ಆಕಸ್ಮಿಕವಾಗಿ ಮುಂದೆ ಬಂದ ಚಿರತೆಯನ್ನು ಕಂಡು ಹೃದಯಾ#ಘಾತದಿಂದ ಸ್ಥಳದಲ್ಲೇ ಜೀವ ಬಿಟ್ಟ ನಾಯಿ! ನೋಡಿ ವೈರಲ್ ವಿಡಿಯೋ…….
ಪ್ರಾಣಿನೆ ಇರಲಿ ಮನುಷ್ಯನೆ ಇರಲಿ ಭೇದವಿಲ್ಲದೆ ಎಲ್ಲರೂ ಭಯ ಪಡುವುದು ಸತ್ಯ. ಯಾವುದೋ ಶಾಕ್ ಅಥವಾ ತೀವ್ರ ನೋವು ಆದಾಗ ಹೃದಯಾಘಾ#ತವಾಗುವುದು ಸಾಮಾನ್ಯ ಸಂಗತಿ. ಇದೇ ರೀತಿಯ ಪ್ರಕರಣ ತಿನ್ವಾರಿ ಗ್ರಾಮದಿಂದ ವರದಿಯಾಗಿದೆ. ರಾಜಸ್ಥಾನದ ಜೋಧ್‌ಪುರದಲ್ಲಿ ಚಿರತೆ ನಾಯಿಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿಗೆ ಗಾಬರಿಯಾಗಿ ಹೃದಯಾ#ಘಾತವಾಗಿ ಸ್ಥಳದಲ್ಲೇ ನಾಯಿ ಸಾವನ್ನಪ್ಪಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯಕ್ಕೆ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಚಿರತೆಯನ್ನು ನೋಡಿ ಎರಡು ನಾಯಿಗಳು ಚಿರತೆಯತ್ತ ಓಡಿ ಹೋದವು ಆದರೆ ಅದರ ಮುಂದೆ ಹೋದ ತಕ್ಷಣ ಇದು ಭ#ಯಂಕರ ಪ್ರಾಣಿ ಎಂದು ಅಲ್ಲಿಂದ ಓಡಿ ಹೋಗಲು ಪ್ರಾರಂಭಿಸಿದವು. ಆ ಎರಡು ನಾಯಿಗಳು ಓಡುತ್ತಿದ್ದಾಗ ಅದರ ಹಿಂದೆ ಚಿರತೆ ಸಹ ಬರುತ್ತದೆ. ಅಷ್ಟರಲ್ಲಿ ಆ ಎರಡು ನಾಯಿಗಳಲ್ಲಿಯ ನಾಯಿ ಗಾಬರಿಯಾಗಿ ಕೆಳಗಡೆ ಬಿದ್ದಿತು. ಚಿರತೆ ತನ್ನಷ್ಟಕ್ಕೆ ತಾನು ಅದರ ಬದಿಯಿಂದ ಹಾಯ್ದು ಹೋಗುತ್ತಿದ್ದಾಗ ಕೇಳಗೆ ಬಿದ್ದ ನಾಯಿ ಹೃದಯಾಘಾತದಿಂದ ಒದ್ದಾಡಿ ಸ್ಥಳದಲ್ಲೇ ಜೀವ ಬಿಟ್ಟಿತು. ಅದೃಷ್ಟ ಏನೆಂದರೆ ದೀಪಾವಳಿ ನಿಮಿತ್ತ ಗ್ರಾಮಸ್ಥರು, ಮಕ್ಕಳು ಪಟಾಕಿ ಸಿಡಿಸಿ ಮನೆಯಲ್ಲಿ ಮರಳಿದ್ದರು ಇಲ್ಲದಿದ್ದರೆ ಮತ್ತೊಂದು ಭಾರಿ ಅವ#ಘಡ ಸಂಭವಿಸುವ ಸಾಧ್ಯತೆ ಇತ್ತು.
ವಿಡಿಯೋ ನೋಡಿ
ಊರಲ್ಲಿ ಚಿರತೆ ಬಂದ ಮಾಹಿತಿ ಜನರಿಗೆ ತಿಳಿಯುತ್ತಿದ್ದಂತೆಯೇ ಜನರಲ್ಲಿ ಭ#ಯದ ವಾತಾವರಣ ನಿರ್ಮಾಣವಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೂ ಸ್ಥಳಕ್ಕೆ ತಲುಪಿಲ್ಲ, ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಸಿಟಿವಿಯಲ್ಲಿ ಕಾಣಿಸಿಕೊಂಡ ಪ್ರಾಣಿ ಚಿರತೆ ಆಗಿರಬಹುದು ಎಂದು ಪಶುವೈದ್ಯ ಡಾ.ಶ್ರವಣ್ ಸಿಂಗ್ ರಾಠೋಡ ಹೇಳಿದರು.2019 ರಲ್ಲಿ ಇದೇ ಗ್ರಾಮದಿಂದ ಒಂದು ಚಿರತೆಯನ್ನು ರಕ್ಷಿಸಲಾಗಿತ್ತು. .
ರಾಠೋಡ ಅವರು, ” ಮೊದಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಗ್ ಮಾರ್ಕದ ಮಾಧ್ಯಮದಿಂದ ಇದು ಚಿರತೆ ಇದೆಯೋ ಇಲ್ಲವೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳುತ್ತಾರೆ, ತದನಂತರ ಚಿರತೆಯ ರೇಸ್ಕೂ ಮಾಡಲು ಪ್ರಯತ್ನ ಮಾಡಲಾಗುವದು” ಎಂದು ಹೇಳಿದ್ದಾರೆ. ಈ ಘಟನೆಯನ್ನು CCTV ಯಲ್ಲಿ ಸೆರೆ ಹಿಡಿಯಲಾಗಿದೆ. ಜೋಧಪುರ್ ದಲ್ಲಿಯ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಮಾಣದಲ್ಲಿ ವೈರಲ್ ಆಗುತ್ತಿದೆ.