ಆಟೋ ಚಾಲಕನ ತಲೆ ಮೇಲೆ ಬಿತ್ತು ಹಲಸು. ಉಪಚಾರಕ್ಕಾಗಿ ಆಸ್ಪತ್ರೆಗೆ ಒಯ್ದಾಗ ರಿಪೋರ್ಟ್ ನಲ್ಲಿ ಕಾದಿತ್ತು ಆಶ್ಚರ್ಯ!

ಕಾರಸಗೋಡ್: ದೇಶದಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಿವೆ. ಈಗ ಪಟ್ಟಣದಿಂದ ಗ್ರಾಮದವರೆಗೂ ಕರೋನಾ ರೋಗಿಗಳು ಕಂಡು ಬರುತ್ತಿದ್ದಾರೆ. ಅಲ್ಲದೆ ಕೆಲವೊಬ್ಬರಿಗೆ ಕರೋನಾ ಸೋಂಕು ತಗಲಿದರೂ ಸಹ ಅವರಲ್ಲಿ ಯಾವುದೇ ಪ್ರಕಾರದ ಕರೋನಾ ಲಕ್ಷಣಗಳು ಕಂಡು ಬರುತ್ತಿಲ್ಲ, ಅಂತಹ ಸುಮಾರು ಪ್ರಕರಣಗಳು ಸಹ ಕಂಡು ಬಂದಿವೆ. ಅಂತಹ ವ್ಯಕ್ತಿಯನ್ನು ಗುರುತಿಸುವುದು ಹೆಚ್ಚು ಕಷ್ಟಕರವಾಗುತ್ತಿದೆ.

ಕೇರಳದ ಕಾರಸ್‌ಗೋಡ್‌ನಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಈ ಘಟನೆಯಿಂದಾಗಿ ಅಲ್ಲಿಯ ಪ್ರಶಾಸನವೂ ಸಹ ಆಶ್ಚರ್ಯ ಚಕಿತವಾಗಿದೆ. ಅದೇನೆಂದರೆ, ಕಾರಸ್‌ಗೋಡ್‌ನಲ್ಲಿ ಒಂದು ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ವ್ಯಕ್ತಿ ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಮರದಲ್ಲಿಯ ಹಲಸಿನ ಹಣ್ಣು ತೆಗೆಯುವಾಗ ತಲೆಯ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಗಾಯ ಗಂಭೀರವಾಗಿರುವುದರಿಂದ ವ್ಯಕ್ತಿಯನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ, ಚಿಕಿತ್ಸೆಯ ಸಮಯದಲ್ಲಿ ಅವರಿಗೆ ಕೋರೊನಾ ಸೋಂಕು ತಗಲಿದೆ ಎಂಬುದು ರಿಪೋರ್ಟ್ ನಲ್ಲಿ ತಿಳಿಯಿತು. ಅವರು ಯಾವುದೇ ಊರಿಗೆ ಪ್ರವಾಸ ಮಾಡಿಲ್ಲ ಆದರೂ ಸಹ ಅವರಿಗೆ ಕೋರೊನಾ ಸೋಂಕು ತಗಲಿದೆ ಎಂದು ಅಲ್ಲಿಯ ಸ್ಥಾನಿಕ ಜನರಿಂದ ತಿಳಿದು ಬಂದಿದೆ. ಈಗ ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಇಂಥ ಪ್ರಕರಣಗಳಿಂದ ಅಲ್ಲಿಯ ಪ್ರಶಾಸನಕ್ಕೆ ದೊಡ್ಡ ಸಮಸ್ಯೆ ನಿರ್ಮಾಣವಾಗುತ್ತಿದೆ.