ಆಂಧ್ರ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಮಾಯವಾಗುತ್ತಿವೆ ಕತ್ತೆಗಳು; ಇದರ ಹಿಂದಿನ ರಹಸ್ಯ ಈಗ ಬಯಲು!
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಕಾಲುವೆಯ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕತ್ತೆಗಳ ರ ಕ್ತ ಮತ್ತು ಅವಶೇಷಗಳೇ ಎಲ್ಲೆಲ್ಲೂ ತುಂಬಿ ಹೋಗಿದೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಕತ್ತೆಗಳನ್ನು ಕುರಿ ಮೇಕೆಗಳ ಹಾಗೆ ಕ ತ್ತ ರಿಸಲಾಗುತ್ತಿದೆ. ವಿಚಿತ್ರ ಏನೆಂದರೆ ಆಂಧ್ರಪ್ರದೇಶದಲ್ಲಿ ಕತ್ತೆಗಳ ಸಂಖ್ಯೆ ಕಡಿಮೆಯಾಗಿದ್ದು, ಬೇರೆ ಬೇರೆ ರಾಜ್ಯಗಳಿಂದ ಕತ್ತೆ ಗಳನ್ನು ಖರೀದಿ ಮಾಡಿ ತಂದು ಇಲ್ಲಿ ದೊಡ್ಡ ಮಟ್ಟದಲ್ಲಿ ಆಂಧ್ರಪ್ರದೇಶದ ಬೇರೆ ಬೇರೆ ಜಿಲ್ಲೆಗಳಲ್ಲಿ ನಿ ರ್ದಾ ಕ್ಷಿ ಣ್ಯವಾಗಿ ಅವುಗಳನ್ನು ಕ ತ್ತ ರಿ ಸಲಾಗುತ್ತಿದೆ. ಭಾರತದಲ್ಲಿ ಅಳಿದು ಹೋಗುತ್ತಿರುವ ಪ್ರಾಣಿಗಳ ಪಟ್ಟಿಯಲ್ಲಿನ ಕತ್ತೆಗಳ ಹೆಸರು ಕೂಡಾ ದಾಖಲಾಗಿದೆ. ಅಲ್ಲದೇ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಪ್ರಕಾರ ಭಾರತದಲ್ಲಿ ಕತ್ತೆ ಆಹಾರದ ಪ್ರಾಣಿಗಳ ಪಟ್ಟೆಯಲ್ಲಿ ಇಲ್ಲ. ಆದ್ದರಿಂದ ಅವುಗಳನ್ನು ಕೊ ಲ್ಲು ವುದು ಕಾನೂನು ಬಾಹಿರವಾಗಿದೆ.
ಆಂಧ್ರ ಪ್ರದೇಶ ದಲ್ಲಿ ಕತ್ತೆಗಳನ್ನು ಕೊಂ ದ ನಂತರ ಅವುಗಳ ಅವಶೇಷಗಳನ್ನು ಕಾಲುವೆಗಳಿಗೆ ಎಸೆಯಲಾಗುತ್ತಿದೆ. ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ಅ ಪಾ ಯ ಎನ್ನಲಾಗಿದೆ. ಕತ್ತೆಯ ಮಾಂಸವನ್ನು ಒಂದು ಕೆಜಿಗೆ ಸುಮಾರು 600 ರೂಪಾಯಿಗೆ ಮಾರಾಟ ಮಾಡುತ್ತಿದ್ದು, ಮಾಂ ಸ ಮಾರಾಟಗಾರರು ಕತ್ತೆಗಳನ್ನು 15 ರಿಂದ 20 ಸಾವಿರ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಇನ್ನು ಆಂಧ್ರಪ್ರದೇಶದಲ್ಲಿ ಕತ್ತೆಗಳ ಮಾಂ ಸಕ್ಕೆ ಹೀಗೆ ಬೇಡಿಕೆ ಹೆಚ್ಚಾಗಿರುವ ಕಾರಣವಾದರೂ ಏನು? ಎನ್ನುವ ವಿಷಯಕ್ಕೆ ಬರುವುದಾದರೆ, ವರದಿಗಳ ಪ್ರಕಾರ ಕತ್ತೆಯ ಮಾಂಸವು ಅನೇಕ ಆರೋಗ್ಯ ಸ ಮ ಸ್ಯೆಗಳಿಗೆ ಪರಿಹಾರ ಎನ್ನುವ ನಂಬಿಕೆ ಹರಡಿದೆ.
ಸ ಮ ಸ್ಯೆಗಳಿಗೆ ಮಾತ್ರವೇ ಅಲ್ಲದೇ ಇದು ದೇಹದಲ್ಲಿ ಲೈಂ ಗಿ ಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ ಎಂದು ಕೂಡಾ ನಂಬಲಾಗಿದ್ದು ಅದೇ ಕಾರಣದಿಂದಾಗಿಯೇ ಪಶ್ಚಿಮ ಗೋದಾವರಿ ಪ್ರದೇಶದಲ್ಲಿ ಮಾತ್ರವೇ ಅಲ್ಲದೇ ಆಂಧ್ರಪ್ರದೇಶದ ಬೇರೆ ಬೇರೆ ಜಿಲ್ಲೆಗಳಲ್ಲಿ ಅಂದರೆ ಕಷ್ಣಂ, ಪ್ರಕಾಶಂ ಹಾಗೂ ಗುಂಟೂರು ಜಿಲ್ಲೆಗಳಲ್ಲಿ ಕೂಡಾ ಕತ್ತೆಗಳನ್ನು ಕೊ ಲ್ಲು ವುದು ಹೆಚ್ಚಾಗಿದೆ. ಕತ್ತೆಗಳ ಮಾಂಸ ಸೇವನೆಯು ಈ ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅನೇಕ ಪ್ರಾಣಿ ರಕ್ಷಣಾ ಕಾರ್ಯಕರ್ತರು ಕತ್ತೆಗಳ ಅಕ್ರಮ ಸಾಗಣೆ ಬಗ್ಗೆ ದೂರನ್ನು ದಾಖಲು ಮಾಡಿದ್ದಾರೆ. ಪ್ರಾಣಿ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಗೋಪಾಲ್ ಆರ್ ಸುರಬ್ತಲಾ ಅವರು ಮಾದ್ಯಮವೊಂದಕ್ಕೆ ಈ ವಿಷಯವನ್ನು ತಿಳಿಸಿದ್ದಾರೆ.
ಗೋಪಾಲ್ ಅವರು ಕತ್ತೆಗಳ ಅಸ್ತಿತ್ವಕ್ಕೆ ದೊಡ್ಡ ಆ ಪ ತ್ತು ಎದುರಾಗಿದೆ ಎಂದು ಕೂಡಾ ಈ ವೇಳೆ ತಿಳಿಸಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌ ರ್ಯವನ್ನು ತಡೆಗಟ್ಟುವ ಕಾಯ್ದೆ 1960 ರ ಪ್ರಕಾರ ಈ ರೀತಿ ಕತ್ತೆಗಳನ್ನು ಕೊ ಲ್ಲು ವುದು ಅ ಕ್ರ ಮ ವಾಗಿದೆ. ಇದು
ಇದು ಸ್ಥಳೀಯ ಪುರಸಭೆಯ ಕಾಯ್ದೆ ಮತ್ತು ನಿಯಮಗಳು ಹಾಗೂ ಸುಪ್ರೀಂ ಕೋರ್ಟ್ ನ ನಿರ್ದೇಶನಗಳಿಗೆ ವಿ ರು ದ್ಧ ವಾಗಿದೆ. ಸುದ್ದಿ ಸಂಸ್ಥೆಯ ವರದಿಯೊಂದರ ಪ್ರಕಾರ ಪ್ರಾಣಿ ರಕ್ಷಣಾ ಕಾರ್ಯಕರ್ತರು ಹೇಳುವಂತೆ ಕತ್ತೆಗಳನ್ನು ತಿನ್ನುವುದು ಪ್ರಕಾಶಂ ಜಿಲ್ಲೆಯ ಸ್ಪುವರ್ಟುಪುರಂ ನಿಂದ ಆರಂಭವಾಯಿತು ಎನ್ನಲಾಗಿದೆ. ಒಂದು ಕಾಲದಲ್ಲಿ ಈ ಪ್ರದೇಶವು ಕಳ್ಳರ ಭದ್ರಕೋಟೆಯಾಗಿತ್ತು ಎನ್ನಲಾಗಿದೆ.

ಇಲ್ಲಿನ ಒಂದು ಕಥೆಯ ಪ್ರಕಾರ ಕತ್ತೆಯ ರಕ್ತವನ್ನು ಕುಡಿಯುವುದರಿಂದ ಮನುಷ್ಯನ ಓಡಾಟದ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಇಲ್ಲಿನವರೇ ಮೊದಲು ಕತ್ತೆಗಳ ಮಾಂ ಸ ವನ್ನು ತಿನ್ನಲು ಆರಂಭ ಮಾಡಿದರು ಎನ್ನಲಾಗಿದೆ. ಗೋಪಾಲ್ ಸುರಬ್ತಲ ಅವರು ಹೇಳುವ ಹಾಗೆ ಇನ್ನೊಂದು ಕಥೆ ಕೂಡಾ ಇದ್ದು ಪ್ರಕಾಶಂ ಜಿಲ್ಲೆಯ ವೆಟೆಪಾಲ್ಲೆಂ ಗ್ರಾಮದ ಕೆಲವು ಮೀನುಗಾರರು ಮೀನುಗಾರಿಕೆಗೆ ಹೋಗುವ ಮುನ್ನ ಸಮುದ್ರ ತೀರದಲ್ಲಿ ಕತ್ತೆಯ ರಕ್ತವನ್ನು ಕುಡಿಯುತ್ತಾರೆ ಎನ್ನಲಾಗಿದೆ. ಅಲ್ಲದೇ ಇತ್ತೀಚಿಗೆ ಒಂದು ಬಾಲಿವುಡ್ ಸಿನಿಮಾದಲ್ಲಿ ಕೂಡಾ ನೆಗೆಟಿವ್ ಪಾತ್ರಗಳು ಕತ್ತೆ ರಕ್ತವನ್ನು ಕುಡಿದ ನಂತರ ವೇಗವಾಗಿ ಓಡುವುದನ್ನು ತೋರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಂಧ್ರದಲ್ಲಿ ಈ ರೀತಿ ಮಾಂ ಸಕ್ಕಾಗಿ ಕತ್ತೆಗಳನ್ನು ಕೊ ಲ್ಲುವುದು ಇದೇ ಮೊದಲಲ್ಲ ಎನ್ನಲಾಗಿದೆ. ಈ ಹಿಂದೆ ಅಂದರೆ 2013 ರಲ್ಲಿ ಕೂಡಾ ಇಲ್ಲಿ ಇಂತಹ ಘಟನೆಗಳು ನಡೆದಿವೆ ಎಂಬುದನ್ನು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಆಗ ಮಹಾರಾಷ್ಟ್ರದಿಂದ ತರಿಸಿಕೊಂಡಿದ್ದ ಎಂಟು ಕತ್ತೆಗಳನ್ನು ರಕ್ಷಣೆ ಮಾಡಲಾಗಿತ್ತು. ಆಗ ಒಂದು ಕತ್ತೆಯನ್ನು ಹತ್ತು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈಗ ಮತ್ತೊಮ್ಮೆ ಅಂತಹುದೇ ಕಾರ್ಯ ಹೆಚ್ಚಿದ್ದು ಕತ್ತೆ ಮಾಂ ಸ ಸೇವನೆಯು ಲೈಂ ಗಿ ಕ ಶಕ್ತಿ ಹೆಚ್ಚಿಸುವುದು ಎನ್ನುವ ನಂಬಿಕೆಯು ಜೊತೆ ಸೇರಿ ಕತ್ತೆಗಳ ಪ್ರಾಣಕ್ಕೆ ಕು ತ್ತ ನ್ನು ತಂದು ಒಡ್ಡಿದೆ.