ಈ ರೀತಿ ಅಸಭ್ಯವಾಗಿ ವರ್ತಿಸುವುದನ್ನು ನೋಡಿದರೆ ಕೆಲವರು ಹೊರಗೆ ಊಟ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ.

ಈಗ ಇದೇ ರೀತಿಯ ಒಂದು ವಿಡಿಯೋ ಪಂಜಾಬ್ ನ ಪಟಿಯಾಲಾದಿಂದ ವರದಿಯಾಗಿದೆ. ಈ ವಿಡಿಯೋವನ್ನು ಪಟಿಯಾಲಾ ಸಮೀಪದ ಶೇರನವಾಲಾ ಹೆಸರಿನ ಗೆಟ್ ಹತ್ತಿರ ಇರುವ ಧಾಬಾದಿಂದ ಸೆರೆ ಹಿಡಿಯಲಾಗಿದೆ. ವಿಡಿಯೋ ನೋಡುವಾಗ ಬಹುಶಃ ಈ ಕೆಲಸಗಾರನಿಗೂ ತನ್ನ ವಿಡಿಯೋ ಮಾಡಲಾಗುತ್ತಿದೆ ಎಂಬಂತೆ ಭಾಸವಾಗುತ್ತದೆ.

ಯಾವಾಗ ಈ ವಿಡಿಯೋ ವೈರಲ್ ಆಯಿತು ಆಗ ದಾಭಾ ಮಾಲೀಕ ಇದು ಆತನ ಸ್ಟೈಲ್ ಇದೆ ಎಂದು ವಾದ ಮಾಡುತ್ತಿದ್ದ.

ಆದರೆ ಆರೋಗ್ಯ ಇಲಾಖೆಯವರು ಬಂದು ಕ್ರಮ ಕೈಗೊಳ್ಳುವ ಮೊದಲೇ ಹೋಟೆಲ್ ಮಾಲೀಕ ದಾಭಾ ತೊರೆದು ಓಡಿ ಹೋಗಿದ್ದ. ಪೊಲೀಸರು ಮಾತ್ರ ತುಂಬಾ ಗಾಂಭೀರ್ಯದಿಂದ ಇದರ ಕಡೆಗೆ ಗಮನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ವಿಡಿಯೋದಲ್ಲಿ ತಂದೂರಿ ರೋಟಿ ತಯಾರಿಸುವಾಗ ಕೆಲಸಗಾರ ಅದರಲ್ಲಿ ಉಗುಳುತ್ತಿರುವದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಆ ಸಮಯದಲ್ಲಿ ಕೆಲವು ಗ್ರಾಹಕರು ಸಹ ಉಪಸ್ಥಿತರಿದ್ದರು. ಆದರೂ ಸಹ ಆತ ಯಾವುದನ್ನು ಮತ್ತು ಯಾರನ್ನು ಲೆಕ್ಕಿಸದೆ ತನ್ನ ಈ ಹೇಸಿಗೆ ತರುವ ಕೃತ್ಯ ಮಂದುವರೆಸಿದ್ದ.

ಪ್ರಸ್ತುತ ವಿಡಿಯೋ ವೈರಲ್ ಆದ ನಂತರ ಈ ಕೃತ್ಯ ಪಟಿಯಾಲಾ ದಾಭಾದಲ್ಲಿಯದು ಎಂಬುದು ತಿಳಿದ ನಂತರ ಕೋಪಗೊಂಡ ಲೋಕಲ್ ನಿವಾಸಿಗಳು ಆ ದಾಭಾ ಮಾಲೀಕನಿಗೆ ಪಾಠ ಕಲಿಸಲು ಹೋಗಿದ್ದಾರೆ. ಮೊದಮೊದಲು ದಾಭಾ ಮಾಲೀಕ ಇವರ ಮಾತಿಗೆ ಬೆಲೆ ನೀಡಿಲ್ಲ. ಅದು ಆತನ ಸ್ಟೈಲ್ ಎಂದು ವಾದ ಮಾಡುತ್ತಿದ್ದ. ಪ್ರಕರಣ ಹೆಚ್ಚು ವಿಕೋಪಕ್ಕೆ ಹೋಗುತ್ತಿದ್ದುದನ್ನು ಕಂಡು ಕೆಲಸಗಾರನ ಮೇಲೆ ಯೋಗ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದ್ದಾನೆ.

ವೀಡಿಯೋ ನೋಡಿ

ನಂತರ ಅಲ್ಲಿಯ ಆರೋಗ್ಯ ಅಧಿಕಾರಿಯು ಕಡೆಗೆ ಈ ವಿಡಿಯೋ ಕಳುಹಿಸಿದಾಗ ಈ ಪ್ರಕರಣದ ತನಿಖೆಗೆ ವಿಶೇಷ ತಂಡವೊಂದನ್ನು ರಚಿಸಿ ಕ್ರಮ ಕೈಗೊಳ್ಳಲು ಕಳುಹಿಸಿದಾಗ ದಾಭಾ ಮಾಲೀಕ ಅಲ್ಲಿಂದ ಕಾಲ್ಕಿತ್ತಿದ್ದ. ಪೊಲೀಸರು ಮಾಲೀಕನ ಶೋಧ ನಡೆಸಿದ್ದಾರೆ.