ಆಗರ್ಭ ಶ್ರೀಮಂತ, ಸಾವಿರಾರು ಕೋಟಿ ರೂಪಾಯಿಗಳ ಒಡೆಯನ ಕೈಯಲ್ಲಿ ಪಾರ್ಲೆ ಬಿಸ್ಕೆಟ್! ಹವ್ಯಾಸ ನೋಡಿ ಎಂಥದ್ದು?
ಪಾರ್ಲೆ-ಜಿ ಬಿಸ್ಕೆಟ್ ನ್ನು ಭಾರತದ ಪ್ರತಿಯೊಂದು ಮನೆ ಮನೆಯೂ ಗುರುತಿಸುತ್ತದೆ. ಇದರ ಐದು ರೂಪಾಯಿ ಪ್ಯಾಕೆಟ್ ದೇಶದೆಲ್ಲೆಡೆಯೂ ದಾಖಲೆಯ ರೀತಿಯಲ್ಲಿ ಖರೀದಿಯಾಗುತ್ತದೆ. 2020 ರ ಲಾಕ್ ಡೌನ್ ನಲ್ಲಿ ಅಂತೂ ಪಾರ್ಲೆ-ಜಿ ಬಿಸ್ಕೆಟ್ ದಾಖಲೆಯ ಮಾರಾಟವಾಗಿತ್ತು.
ಕಾಲದ ಗರ್ಭದಲ್ಲಿ ಸಿಕ್ಕು, ಸಮಯಕ್ಕೆ ತಕ್ಕಂತೆ ಅದರ ಆಕಾರ, ಬೆಲೆ ಮತ್ತು ಪ್ಯಾಕೇಜ್ ಎಲ್ಲವೂ ಬದಲಾಗುತ್ತಾ ಹೋದರೂ ಅದರ ಟೆಸ್ಟ್ ಮಾತ್ರ ಇಂದಿನವರೆಗೂ ಸ್ವಲ್ಪವೂ ಬದಲಾಗಿಲ್ಲ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಕೋಟ್ಯಾಧೀಶರಾದ ಶ್ರೀಮಂತ ಉದ್ಯಮಿ ರಾಹುಲ್ ಭಾಟಿಯಾ ಅವರು ಏರೋಪ್ಲೇನ್ ನಲ್ಲಿ ಪ್ರವಾಸ ಮಾಡುತ್ತಿದ್ದಾರೆ. ತಮ್ಮ ಪ್ರವಾಸದ ಮಧ್ಯೆ ಅವರು ಚಹಾದ ಜೊತೆಗೆ ಐದು ರೂಪಾಯಿಯ ಬಿಸ್ಕೆಟ್ ತಿನ್ನುತ್ತ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಟೆಸ್ಟ್ ಜೊತೆಗೆ ರಾಜಿ ಇಲ್ಲ…
ರಾಹುಲ್ ಭಾಟಿಯಾ ಅವರು ಬಿಸ್ಕೆಟ್ ನ್ನು ಚಹಾದಲ್ಲಿ ಅದ್ದಿ ತಿನ್ನುತ್ತಿದ್ದಾರೆ. ಈ ಒಂದು ಫೋಟೋದಿಂದಲೇ ಗೊತ್ತಾಗುತ್ತದೆ ಪಾರ್ಲೆ-ಜಿ ಬಿಸ್ಕೆಟ್ ನ ಟೆಸ್ಟ್ ಎಂತಹದಿದೆ ಎಂದು. ಇದು ಮೊದಲಿನಿಂದಲೂ ಬಡವರಿಂದ ಹಿಡಿದು ಶ್ರೀಮಂತರಿಗೂ ಮೋಡಿ ಮಾಡಿದೆ.
ಇನ್ನು ರಾಹುಲ್ ಭಾಟಿಯಾ ಅವರ ಬಗ್ಗೆ ಹೇಳಬೇಕಾದರೆ ಇವರು ತುಂಬಾ ಸರಳವಾದ ವ್ಯಕ್ತಿಮತ್ವ ಮತ್ತು ಹೊಂದಿದ್ದಾರೆ. ಫೋರ್ಬ್ಸ್ ನೀಡಿದ ರಿಪೋರ್ಟ್ ಪ್ರಕಾರ, ಇವರ ರಿಯಲ್ ಟೈಮ್ ನೆಟ್ವರ್ಥ ಸುಮಾರು 38 ಸಾವಿರ ಕೋಟಿ ರೂಪಾಯಿಗಳಷ್ಟು ಇದೆ.