ಆಟೋದ ಮೇಲೆ 1 ಲಕ್ಷ ರೂ. ಲ್ಲಿ ಐಷಾರಾಮಿ ಮನೆಯನ್ನು ನಿರ್ಮಿಸಿದ ವ್ಯಕ್ತಿ; ಆನಂದ ಮಹಿಂದ್ರ ಅಂತಾರೆ ” ಬುಲೆರೋ ಪಿಕ್ ಅಪ್ ಬಳಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು!”

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಒಂದು ವಿಡಿಯೋದ ಬಗ್ಗೆ ತುಂಬಾ ಚರ್ಚೆಯಾಗುತ್ತಿಗುತ್ತಿದೆ. ಕಾರಣ ಈ ವೀಡಿಯೊ ಭಾರತದ ಅಗ್ರ ಉದ್ಯಮಿ ಆನಂದ ಮಹೀಂದ್ರಾ ಅವರು ಶೇರ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಒಂದು ಸುಂದರವಾದ ಮನೆಯನ್ನು ನೋಡಬಹುದು. ಇದರಲ್ಲೇನು ವಿಶೇಷ ಎನ್ನುತ್ತೀರಾ? ಹೌದು ವಿಶೇಷವಿರುವದು ಅಲ್ಲಿಯೇ. ಕಾರಣ ಈ ಮನೆಯನ್ನು ಆತ ಆಟೋ ಟೆಂಪೋದಲ್ಲಿ ತಯಾರಿಸಿದ್ದಾನೆ. ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಈ ಮನೆಯಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳಿವೆ.

ಇದನ್ನು ಚೆನ್ನೈ ನಲ್ಲಿರುವ ಅರುಣ್ ಪ್ರಭು ಹೆಸರಿನ ವ್ಯಕ್ತಿ ತನ್ನ ಮನೆಯಲ್ಲಿಯೇ ಆಟೋ ಟೆಂಪೋದಲ್ಲಿ ಈ ರೀತಿಯ ಆವಿಷ್ಕಾರವನ್ನು ಮಾಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಯಾವತ್ತೂ ಆಕ್ಟಿವ್ ಆಗಿರುವ ಆನಂದ ಮಹೀಂದ್ರಾ ಅವರಿಗೆ ಇದು ತುಂಬಾ ಇಷ್ಟವಾಗಿದೆ. ಆದ್ದರಿಂದ ಆನಂದ ಅವರು ಇದರ ಜೊತೆಗೆ ಆತನ ಫೋಟೋವನ್ನು ಸಹ ಶೇರ್ ಮಾಡಿ ಅದರಲ್ಲಿ ಹೀಗೆ ಬರೆದಿದ್ದಾರೆ. ಅರುಣ್ ಅವರು ಚಿಕ್ಕ ಜಾಗದಲ್ಲಿ ತನ್ನ ಶಕ್ತಿ ತೋರಿಸಿದ್ದಾನೆ. ಕೊರೋನಾ ಮಹಾಮಾರಿಯ ನಂತರ ಜನರಿಗೆ ಸುತ್ತಾಡಲು ಈ ರೀತಿಯ ಮನೆ ನಿಜಕ್ಕೂ ತುಂಬಾ ಟ್ರೆಂಡ್ ಆಗಿ ಸಿದ್ಧವಾಗುತ್ತದೆ ಎಂದಿದ್ದಾರೆ. ಮಹೀಂದ್ರಾ ಬೋಲೇರೋ ಪಿಕ್ಅಪ್ ನಲ್ಲಿ ಅರುಣ್ ಈ ರೀತಿಯ ಚಮತ್ಕಾರ ಏನನ್ನಾದರೂ ಮಾಡುತ್ತಾರಾ ಎಂಬುದು ನನಗೆ ತಿಳಿದುಕೊಳ್ಳುವದಿದೆ ಆದ್ದರಿಂದ ದಯವಿಟ್ಟು ಆತನನ್ನು ನನಗೆ ಒಮ್ಮೆ ಯಾರಾದರೂ ಭೇಟಿ ಮಾಡಿಸಿ ಕೊಡುತ್ತೀರಾ ಎಂದು ಬರೆದಿದ್ದಾರೆ.

ಅರುಣ್ ಅವರು ಇದನ್ನು 1 ಲಕ್ಷ ₹ ಗಳನ್ನು ಖರ್ಚು ಮಾಡಿ ತಯಾರಿಸಿದ್ದಾರೆ. ಈ ಮನೆಯನ್ನು ಎಲ್ಲಿಗೂ ತೆಗೆದುಕೊಂಡು ಹೋಗಬಹುದು. ಕಾರಣ ಎಲ್ಲ ಸೌಲಭ್ಯಗಳಿಂದ ಪರಿಪೂರ್ಣವಾಗಿದೆ. ಮನೆಯ ಮೇಲೆ ಬಟ್ಟೆಗಳನ್ನು ಸಹ ಒಣಗಿಸಲು ಹಾಕಬಹುದು.

ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಕೂಡಿಸಿರುವದರಿಂದ ಮನೆಗೆ ಬೇಕಾಗುವ ಬೆಳಕಿನ ವ್ಯವಸ್ಥೆಯಾಗಿದ್ದು ಅದು ಸೋಲಾರ್ ಪವರ್ ನ್ನು ಉಳಿತಾಯ ಸಹಿತ ಮಾಡಿಕೊಂಡು ಇಟ್ಟುಕೊಳ್ಳುತ್ತದೆ. ಕಿಚನ್ ಜೊತೆಗೆ ಸಾಮಾನ್ಯ ಮನೆಯಲ್ಲಿರುವ ಎಲ್ಲ ಸೌಲಭ್ಯಗಳು ಇಲ್ಲಿ ಲಭ್ಯವಿವೆ.