ಆಕ್ಸಿಸ್ ಬ್ಯಾಂಕಿನಲ್ಲಿ 4 ಕೋಟಿಯ ಕಳ್ಳತನ, ‘ಬೇಲಿಯೇ ಎದ್ದು ಹೊಲ ಮೆಯಿತ್ತಿರುವುದು’ CCTV ಯಿಂದ ಬಯಲು!

ಚಂಡಿಗಡದ ಸೆಕ್ಟರ್ 34 ರಲ್ಲಿ ಇರುವ ಎಕ್ಸಿಸ್ ಬ್ಯಾಂಕಿನಲ್ಲಿ ನಾಲ್ಕು ಕೋಟಿ ರೂಪಾಯಿಗಳ ದರೋಡೆ ಬಿದ್ದ ಘಟನೆಯೊಂದು ವರದಿಯಾಗಿದೆ. ಈ ಘಟನೆಯಿಂದ ಪೊಲೀಸರು ಸಹ ಒಮ್ಮೆಲೆ ದಿಗ್ಭ್ರಾಂತರಾಗಿ ಎಚ್ಚೆತ್ತುಕೊಂಡಿದ್ದಾರೆ. ಆರೋಪಿಗಳನ್ನು ಶೋಧಿಸುವ ಸಲುವಾಗಿ ಪೊಲೀಸರು ತುಂಬಾ ಪ್ರಯತ್ನ ನಡೆಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾರಿಗೂ ಅರೆಸ್ಟ್ ಮಾಡಿಲ್ಲ.

ಸಿಸಿಟಿವಿ ಯಲ್ಲಿ ಕಂಡುಬಂದ ಫುಟೇಜ್ ಗಳು ಮಾತ್ರ ಕಕ್ಕಾಬಿಕ್ಕಿಯಾಗಿಸಿವೆ. ಶೋಧನೆಯ ಸಲುವಾಗಿ ಪೊಲೀಸರು ಬ್ಯಾಂಕಿನಲ್ಲಿಯ ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲಿಸಿದಾಗ ಮಾತ್ರ ಆಘಾತಕಾರಿ ಮಾಹಿತಿ ಕಂಡು ಬಂದಿದೆ. ಬ್ಯಾಂಕಿನಲ್ಲಿಯ ಸೆಕ್ಯೂರಿಟಿ ಗಾರ್ಡ್ ನೇ 4 ಕೋಟಿ ರೂಪಾಯಿಗಳನ್ನು ಕದ್ದು ಪಲಾಯನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕಿನಲ್ಲಿ ಹಣದಿಂದ ತುಂಬಿದ ಒಟ್ಟು 11 ಟ್ರಂಕ್ ಗಳಿದ್ದವು. ಅದರಲ್ಲಿ ಒಂದು ಟ್ರಂಕ್ ಖಾಲಿ ಇದ್ದು ಉಳಿದ 10 ಟ್ರಂಕ್ ಗಳು ಹಣದಿಂದ ತುಂಬಿದ್ದವು. ಸಿಸಿಟಿವಿ ಫುಟೇಜ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಸುಮೀತ್ ಹೆಸರಿನ ವ್ಯಕ್ತಿ ಹಣವನ್ನು ತೆಗೆದುಕೊಂಡು ಪರಾರಿಯಾಗುತ್ತಿರುವ ದೃಶ್ಯ ಸ್ಪಷ್ಟವಾಗಿ ಕಂಡು ಬಂದಿದೆ.

ಕ್ಯಾಮೆರಾ ಮುಂದೆ ಮಾತನಾಡಲು ಪೊಲೀಸರು ನಿರಾಕರಿಸುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೀಡಿಯಾದ ಮುಂದೆ ಮಾತನಾಡಲು ನಿರಾಕರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಎಕ್ಸಿಸ್ ಬ್ಯಾಂಕಿನ ಅಧಿಕಾರಿಗಳು ಸಹ ಇದೇ ರೀತಿಯ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ಕ್ಯಾಮೆರಾದ ಹಿಂದೆ ಅನೇಕ ವಿಷಯಗಳನ್ನು ತೆರೆದಿಟ್ಟಿದ್ದಾರೆ.

ಬ್ಯಾಂಕಿನ ಅಧಿಕಾರಿಗಳು ಏನು ಹೇಳಿದ್ದಾರೆ?

ಪಂಜಾಬ್ ಪೊಲೀಸರ ಕಡೆಯಿಂದ ನಾಲ್ಕು ಜನ ಸೆಕ್ಯೂರಿಟಿ ಗಾರ್ಡ್ ಗಳನ್ನು ಕಳುಹಿಸಲಾಗಿತ್ತು. ನಾಲ್ಕು ಜನ ಸೆಕ್ಯೂರಿಟಿ ಗಾರ್ಡ್ ಗಳಲ್ಲಿ ಸುಮಿತ್ ಹೆಸರಿನ ಒಬ್ಬ ವ್ಯಕ್ತಿಯೂ ಇದ್ದನು. ರವಿವಾರದಂದು ಸುಮಿತನಿಗೆ ಡ್ಯೂಟಿ ನೀಡಲಾಗಿತ್ತು. ಅಧಿಕಾರಿಗಳ ಪ್ರಕಾರ ಸೆಕ್ಟರ್ 34 ರಲ್ಲಿ ಇರುವ ಎಕ್ಸಿಸ್ ಬ್ಯಾಂಕಿನ ಎಟಿಎಂನಲ್ಲಿ ಸುಮಿತ್ ನು ಯಾವತ್ತು ಹಣವನ್ನು ತುಂಬಲು ಬರುತ್ತಿದ್ದನಂತೆ.

ಪೊಲೀಸರ ತನಿಖೆ ನಡೆದಿದೆ…

ಈ ಪ್ರಕರಣದಲ್ಲಿ ಪೊಲೀಸರು ಸೆಕ್ಯೂರಿಟಿ ಗಾರ್ಡ್ ನ ವಿರೋಧದಲ್ಲಿ ಆರೋಪವನ್ನು ದಾಖಲಿಸಿದ್ದಾರೆ. ಆತನು ವಾಸಿಸುವ ಮನೆಯ ಮೇಲೆ ಪೊಲೀಸರು ಅನೇಕ ಸಲ ರೇಡ್ ಹಾಕಿದ್ದಾರೆ. ಆದರೆ ಪೊಲೀಸರಿಗೆ ಮಾತ್ರ ಅಲ್ಲಿ ನಿರಾಶೆಯೇ ಕಾದಿತ್ತು. ಆದರೆ ಪೊಲೀಸರು ಮಾತ್ರ ಸದ್ಯಕ್ಕೆ ಸುಮಿತನನ್ನು ಬಂಧಿಸಲು ಎಲ್ಲ ಕಡೆಗೆ ಬಲೆಯನ್ನು ಬೀಸಿದ್ದಾರೆ. ಈ ಪ್ರಕರಣದಲ್ಲಿ ಕಳ್ಳತನವನ್ನು ಸುಮಿತ್ ಒಬ್ಬನೇ ಮಾಡಿದ್ದಾನೆ ಅಥವಾ ಇನ್ನೂ ಅವನ ಜೊತೆಗೆ ಬೇರೆ ಯಾರಾದರೂ ಇದ್ದಾರೆ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ಜೋರಾಗಿ ನಡೆಸಿದ್ದಾರೆ.