ಆಂಗ್ರಿ ಬರ್ಡ್ಸ್ ಕಾಗೆಗಳ ಗುಂಪು ಮಾಡಿತು ಕೋಬ್ರಾ ಮೇಲೆ ಅಟ್ಯಾಕ್! ಜೀವಕ್ಕಾಗಿ ಮೊರೆ ಇಟ್ಟ ಕಾಳಿಂಗ…! ವಿಡಿಯೋ ವೈರಲ್.
ಇಲ್ಲಿಯ ವರೆಗೆ ಹಾವು-ಮುಂಗುಸಿ ವೈರತ್ವ ಬಗ್ಗೆ ಕೇಳಿದ್ದೇವೆ ಮತ್ತು ಅವುಗಳ ಜಗಳವನ್ನು ನೋಡಿದ್ದೇವೆ. ಆದರೆ ಕಾಗೆಗಳು ನಾಗರ ಹಾವಿನ ಜೊತೆಗೆ ಜಗಳವಾಡಿದ ದೃಶ್ಯ ನೋಡಿರಲಿಲ್ಲ. ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಕಾಗೆ ಮತ್ತು ನಾಗರ ಹಾವಿನ ಜಗಳದ ವಿಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಕಂಡು ಬರುವ ಹಾಗೆ ಹಾವು ಕಾಗೆಗಳ ಮಧ್ಯೆದಲ್ಲಿ ಸಿಕ್ಕು ಹಾವು ಒದ್ದಾಡುತ್ತಿದೆ. ಇಲ್ಲಿ ಹಾವು ಕಾಗೆಗಳಿಗೆ ತನ್ನ ಪ್ರಾಣಬಿಕ್ಷೆ ಬೇಡುವಂತಿದೆ. ಕಾಗೆಗಳ ಗುಂಪು ನಾಗರ ಹಾವಿನ ಮೇಲೆ ಜೋರದಾರ್ ಅಟ್ಯಾಕ್ ಮಾಡಿವೆ. ಈ ಅಟ್ಯಾಕ್ ಯಾಕೆ ಮಾಡುತ್ತಿವೆ ಎಂಬುದು ತಿಳಿದು ಬರುತ್ತಿಲ್ಲ. ಕಾಗೆಗಳು ಒಂದರ ನಂತರ ಒಂದು ಹಾವಿನ ತಲೆಯ ಮೇಲೆ ಕುಕ್ಕುತ್ತ ಅಟ್ಯಾಕ್ ಮಾಡುತ್ತಿವೆ. ನಾಗರಹಾವು ಮಾತ್ರ ಭಾರಿ ಸಂಕಟದಲ್ಲಿ ಸಿಕ್ಕಂತೆ ಕಂಡು ಬರುತ್ತಿದೆ. 1 ನಿಮಿಷ 49 ಸೆಕೆಂಡಿನ ಈ ವಿಡಿಯೋದಲ್ಲಿ ನಾಗರಹಾವಿನ ಅವಸ್ಥೆ ಬದುಕಿನ ಭಿಕ್ಷೆ ಬೇಡುವಂತಿದೆ. ಕಾಗೆಗಳು ಮಾತ್ರ ನಾಗರಹಾವಿಗೆ ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಕುಟುಕುವ ಕೆಲಸ ಮಾಡಿಯೇ ಮಾಡುತ್ತಿವೆ.
ವಿಡಿಯೋ ನೋಡಿ
ಪ್ರಸ್ತುತ ಈ ವೀಡಿಯೋವನ್ನು you tube ನಲ್ಲಿ ‘ಲೇಟೆಸ್ಟ್ ಸೈಟಿಂಗ್ಸ್’ ಹೆಸರಿನ ಚಾನೆಲ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಬರೀ 12 ದಿನಗಳಲ್ಲಿ 1.3 ಮಿಲಿಯನ್ ಜನರು ವೀಕ್ಷಿಸಿದ್ದಾರೆ.